ಕನ್ನಡ ವಾರ್ತೆಗಳು

ಸಿಇಟಿ ಫಲಿತಾಂಶ: ಉಡುಪಿ ಹಾಗೂ ದ.ಕ ಜಿಲ್ಲೆಗೂ ಮೂರು ರ್‍ಯಾಂಕ್

Pinterest LinkedIn Tumblr

 Dk_udupi_CET

ಮಂಗಳೂರು,ಜೂನ್.02:  ಈ ಬಾರಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಅತ್ಯುತ್ತಮ ಸಾಧನೆ ದಾಖಲಿಸಿತ್ತು. ಪಿಯುಸಿಯಲ್ಲಿ ಪ್ರಥಮ ಹಾಗೂ ದ್ವಿತೀಯ ಮತ್ತು ತೃತೀಯ ಸ್ಥಾನಗಳು ಅನುಕ್ರಮವಾಗಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಪಾಲಾಗಿತ್ತು. ಅದೇ ರೀತಿ ಎಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ, ಆರ್ಕಿಟೆಕ್ಟ್ ಸೇರಿದಂತೆ ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯ ಫಲಿತಾಂಶದಲ್ಲೂ ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳು ಮೊದಲ 10 ರ್‍ಯಾಂಕ್‌ಗಳಲ್ಲಿ 3ಜನ ಸಾದನೆಗಳಿಸಿದ್ದಾರೆ.

ಎಂಜಿನಿಯರಿಂಗ್ ವಿಭಾಗದಲ್ಲಿ ಕೋಟ ವಿವೇಕ ಪ.ಪೂ. ಕಾಲೇಜಿನ ಶಿಶಿರ್ ಜಿ. 6ನೆ ರ್‍ಯಾಂಕ್.ಗಳಿಸಿದ್ದರೆ, ವೈದ್ಯಕೀಯ ವಿಭಾಗದಲ್ಲಿ ಉಡುಪಿ ಪೂರ್ಣಪ್ರಜ್ಞ ಪ.ಪೂ ಕಾಲೇಜಿನ ಸುದೀಪ್ ಜಿ.ಸಿ. 8ನೆ ರ್‍ಯಾಂಕ್ ಆರ್ಕಿಟೆಕ್ಟ್ ವಿಭಾಗದಲ್ಲಿ ಕಾರ್ಕಳ ಜ್ಞಾನ ಸುಧಾ ಪದವಿ ಪೂರ್ವ ಕಾಲೇಜಿನ ಅಂಜಲಿ ವೇಣುಗೋಪಾಲ್ 4ನೆ ರ್‍ಯಾಂಕ್ ಸಂಪಾದಿಸಿದ್ದಾರೆ.

ಇವರಲ್ಲದೆ ಪೂರ್ಣಪ್ರಜ್ಞ ಪ.ಪೂ ಕಾಲೇಜಿನ ಕೌಶಿಕ್‌ಎಸ್. ಕಲ್ಮಾಡಿ ಎಂಜಿನಿಯರಿಂಗ್‌ನಲ್ಲಿ 54ನೆ ಸ್ಥಾನ ಪಡೆದಿದ್ದರೆ, ಸಂದೀಪ್ ರಾವ್ ಕೊರಡ್ಕಲ್ ಮೆಡಿಕಲ್‌ನಲ್ಲಿ 85ನೆ ರ್‍ಯಾಂಕ್‌ಗಳಿಸಿದ್ದಾರೆ. ಎಂಜಿಎಂ ಪ.ಪೂ. ಕಾಲೇಜಿನ ಸುಫಿಯಾನ್ ಇಬ್ರಾಹೀಂ ಮೆಡಿಕಲ್‌ನಲ್ಲಿ 188ನೆ ಸ್ಥಾನ ಗಳಿಸಿದ್ದಾರೆ.

ಶಿಶಿರ್ ಜಿ.: ಜೆಇಇ ಮೈನ್‌ನಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ಬಳಿಕ ಸಿಇಟಿಯಲ್ಲೂ ಉತ್ತಮ ಅಂಕಗಳಿಸುವ ವಿಶ್ವಾಸ ನನಗಿತ್ತು. ಆರನೆ ರ್‍ಯಾಂಕ್ ಬಂದಿರುವುದು ಖುಷಿ ತಂದಿದೆ. ನನ್ನ ಗುರಿ ಐಐಟಿ ಅಥವಾ ಸುರತ್ಕಲ್‌ನ ಎನ್‌ಐಟಿಕೆಯಲ್ಲಿ ಎಂಜಿನಿಯರಿಂಗ್ ಓದುವುದಾಗಿದೆ. ‘ನಾನು ಮಂಡಳಿ ಪರೀಕ್ಷೆಯೊಂದಿಗೆ ಸ್ಪರ್ಧಾತ್ಮಕ ಪರೀ ಕ್ಷೆಗೂ ಹೆಚ್ಚಿನ ಒತ್ತು ನೀಡಿದ್ದೆ. ಅದರಿಂದ ಉತ್ತಮ ಫಲಿತಾಂಶ ಸಾಧ್ಯವಾಯಿತು ಎಂದು ಕೋಟ ವಿವೇಕ ಪ.ಪೂ.ಕಾಲೇಜಿನ ಶಿಶಿರ್ ಜಿ. ಹೇಳಿದ್ದಾರೆ.

