ಅಂತರಾಷ್ಟ್ರೀಯ

ಫ್ರಾನ್ಸ್‌ನ ಆನಿಮೇಶನ್ ಸಮ್ಮೇಳನ “ಅನ್ನೆಸ್ಸಿ 2015” ಕ್ಕೆ ಪ್ರತಿನಿಧಿಯಾಗಿ ವಿವೇಕ್ ಬೋಳಾರ್ ಅಯ್ಕೆ.

Pinterest LinkedIn Tumblr

Vivek_Bolar_animantion

ಮಂಗಳೂರು,ಜೂನ್.15: ಮಂಗಳೂರಿನ ಬ್ಲೂಪಿಕ್ಸಲ್ ಅನಿಮೇಶನ್ ಸ್ಟುಡಿಯೋ ಪ್ರೈವೇಟ್ ಲಿ. ಸಂಸ್ಥೆಯ ಸ್ಥಾಪಕ ಹಾಗೂ ನಿರ್ದೇಶಕರಾದ ಶ್ರೀ ವಿವೇಕ್ ಬೋಳಾರ್‌ರವರು ಜೂನ್ 15 ರಿಂದ 20ರವರೆಗೆ ಫ್ರಾನ್ಸ್ ದೇಶದ ಅನ್ನೆಸಿಯಲ್ಲಿ ನಡೆಯುತ್ತಿರುವ “ಅನ್ನೆಸಿ ಇಂಟರ್‌ನ್ಯಾಷನಲ್ ಅನಿಮೇಟೆಡ್ ಫಿಲ್ಮ್ ಫೆಸ್ಟಿವಲ್ ಅಂಡ್ ಮಾರ್ಕೇಟಿಂಗ್” (ಎಂ.ಐ.ಎಫ್.ಎ) ಸಮ್ಮೇಳನ “ಅನ್ನೆಸ್ಸಿ 2015”ರಲ್ಲಿ “ಅಸೋಶಿಯೇಷನ್ ಆಫ್ ಬೆಂಗಳೂರು ಅನಿಮೇಷನ್ ಇಂಡಸ್ಟ್ರಿ” (ಅಬಯ್) ನಿಯೋಗದ ಪ್ರತಿನಿಧಿಯಾಗಿ ಭಾಗವಹಿಸುತ್ತಿದ್ದಾರೆ.

ಅನಿಮೇಶನ್ ನೀತಿ ಕುರಿತು ಸರ್ಕಾರ, ಶಿಕ್ಷಣ ಸಂಸ್ಥೆಗಳು ಹಾಗೂ ಅನಿಮೇಶನ್ ಉದ್ಯಮದ ನಡುವೆ “ನೋಡಲ್ ಕನೆಕ್ಟರ್” ಆಗಿರುವ “ಅಬಯ್” ABAI ಸಂಘಟನೆಯು ಕರ್ನಾಟಕ ರಾಜ್ಯದ ಅನಿಮೇಶನ್, ವಿಜುವಲ್ ಎಫೆಕ್ಟ್, ಗೇಮಿಂಗ್ ಹಾಗೂ ಕಾಮಿಕ್ಸ್ (AVGC) ನೀತಿ ಕುರಿತು ಸರ್ಕಾರಕ್ಕೆ ವರದಿ ನೀಡುವ ಹಾಗೂ ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ಹೊಂದಿದೆ.

ಶ್ರೀ ವಿವೇಕ್ ಬೋಳಾರ್‌ರವರ ತಂಡ ತಯಾರಿಸಿದ “ಅಂಡೆ ಪಿರ್ಕಿ” ಅನಿಮೇಟೆಡ್ ಚಿತ್ರವು ಕಳೆದ ಮಾರ್ಚ್‌ನಲ್ಲಿ ಫೆಡರೇಶನ್ ಅಫ್ ಇಂಡಿಯನ್ ಛೇಂಬರ್ಸ್ ಅಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ಮುಂಬೈಯಲ್ಲಿ ಆಯೋಜಿಸಿದ್ದ “ಫಿಕ್ಕಿ ಪ್ರೇಮ್ಸ್ 2015 “ ಉತ್ಸವದಲ್ಲಿ ಬೆಸ್ಟ್ ಅನಿಮೇಟೆಡ್ ಟಿ.ವಿ. ಎಪಿಸೋಡ್ ವಿಭಾಗದ ರಾಷ್ಟ್ರೀಯ ಹಾಗೂ ಅಂತರ ರಾಷ್ಟ್ರೀಯ ಎರಡೂ ಪ್ರಶಸ್ತಿಯನ್ನು ಪಡೆದು ದಾಖಲೆ ನಿರ್ಮಿಸಿತ್ತು. ಇವರು ಬಿ.ಎಸ್.ಎನ್.ಎಲ್.ನ ನಿವೃತ್ತ ಉದ್ಯೋಗಿ ಶ್ರೀಮತಿ ಪದ್ಮಾವತಿ ಎಂ. ಪುತ್ರನ್‌ರವರ ಪುತ್ರ.

Write A Comment