ಕನ್ನಡ ವಾರ್ತೆಗಳು

ಬೈಂದೂರಿನಲ್ಲಿ ಸುಂಟರಗಾಳಿ ಇಫೆಕ್ಟ್; ಮನೆ ಸಂಪೂರ್ಣ ಹಾನಿ| ಅಪಾಯದಿಂದ ಮನೆಮಂದಿ ಪಾರು | ಅಂದಾಜು 2 ಲಕ್ಷ ಹಾನಿ

Pinterest LinkedIn Tumblr

ಕುಂದಾಪುರ: ಬೈಂದೂರು ಗ್ರಾಮದ ಕಲ್ಮಕ್ಕಿಯಲ್ಲಿ ಸಂಜೆ  ಸುಮಾರಿಗೆ ಬೀಸಿದ ಭಾರೀ ಸುಂಟರಗಾಳಿಗೆ ನೆಲ್ಸನ್ ಪಿ.ಜೆ. ಎಂಬುವರ ಮನೆ ಸಂಪೂರ್ಣ ಧರಾಶಾಯಿಯಾಗಿದೆ.

BYN_House Damage-2 BYN_House Damage-2 (1) BYN_House Damage-2 (2)

ನೆಲ್ಸನ್ ಅಂಗವಿಕಲರಾದರೂ ತಮ್ಮ ಜೀವನಕ್ಕೆ ಕೃಷಿಯನ್ನೆ ನಂಬಿ ಬದುಕುತ್ತಿದ್ದು, ಈಗ ವಾಸದ ಮನೆಬಿದ್ದು ಸಮಾರು 2 ಲಕ್ಷಕ್ಕೂ ಹೆಚ್ಚಿನ ಹಾನಿಯಾಗಿದ್ದು, ಬಡ ಕುಟುಂಬಕ್ಕೆ ಸಿಡಿಲೆರಗಿದಂತಾಗಿದೆ. ಮನೆಯ ಕೋಣೆಯಲ್ಲಿದ್ದ ಮಡದಿ ಸ್ವಲ್ಪದರಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಾಲಾ ಸಮಯವಾದ್ದರಿಂದ ಮಕ್ಕಳು ಮನೆಯಲ್ಲಿಲಿಲ್ಲ. ಹಾಗಾಗಿ ಯಾವುದೇ ಸಾವು-ನೋವು ಸಂಭವಿಸಲಿಲ್ಲ. ಕಳೆದ ವರ್ಷ ಇವರ ಮನೆ ವಿದ್ಯುತ್ ಶಾರ್ಟ್ ಸರ್‍ಕ್ಯೂಟ್‌ನಿಂದಾಗಿ ಬೆಂಕಿಗಾಹುತಿಯಾಗಿತ್ತು. ಈ ಬಾರಿ ಸಾಲಮಾಡಿ ಪುನ: ಮನೆಕಟ್ಟಿದ್ದೂ ಬಿರುಗಾಳಿಗೆ ಸಿಕ್ಕಿ ನಾಶವಾಗಿದೆ. ಮಳೆಗಾಲವಾದ್ದರಿಂದ ದಿನ ಕಳೆಯುವುದು ಕಷ್ಟವಾಗಿದೆ.

ಸ್ಥಳಕ್ಕಾಗಮಿಸಿದ ಬೈಂದೂರು ಗ್ರಾಮ ಲೆಕ್ಕಿಗ ಮಂಜು ಹಾನಿಯ ನಷ್ಟದ ವರದಿ ಮಾಡಿದ್ದಾರೆ. ಗ್ರಾಪಂ ಸದಸ್ಯ ಬಿ. ರಾಘವೇಂದ್ರ ಸ್ಥಳದಲ್ಲಿ ಇದ್ದು, ನೊಂದ ಕುಟುಂಬಕ್ಕೆ ನೆರವಾಗುತ್ತಿದ್ದಾರೆ.

Write A Comment