ಬಾರಕೂರಿನಲ್ಲಿ ಇಲೆಕ್ಟ್ರಿಕಲ್ ಗುತ್ತಿಗೆ ದಾರರಾಗಿರುವ ಗಣೇಶ ಭಟ್ಟರ ದ್ವಿತೀಯ ಪುತ್ರನಾಗಿರುವ ಶಿಶಿರ್, ಉಡುಪಿ ಬೇಸ್‌ನಲ್ಲಿ ಜೆಇಇಗಾಗಿ ಕೋಚಿಂಗ್ ಪಡೆದಿದ್ದರು. ಮಗನ ಸಾಧನೆಯಿಂದ ವಿಶೇಷ ಖುಷಿಯಾಗಿದೆ ಎಂದು ತಂದೆ ಗಣೇಶ ಭಟ್ಟ ನುಡಿದರು.

ಸುದೀಪ್ ಜಿ.ಇ: ಉಡುಪಿಯ ಆದರ್ಶ ಆಸ್ಪತ್ರೆಯ ನಿರ್ದೇಶಕ ಡಾ.ಜಿ. ಎಸ್.ಚಂದ್ರಶೇಖರ್ ಅವರ ಪುತ್ರನಾದ ಸುದೀಪ್ ಜಿ.ಇ. ತಂದೆಯಂತೆ ವೈದ್ಯನಾಗಿ ಮುಂದೆ ಐಎಎಸ್ ಬರೆಯುವ ಗುರಿ ಹಾಕಿಕೊಂ ಡಿದ್ದಾರೆ. ಸಿಇಟಿಯನ್ನು ಚೆನ್ನಾಗಿ ಬರೆ ದಿರುವುದರಿಂದ ಉತ್ತಮ ರ್‍ಯಾಂಕ್ ನಿರೀಕ್ಷೆ ಇತ್ತು. ಆದರೂ 8ನೆ ರ್‍ಯಾಂಕ್ ಸಿಕ್ಕಿರುವುದು ವಿಶೇಷ ಸಂತೋಷ ಉಂಟು ಮಾಡಿದೆ ಎಂದು ಸುದೀಪ್ ನುಡಿದರು.

ಕಲಿತ ಪಿಪಿಸಿ ಹಾಗೂ ಗುರುಕುಲ್ ಕೋಚಿಂಗ್ ಸೆಂಟರ್‌ನಲ್ಲಿ ಶಿಕ್ಷಕರ ಪಾಠ ಹಾಗೂ ಮಾರ್ಗದರ್ಶನದಿಂದ ಕಲಿಕೆ ಸುಲಭವಾಯಿತು. ಮಣಿಪಾಲ ವಿವಿಯ ಪ್ರವೇಶ ಪರೀಕ್ಷೆಯಲ್ಲಿ ಈಗಾ ಗಲೇ 88ನೆ ಸ್ಥಾನ ಪಡೆದಿರುವುದರಿಂದ ಕೆಎಂಸಿಯಲ್ಲೇ ವೈದ್ಯಕೀಯ ಶಿಕ್ಷಣ ಪಡೆಯುವ ನಿರ್ಧಾರ ಮಾಡಿದ್ದೇನೆ ಎಂದು ಸುದೀಪ್ ಹೇಳಿದರು.

ಅಂಜಲಿ:ಆರ್ಕಿಟೆಕ್ಟ್ ವಿಭಾಗ ದಲ್ಲಿ 4ನೆ ರ್‍ಯಾಂಕ್ ಗಳಿಸಿರುವ ಅಂಜಲಿಯವರು ನಿಟ್ಟೆ ವಿದ್ಯಾ ಸಂಸ್ಥೆಯ ಮೆಕ್ಯಾನಿಕ್ ವಿಭಾಗ ದಲ್ಲಿ ದುಡಿಯುತ್ತಿರುವ ಪ್ರೊ.ವೇಣುಗೋಪಾಲ್ ಹಾಗೂ ಅದೇ ಸಂಸ್ಥೆಯ ಪಾಲಿಟೆಕ್ನಿಕ್‌ನಲ್ಲಿ ದುಡಿಯುತ್ತಿರುವ ಸಿಂಧೂ ದಂಪತಿಯ ಹಿರಿಯ ಪುತ್ರಿ.

Write A Comment