ಕನ್ನಡ ವಾರ್ತೆಗಳು

ಪ್ರಕ್ಷುಬ್ಧಗೊಂಡ ಕಡಲು: ತಡೆಗೋಡೆ ಕಲ್ಲುಗಳು ಸೇರುತಿದೆ ಸಾಗದರದ ಒಡಲು..!

Pinterest LinkedIn Tumblr

ಕುಂದಾಪುರ: ಕಳೆದೊಂದು ವಾರದಿಂದ ತ್ರಾಸಿ, ಮರವಂತೆ, ಬೈಂದೂರಿನ ಹಲವೆಡೆ ಕಡಲ್ಕೊರೆತ ಬಿಗುಡಾಯಿಸಿದೆ. ಕಡಲ್ಕೊರೆತದಿಂದಾಗಿ ತಡೆಗೋಡೆಗೆ ಹಾಕಲಾದ ದೊಡ್ಡದೊಡ್ಡ ಕಲ್ಲುಗಳು ಸಮುದ್ರದ ಅಲೆಗಳ ಹೊಡೆತಕ್ಕೆ ಸಿಕ್ಕು ಸಮುದ್ರದದ ಪಾಲಾಗುತ್ತಿದೆ.

ಹಲವು ಮರಗಳು ಧರಶಾಹಿ: ಇನ್ನು ಸಮುದ್ರ ತೀರದ ಹಲವು ಮರಗಳು ಈಗಾಗಲೇ ಧರೆಗುರುಳುತ್ತಿದೆ. ಅಲ್ಲದೇ ಸಮುದ್ರ ತೀರದ ಮನೆಗಳೂ ಕೂಡ ಆತಮ್ಕದಲ್ಲಿದ್ದು ಸ್ಥಳಿಯರು ಭೀತಿಯಿಂದ ದಿನದೂಡುವಂತಾಗಿದೆ.

Maravanthe_Kadlkoreta_Problem (2)

Maravanthe_Kadlkoreta_Problem (11)

Maravanthe_Kadlkoreta_Problem (7)

Maravanthe_Kadlkoreta_Problem (5)

Maravanthe_Kadlkoreta_Problem (6)

Maravanthe_Kadlkoreta_Problem (8)

Maravanthe_Kadlkoreta_Problem (3)

Maravanthe_Kadlkoreta_Problem

Maravanthe_Kadlkoreta_Problem (1)

ಸಂಸದ, ಶಾಸಕರ ಭೇಟಿ: ಮರವಂತೆ ಹಾಗೂ ತ್ರಾಸಿ ಕಡಲ್ಕೊರೆತ ಪ್ರದೆಶಕ್ಕೆ ಸೋಮವಾರ ಮಧ್ಯಾಹ್ನದ ಸುಮಾರಿಗೆ ಕ್ಷೇತ್ರದ ಸಂಸದ ಬಿ.ಎಸ್. ಯಡಿಯೂರಪ್ಪ ಭೇಟಿ ನೀಡಿ ಸ್ಥಳಿಯರಿಂದ ಸಮಸ್ಯೆಗಳನ್ನು ಆಲಿಸಿದರು. ಇದೇ ಸಂದರ್ಭ ಸಂಬಂದಪಟ್ಟ ಇಂಜಿನಿಯರ್ ಜೊತೆ ಮಾತನಾಡಿದ ಅವರು ಇದಕ್ಕೊಂದು ಶಾಶ್ವತ ಪರಿಹಾರ ಕ್ರಮವನ್ನು ಕೈಗೊಳ್ಳುವಂತೆ ಸೂಚಿಸಿದರು. ಅಲ್ಲದೇ ಈ ಭಾಗದ ಕಡಲ್ಕೊರೆತ ಪ್ರದೇಶಕ್ಕೆ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿಯವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Maravanthe_Kadlkoreta_Problem (4)

 

Maravanthe_Kadlkoreta_Problem (10)

Maravanthe_Kadlkoreta_Problem (9)

ಶಾಶ್ವತ ಪರಿಹಾರ ಅಗತ್ಯ: ಪ್ರತಿ ಬಾರೀ ಮಳೆಗಾದಲ್ಲಿ ಇಲ್ಲಿ ಕಡಲ್ಕೊರೆತವಾಗುತ್ತಿದೆ. ನಿತ್ಯ ಭಯದಲ್ಲಿಯೇ ಬದುಕಬೇಕಾದ ಅನಿವಾರ್ಯ ಪರಿಸ್ಥಿತಿ ನಮ್ಮದು. ಪ್ರತಿವರ್ಷ ಕಡಲ್ಕೊರೆತ ಉಂಟಾದಗಾಲೂ ಕೂಡ ಜನಪ್ರತಿನಿಧಿಗಳು ಬರುತ್ತಾರೆ, ಹೋಗುತ್ತಾರೆ, ಒಂದಷ್ಟು ಆಶ್ವಾಸನೆಯನ್ನೂ ಕೂಡ ಕೊಡ್ತಾರೆ, ಆದರೇ ಈವರೆಗೂ ಇದಕ್ಕೊಂದು ಶಾಶ್ವತ ಪರಿಹಾರವನ್ನು ಮಾಡಿಲ್ಲ. ಕಡಲ್ಕೊರೆತ ಉಂಟಾದ ಬಳಿಕ ಅದರ ವೀಕ್ಷಣೆಗೆ ಬರುವ ಅಧಿಕಾರಿಗಳು ಮಳೆಗಾಲದ ಮೊದಲೇ ಈ ಭಾಗಕ್ಕೆ ಬಂದು ಇಲ್ಲಿನ ವಸ್ತುಸ್ಥಿತಿಯನ್ನು ಗಮನಿಸಿ ಇದಕ್ಕೆ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಬೇಕೆ ಎಂದು ಸ್ಥಳಿಯ ನಿವಾಸಿ ನಿತ್ಯಾನಂದ.

ಒಟ್ಟಿನಲ್ಲಿ ಕಡಲ್ಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ ಮಾತ್ರ ಮರಿಚಿಕೆಯೆನ್ನುವುದು ಈ ಭಾಗದ ಜನರಾಡಿಕೊಳ್ಳುವ ಮಾತುಗಳು.

Write A Comment