ಕನ್ನಡ ವಾರ್ತೆಗಳು

ಬಹುನಿರೀಕ್ಷಿತ “ಎಕ್ಕಸಕ” ತುಳು ಸಿನಿಮಾ ಮೇ. 1ರಂದು ಕರಾವಳಿ ಜಿಲ್ಲೆಯ 11 ಟಾಕೀಸುಗಳಲ್ಲಿ ಏಕ ಕಾಲದಲ್ಲಿ ಬಿಡುಗಡೆ

Pinterest LinkedIn Tumblr

EkkaSakka_Press_Meet_1

ವರದಿ / ಚಿತ್ರ : ಸತೀಶ್ ಕಾಪಿಕಾಡ್

ಮಂಗಳೂರು : ರಂಗಭೂಮಿಯ ಹೆಸರಾಂತ ತಂಡವಾಗಿರುವ ಮಂಗಳೂರಿನ ಲಕುಮಿ ಕಲಾವಿದರು ಮತ್ತು ಶ್ರೀ ಲಲಿತೆ ಕಲಾವಿದರು ಇದರ ಸಂಸ್ಥಾಪಕ ಹಾಗೂ ಲೀಡ್ಸ್ ಗ್ರೂಪ್ ಆಫ್ ಕಂಪೆನೀಸ್‌ನ ಲಯನ್ ಕಿಶೋರ್ ಡಿ. ಶೆಟ್ಟಿ ನಿರ್ಮಾಣದಲ್ಲಿ ಮೂಡಿಬಂದ ಲಕುಮಿ ಸಿನಿ ಕ್ರಿಯೇಶನ್ಸ್‌ರವರ ಬಹುನಿರೀಕ್ಷಿತ “ಎಕ್ಕಸಕ” ತುಳು ಸಿನಿಮಾ ಇದೇ ಬರುವ ಮೇ. 1ರಂದು ಶುಕ್ರವಾರ ತೆರೆ ಕಾಣಲಿದ್ದು, ಅವಿಭಾಜ್ಯ ಜಿಲ್ಲೆಗಳ ಸುಮಾರು 11 ಥಿಯೇಟರ್ ಗಳಲ್ಲಿ ಏಕ ಕಾಲದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಚಿತ್ರದ ನಿರ್ಮಾಪಕರಾದ ಲಯನ್ ಕಿಶೋರ್ ಡಿ. ಶೆಟ್ಟಿ ಅವರು ತಿಳಿಸಿದ್ದಾರೆ.

ಬುಧವಾರ ನಗರದ ಪ್ರತಿಷ್ಟಿತ ಹೊಟೇಲ್ ಓಷಿಯನ್ ಪರ್ಲ್ ನಲ್ಲಿ ಅಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತನ್ನ ಜೊತೆ ಲಯನ್ ಚಂದ್ರಹಾಸ ಶೆಟ್ಟಿ ಮತ್ತು ಲಯನ್ ಗಿರೀಶ್ ಶೆಟ್ಟಿಯವರು ಕೂಡ ನಿರ್ಮಾಪಕರಾಗಿದ್ದು, ಕನ್ನಡ ಚಿತ್ರರಂಗದಲ್ಲಿ ಕಳೆದ 10 ವರ್ಷಗಳಿಂದ ಹಲವಾರು ನಿರ್ದೇಶಕರೊಂದಿಗೆ ಕೆಲಸ ಮಾಡಿರುವ ಕೆ. ಸೂರಜ್ ಶೆಟ್ಟಿ ರಚಿಸಿ ನಿರ್ದೇಶನ ಮಾಡಿದ್ದಾರೆ. ಸಮೃದ್ಧ ಎಂಬ ಕನ್ನಡ ಪದಕ್ಕೆ ಪರ್ಯಾಯವಾದ ತುಳು ಶಬ್ಧ ಎಕ್ಕಸಕ. ಎಕ್ಕಸಕ ತುಳು ಸಿನಿಮಾದಲ್ಲಿ ಎಕ್ಕಸಕ ಕಲಾವಿದರಿದ್ದಾರೆ ಎಂದರು.

