ಕನ್ನಡ ವಾರ್ತೆಗಳು

ಕಾಂಗ್ರೆಸ್‌ ವಿರುದ್ಧ ಎಸ್‍ಡಿಪಿಐ ವಾಗ್ದಾಳಿ

Pinterest LinkedIn Tumblr

Sdpi_aganst_congrs_1

ಮಂಗಳೂರು,ಜೂನ್.02 : ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಎಸ್‍ಡಿಪಿಐ ಬೆಂಬಲಿತ 274 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಇದರಿಂದ ತನ್ನ ಸೋಲನ್ನು ಖಚಿತ ಪಡಿಸಿಕೊಂಡಿರುವ ಕಾಂಗ್ರೆಸ್ ಪಕ್ಷವು ಜಿಲ್ಲೆಯಲ್ಲಿ ನೆಲೆ ಕಳೆದುಕೊಳ್ಳುವ ಭೀತಿಯಿಂದ ಹೀನ ಕೃತ್ಯಕ್ಕೆ ಇಳಿದಿದೆ ಎಂದು ಎಸ್‍ಡಿಪಿಐ ಆರೋಪಿಸಿದೆ.

Sdpi_aganst_congrs_2

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಎಸ್‍ಡಿಪಿಐ ಮುಖಂಡ ಅನ್ವರ್ ಸಾದಾತ್, ಜಿಲ್ಲೆಯಲ್ಲಿ ಹಲವು ಪ್ರದೇಶಗಳಲ್ಲಿ ಎಸ್‍ಡಿಪಿಐ ಕಾರ್ಯಕರ್ತರ ಮೇಲೆ ಮುಗಿಬೀಳುತ್ತಿರುವ ಕಾಂಗ್ರೆಸ್‌, ಸುಳ್ಳು ದೂರುಗಳನ್ನು ದಾಖಲಿಸುತ್ತಿರುವುದು ಮತ್ತು ಗಲಭೆಗಳಿಗೆ ಪ್ರಚೋದನೆ ನೀಡುತ್ತಿದೆ ಎಂದು ಆರೋಪಿಸಿದರು.

ಗ್ರಾಮ ಪಂವಾಯತ್ ಚುನಾವಣೆಯ ಪಲಿತಾಂಶದ ದಿನ ತನ್ನ ಕೆಟ್ಟ ಚಾಲಿಯನ್ನು ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಮುಂದುವರಿಸುವ ಸಾಧ್ಯತೆ ಇದ್ದು, ಇಲ್ಲಿಯ ಶಾಂತಿಯನ್ನುಕದಡಿ ವಿವಿಧ ವರ್ಗಗಳ ಮಧ್ಯೆ ರಾಜಕೀಯ ಘರ್ಷಣೆಯನ್ನು ಉಂಟುಮಾಡುವ ಲಕ್ಷಣಗಳು ಇರುವಿದರಿಂದ ಜಿಲ್ಲಾಡಳಿತ ಹಾಗೂ ಪೊಳಿಸ್ ಇಲಾಖೆಯ ಈ ಬಗ್ಗೆ ಸೂಕ್ತ ಬಂದೋಬಸ್ತು ಮತ್ತು ಕಾನೂನು ಕ್ರಮಗಳನ್ನು ಕೈಗೊಳ್ಳಬೇಕಾಗಿ ಎಂದು ಈ ಸಂಧರ್ಭದಲ್ಲಿ ಅವರು ಹೇಳಿದರು.

Write A Comment