ಕನ್ನಡ ವಾರ್ತೆಗಳು

ಮುಡಿಪು ಎಸ್‌ಎಸ್‌ಎಫ್ ಉಳ್ಳಾಲ ಡಿವಿಷನ್ ವತಿಯಿಂದ ರಕ್ತದಾನ ಶಿಬಿರ

Pinterest LinkedIn Tumblr

mudipu_blood_camp_1

ಉಳ್ಳಾಲ ಮೇ 25 : ಉಳ್ಳಾಲ ಎಸ್‌ಎಸ್‌ಎಫ್ ಉಳ್ಳಾಲ ಡಿವಿಷನ್ ಇದರ ಆಶ್ರಯದಲ್ಲಿ ಎಸ್‌ಎಸ್‌ಎಫ್ ಮುಡಿಪು ಮತ್ತು ಮಂಜನಾಡಿ ಸೆಕ್ಟರ್‌ನ ಸಹಬಾಗಿತ್ವದಲ್ಲಿ ಕೆ‌ಎಂಸಿ ಆಸ್ಪತ್ರೆ ಇದರ ಸಹಕಾರದೊಂದಿಗೆ ರಕ್ತದಾನ ಶಿಬಿರವು ಭಾನುವಾರ ಮುಡಿಪುವಿನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಎಸ್‌ಎಸ್‌ಎಫ್ ರಾಜ್ಯ ನಾಯಕ ಸಿದ್ದೀಕ್ ಮೋಂಟುಗೋಳಿ ಮಾತನಾಡಿ, ರಕ್ತದಾನ ಮಹಾದಾನವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಹಳಷ್ಟು ರೋಗಿಗಳಿಗೆ ರಕ್ತದ ಅವಶ್ಯಕತೆ ಇರುತ್ತದೆ. ರಕ್ತದ ಸಮಸ್ಯೆಯಿಂದಾಗಿ ಚಿಕಿತ್ಸೆ ಪಡೆಯುವವರು ಇದ್ದಾರೆ. ಅವರಿಗೆ ನಾವು ನೆರವಾಗವೇಕಾಗುತ್ತದೆ. ರಕ್ತ ದಾನ ಮಾಡಿದಲ್ಲಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಾಗುತ್ತದೆ. ಇದನ್ನು ಎಸ್‌ಎಸ್‌ಎಫ್ ನಿರಂತರ ಮಾಡಿಕೊಂಡು ಬರುವುದು ಉತ್ತಮ ಕಾರ್ಯ ಎಂದರು.

mudipu_blood_camp_3 mudipu_blood_camp_2

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಪಿಳ್ ಯಾಕೂಬ್ ಸ‌ಅದಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಇಬ್ರಾಹಿಂ ಅಹ್ಸನಿ, ಅಲ್ತಾಪ್ ಕುಂಪಲ, ಫಾರೂಕ್ ಸಖಾಫಿ, ಅಬ್ದುಲ್ ರಹ್ಮಾನ್, ಮುಸ್ತಫಾ ಮುಕಚೇರಿ, ಜಮಾಲುದ್ದೀನ್ ಸಖಾಫಿ, ಶರೀಫ್ ಮುಡಿಪು, ಅಶ್ರಫ್ ಸ‌ಅದಿ ಪಡಿಕಲ್, ರಫೀಕ್ ಮದನಿ ಪಾನೇಲ, ಹಾಶಿಂ ಮೋಂಟುಗೋಳಿ, ಇಬ್ರಾಹಿಂ ಪೂಡಲ್ ಮೊದಲಾದವರು ಉಪಸ್ಥಿತರಿದ್ದರು, ಡಿವಿಷನ್ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಅತಿಥಿಗಳನ್ನು ಸ್ವಾಗತಿಸಿದರು.

Write A Comment