EkkaSakka_Press_Meet_2 EkkaSakka_Press_Meet_3 EkkaSakka_Press_Meet_4 EkkaSakka_Press_Meet_5 EkkaSakka_Press_Meet_6 EkkaSakka_Press_Meet_7 EkkaSakka_Press_Meet_8 EkkaSakka_Press_Meet_9 EkkaSakka_Press_Meet_10 EkkaSakka_Press_Meet_11

ಮಂಗಳೂರಿನವರೇ ಆದ ಹಿತೇಶ್ ನಾಯ್ಕ್ ಹಾಗೂ ಸೋನಲ್ ಮೊಂತೇರೊ ಪ್ರಮುಖ ಭೂಮಿಕೆಯಲ್ಲಿದ್ದು ತುಳುನಾಡಿನ ಖ್ಯಾತ ಕಲಾವಿದರಾದ ನವೀನ್ ಡಿ.ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು, ಸುಂದರ್ ರೈ ಮಂದಾರ, ಸತೀಶ್ ಬಂದಲೆ, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಪ್ರಸನ್ನ ಬೈಲೂರು, ಶೋಭರಾಜ್ ಪಾವೂರು, ಹರೀಶ್ ವಾಸು ಶೆಟ್ಟಿ, ರಾಘವೇಂದ್ರ ರೈ, ಉಮನಾಥ್ ಕೋಟ್ಯಾನ್, ಚೈತ್ರ ಶೆಟ್ಟಿ, ರವಿ ಸುರತ್ಕಲ್, ಪ್ರದೀಪ್ ಆಳ್ವ, ಜಯಶೀಲ, ಮೋಹನ್ ಕೊಪ್ಪಲ, ಗೋಕುಲ್ ಕದ್ರಿ, ಚಿದಾನಂದ ದುಬೈ ಮತ್ತು ಕನ್ನಡ ಚಿತ್ರರಂಗದ ಹೆಸರಾಂತ ಕಲಾವಿದರಾದ ಅಚ್ಯುತ ರಾವ್, ಟೆನ್ನಿಸ್ ಕೃಷ್ಣ, ಸುಧಾ ಬೆಳವಾಡಿ ಪದ್ಮಜಾ ರಾವ್, ಶೋಭಾ ರೈ, ಕವಿತಾ ರೈ ಮತ್ತು ಬಾಲಿವುಡ್ ನಟಿ ಶ್ವೇತಾ ಶರ್ಮಾ ಮತ್ತಿತರರು ನಟಿಸಿದ್ದಾರೆ.

ಕನ್ನಡ ಸಿನಿಮಾದಲ್ಲಿ ಮಿಂಚಿರುವ ಉಗ್ರಂ ಖ್ಯಾತಿಯ ರವಿ ಬಸ್ರೂರು ಸಂಗೀತ ನಿರ್ದೇಶಕ ಎಕ್ಕಸಕ ಸಿನಿಮಾಕ್ಕೆ ಕನ್ನಡ ಸಿನಿಮಾ ಜಗತ್ತಿನ ಹಿರಿಯ ಛಾಯಾಗ್ರಾಹಕ ಕೃಷ್ಣ ಸಾರಥಿ ಅದ್ಭುತವಾಗಿ ತನ್ನ ಪ್ರತಿಭೆಯನ್ನು ತೋರಿದ್ದಾರೆ. ನಟ ಕಿಚ್ಚ ಸುದೀಪ್‌ರವರ ಹಲವು ಸಿನಿಮಾಗಳಿಗೆ ಸಂಕಲನ ಮಾಡಿರುವ ಕೆ.ಆರ್. ಲಿಂಗರಾಜು ಇಲ್ಲಿಯೂ ತಮ್ಮ ಚಾಕಚಕ್ಯತೆಯನ್ನು ಮೆರೆದಿದ್ದಾರೆ. ನಟ ರವಿಚಂದ್ರನ ಸಿನಿಮಾಗಳಿಗೆ ಖಾಯಂ ಸೌಂಡ್ ಇಂಜಿನಿಯರ್ ಆಗಿರುವ ಹುಲಿವನ ನಾಗರಾಜ್ ಎಕ್ಕಸಕ ಸಿನಿಮಾದ ಧ್ವನಿ ತಾಂತ್ರಕತೆಯನ್ನು ಕೈಯಾಡಿಸಿದ್ದು ಕೊಚಾಡಿಯಾನ್ ತಮಿಳ್ ಸೂಪರ್ ಹಿಟ್ ಸಿನಿಮಾಕ್ಕೆ ಗ್ರಾಫಿಕ್ಸ್ ಕೆಲಸ ಮಾಡಿರುವ ಪ್ರಣವ್ ಲಿಯೋರವರು ಗ್ರಾಫಿಕ್ಸ್ ಕೆಲಸವನ್ನು ಮುಂಬೈನ ಹಾಗೂ ಬೆಂಗಳೂರಿನ ತಂತ್ರಜ್ಞರಿಂದ ಸಿನಿಮಾದ ವಿವಿಧ ಕೆಲಸ ಕಾರ್ಯ ನಡೆಸಲಾಗಿದೆ. ಧನು ಕುಮಾರ್ ಕೋರಿಯೋಗ್ರಫಿ ಮಾಡಿದ್ದು, ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ಮಯೂರ್ ಆರ್. ಶೆಟ್ಟಿ ಹಾಡುಗಳ ಸಾಹಿತ್ಯ ಬರೆದಿದ್ದು. ವಸಂತ್ ಅಮಿನ್ ಹಾಗೂ ಡಿಬಿಸಿ ಶೇಖರ್ ಎರಡು ಹಾಡುಗಳನ್ನು ಬರೆದಿದ್ದಾರೆ. ಸಿನಿಮಾದಲ್ಲಿ ಆರು ಹಾಡುಗಳಿವೆ. ಕನ್ನಡ ಸಿನಿಮಾದ ಹೆಸರಾಂತ ಗಾಯಕರಾದ ಚಂದನ್ ಶೆಟ್ಟಿ, ಅನುರಾದ ಭಟ್, ಸಂತೋಷ್ ವೆಂಕಿ, ತೆಲುಗು ಸಿನಿಮಾ ರೇಸ್ ಗುರ್ರಮ್‌ನ ಗಾಯಕ ಸಿಂಹರವರು ಒಂದು ಹಾಡಿಗೆ ಧ್ವನಿಗೂಡಿದ್ದಾರೆ.

