ಕನ್ನಡ ವಾರ್ತೆಗಳು

ನಿವೃತ್ತ ಪೊಲೀಸ್ ಅಧಿಕಾರಿ ಬಿ.ಜೆ. ಭಂಡಾರಿ ರಸ್ತೆ ಅಪಘಾತದಲ್ಲಿ ಸಾವು

Pinterest LinkedIn Tumblr

B.J.Bhandary_Died

ಮಂಗಳೂರು / ಉಡುಪಿ : ನಿವೃತ್ತ ಪೊಲೀಸ್ ಅಧಿಕಾರಿಯೋರ್ವರು ರಸ್ತೆ ಅಪಘಾತವೊಂದರಲ್ಲಿ ಸಾವನ್ನಪ್ಪಿದ ಘಟನೆ ಸೋಮವಾರ ಬ್ರಹ್ಮಾವರದಲ್ಲಿ ಸಂಭವಿಸಿದ್ದು, ಮೃತ ಪೊಲೀಸ್ ಅಧಿಕಾರಿಯನ್ನು ಬಿ.ಜೆ. ಭಂಡಾರಿ ಯಾನೆ ಬೆಳ್ತಂಗಡಿ ಜಯಾ ಭಂಡಾರಿ (ಡಿವೈಎಸ್ಪಿ) ನಿವೃತ್ತ ಉಪ ವರಿಷ್ಠಾಧಿಕಾರಿ (66) ಎಂದು ಗುರುತಿಸಲಾಗಿದೆ.

ಸೋಮವಾರ ಬ್ರಹ್ಮವಾರದ ಸಭಾಂಗಣವೊಂದರಲ್ಲಿ ನಡೆಯುತ್ತಿದ್ದ ಸಂಭಂಧಿಯೋರ್ವರ ಮದುವೆಗೆ ತೆರಳಿದ್ದು, ಬ್ರಹ್ಮವಾರದ ಮಹೇಶ್ ಆಸ್ಪತ್ರೆ ಬಳಿ ತಮ್ಮ ಸಂಭಧಿಯಾದ ರಾಮ ಭಂಡಾರಿ ಎಂಬವರ ಜೊತೆ ಬಿ.ಜೆ.ಭಂಡಾರಿಯವರು ರಸ್ತೆ ದಾಟುತ್ತಿದ್ದಾಗ ವ್ಯಾಗನರ್ ಕಾರೊಂದು ಇವರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಭಂಡಾರಿಯವರನ್ನು ಅಪಘಾತ ಸಂಭವಿಸಿದ ತಕ್ಷಣ ಮಹೇಶ್ ಆಸ್ಪತ್ರೆಗೆ ದಾಖಲು ಪಡಿಸಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಆಸ್ಪತ್ರೆಗೆ ಸಾಗಿಸಲಾಯಿತ್ತಾದರೂ.. ಚಿಕಿತ್ಸೆ ಫಲಕಾರಿಯಾಗದೇ ಭಂಡಾರಿಯವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ

ಕಾರು ಉಡುಪಿಯಿಂದ ಕುಂದಾಪುರ ಕಡೆಗೆ ಚಲಿಸುತ್ತಿದ್ದು, ಅಪಘಾತವೆಸಗಿದ್ದ ಕಾರು ಚಾಲಕ ಅಬ್ದುಲ್ ರಹೀಮ್‌ನನ್ನು ಪೊಲೀಸರು ಬಂಧಿಸಿದ್ದಾರೆ.ಪ್ರಕರಣ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘ :

ಬಿ.ಜೆ. ಭಂಡಾರಿಯವರು ಇತ್ತೀಚಿಗೆ ತಾನೆ ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘವನ್ನು ಸ್ಥಾಪಿಸಿದ್ದು, ನಿವೃತ್ತ ಪೊಲೀಸರ ಮೂಲ ಸೌಕರ್ಯ ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ಹಲವಾರು ಪ್ರತಿಭಟನೆಗಳನ್ನು ನಡೆಸಿದ್ದರು.

B J Bhandary, DySP, DCRB

B J Bhandary  who hails from Belthangady Taluk joined the police department in 1979 and is presently serving as  DySP in DCRB.  Bhandary has served as ACP in Mangalore apart from serving in Mandya, Bangalore,  Chackmagalur, DCRE, CCB,  state Intelligence and Lokayukta department. He  is the recipient of Chief  Minister’s medal twice in  1991 and 2007.  Now, his services are recognized once again by selecting him for the President’s medal.

ಹೆಚ್ಚಿನ ವಿವರ ನಿರೀಕ್ಷಿಸಿ..

Write A Comment