ಇವರೆಲ್ಲರ ಜೊತೆ ದುಬೈನ ಹೆಸರಾಂತ ಯುವ ಉದ್ಯಮಿ ಹಾಗೂ ಖ್ಯಾತ ಹಿನ್ನೆಲೆ ಗಾಯಕರೂ ಆಗಿರುವ ಹರಿಶ್ ಶೇರಿಗಾರ್ ಹಾಗೂ ಅಕ್ಷತಾ ರಾವ್ ದುಬೈ ಇವರು ಹಾಡಿದ್ದಾರೆ. ದಿನಕರ ಶೆಟ್ಟಿ ಮತ್ತು ಮೋಹನ್ ಕೊಪ್ಪಲ ಕದ್ರಿ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಹಲವಾರು ಕನ್ನಡ ಹಾಗೂ ತುಳು ಸಿನಿಮಾದ ಪ್ರಚಾರವಿನ್ಯಾಸದಲ್ಲಿ ಕೈಯಾಡಿಸಿರುವ ದೇವಿ ರೈಯವರು ಈ ಸಿನಿಮಾದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದು, ಒಟ್ಟಾರೆ ಈ ಸಿನಿಮಾವು ಪ್ರೀತಿ-ಪ್ರೇಮದ ಜೊತೆಗೆ ಹಾಸ್ಯ-ಮನೋರಂಜನೆಯಿಂದ ಕೂಡಿದೆ ಎಂದು ಕಿಶೋರ್ ಡಿ. ಶೆಟ್ಟಿ ವಿವರಿಸಿದರು.

EkkaSakka_Press_Meet_12 EkkaSakka_Press_Meet_13 EkkaSakka_Press_Meet_14 EkkaSakka_Press_Meet_15 EkkaSakka_Press_Meet_16 EkkaSakka_Press_Meet_17 EkkaSakka_Press_Meet_18 EkkaSakka_Press_Meet_19 EkkaSakka_Press_Meet_20 EkkaSakka_Press_Meet_21 EkkaSakka_Press_Meet_22 EkkaSakka_Press_Meet_23 EkkaSakka_Press_Meet_24 EkkaSakka_Press_Meet_25 EkkaSakka_Press_Meet_26 EkkaSakka_Press_Meet_27 EkkaSakka_Press_Meet_28 EkkaSakka_Press_Meet_29 EkkaSakka_Press_Meet_30 EkkaSakka_Press_Meet_31 EkkaSakka_Press_Meet_32 EkkaSakka_Press_Meet_33 EkkaSakka_Press_Meet_34 EkkaSakka_Press_Meet_35 EkkaSakka_Press_Meet_36 EkkaSakka_Press_Meet_37

EkkaSakka_movei_mahurta_39 EkkaSakka_movei_mahurta_38 EkkaSakka_movei_mahurta_37 EkkaSakka_movei_mahurta_36 EkkaSakka_movei_mahurta_35 EkkaSakka_movei_mahurta_34 EkkaSakka_movei_mahurta_23 EkkaSakka_movei_mahurta_21 EkkaSakka_movei_mahurta_14

11 ಟಾಕೀಸುಗಳಲ್ಲಿ ಏಕಕಾಲದಲ್ಲಿ ಬಿಡುಗಡೆ :

“ಎಕ್ಕಸಕ” ತುಳು ಸಿನಿಮಾ ಮಂಗಳೂರಿನ ಜ್ಯೋತಿ, ಬಿಗ್ ಸಿನಿಮಾಸ್, ಪಿ.ವಿ.ಆರ್., ಸಿನಿಪೊಲಿಸ್, ಉಡುಪಿಯ ಕಲ್ಪನ, ಮಣಿಪಾಲದ ಐನೋಕ್ಸ್, ಮೂಡಬಿದ್ರೆಯ ಅಮರಶ್ರೀ, ಕಾರ್ಕಳದ ರಾಧಿಕಾ, ಬಿ.ಸಿ.ರೋಡ್ ನಕ್ಷತ್ರ, ಪುತ್ತೂರಿನ ಅರುಣಾ, ಬೆಳ್ತಂಗಡಿಯ ಭಾರತ್ ಈ ಎಲ್ಲಾ ಚಿತ್ರಮಂದಿರಗಳಲ್ಲಿ ಮೇ 1ರಂದು ಏಕಕಾಲದಲ್ಲಿ ಬಿಡುಗಡೆಯಾಗಲಿದೆ. ಮೇ 1ರಂದು ಬೆಳಿಗ್ಗೆ 9.00 ಗಂಟೆಗೆ ಜ್ಯೋತಿ ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆ ಕಾರ್ಯಕ್ರಮ ಜರುಗಲಿರುವುದು. ಈ ಸಂದರ್ಭದಲ್ಲಿ ಚಿತ್ರರಂಗ, ರಂಗಭೂಮಿ, ಸಾಂಸ್ಕೃತಿಕ ಕ್ಷೇತ್ರದ ಹಲವಾರು ಗಣ್ಯರು ಉಪಸ್ಥಿತರಿರುವರು ಎಂದು ಕಿಶೋರ್ ಡಿ. ಶೆಟ್ಟಿ ಮಾಹಿತಿ ನೀಡಿದರು.

ನಿರ್ಮಾಪಕರಾದ ಲಯನ್ ಚಂದ್ರಹಾಸ ಶೆಟ್ಟಿ, ಲಯನ್ ಗಿರೀಶ್ ಶೆಟ್ಟಿ, ಚಿತ್ರದ ನಿರ್ದೇಶಕ ಸೂರಜ್ ಶೆಟ್ಟಿ ಚಿತ್ರದ ಬಗ್ಗೆ ಪೂರಕ ಮಾಹಿತಿ ನೀಡಿದರು. ಸಹನಿರ್ದೇಶಕ ಮಯೂರ್ ಆರ್. ಶೆಟ್ಟಿ, ಕಲಾವಿದರಾದ ನವೀನ್ ಡಿ. ಪಡೀಲ್, ಭೋಜರಾಜ್ ವಾಮಂಜೂರು, ಅರವಿಂದ್ ಬೋಳಾರ್, ಚಿತ್ರದ ನಾಯಕ ನಟ ಹಿತೇಶ್ ನಾಯ್ಕ್, ನಾಯಕಿ ನಟಿ ಸೋನಾಲ್ ಮೊಂತೆರೋ ಹಾಗೂ ಉದ್ಯಮಿ, ಜಯಕಿರಣ ಸಂಸ್ಥೆಯ ಪ್ರಕಾಶ್ ಪಾಂಡೇಶ್ವರ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

EkkaSakka_movei_mahurta_1

“ಎಕ್ಕಸಕ” ಚಿತ್ರದ ಮಹೂರ್ತ ಸಮಾರಂಭದ ವರದಿ ಹಾಗೂ ವಿಶೇಷ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

“Ekka saka” – Kasta Suka, the first gift of Lakumi team to Tulu film industry: The film will create history – Seetharam Kulal

_ Sathish Kapikad

1 Comment

  1. ಜಯರಾಮ್ ನವಗ್ರಾಮ

    “ಎಕ್ಕಸಕ ಎಕ್ಕಸಕ…” ಎಂಬ ಸುಂದರ ಗೀತೆಯನ್ನು ‘ಕೋಟಿ ಚೆನ್ನಯ’ ಚಿತ್ರಕ್ಕಾಗಿ ರಚಿಸಿದ ಪ್ರೋಫೇಸರ್ ವಿವೇಕ್ ರೈ ಅವರಿಂದಲೇ ‘ಎಕ್ಕಸಕ’ ಚಿತ್ರ ಉದ್ಘಾಟಿಸಲ್ಪಟ್ಟದ್ದು ಎಷ್ಟೊಂದು ಅರ್ಥಪೂರ್ಣ ಅಲ್ವೇ?

Write A Comment