ಗಲ್ಫ್

ಒಮಾನ್: 60 ಸಾವಿರ ಭಾರತೀಯರಿಗೆ ಕ್ಷಮಾದಾನ

Pinterest LinkedIn Tumblr

oman

ಮಸ್ಕತ್/ತಿರುವನಂತಪುರ, ಎ.28: ಸೂಕ್ತ ದಾಖಲೆಗಳಿಲ್ಲದೆ ರಾಷ್ಟ್ರದಲ್ಲಿ ತಂಗಿರುವ ಭಾರತೀಯರು ಯಾವುದೇ ಶಿಕ್ಷೆಯನ್ನು ಎದುರಿಸದೆ ಅಥವಾ ದಾಖಲೆಗಳನ್ನು ನವೀಕರಿಸದೆ ತಮ್ಮ ರಾಷ್ಟ್ರಗಳಿಗೆ ಹಿಂದಿರುಗಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಒಮಾನ್ ಸರಕಾರವು ಕ್ಷಮಾದಾನ ಯೋಜನೆಯೊಂದನ್ನು ಪ್ರಕಟಿಸಿದೆ.

ಈ ಕ್ಷಮಾದಾನ ಯೋಜನೆಯನ್ನು ಒಮಾನ್ ಸರಕಾರವು ಸೋಮವಾರ ಪ್ರಕಟಿಸಿದ್ದು, ಈ ಕ್ಷಮಾದಾನ ಅವಧಿಯು ಮೇ 3ರಿಂದ ಜುಲೈ 30ರವರೆಗೆ ಜಾರಿಯಲ್ಲಿರಲಿದೆ. ಒಮಾನ್‌ನಲ್ಲಿ 4 ಲಕ್ಷ ಭಾರತೀಯರಿದ್ದು, ಅವರಲ್ಲಿ 1.89 ಲಕ್ಷ ಮಂದಿ ಕೇರಳಿಗರಾಗಿದ್ದಾರೆ ಎಂದು ಅಭಿವೃದ್ಧಿ ಅಧ್ಯಯನ ಕೇಂದ್ರದ ವಲಸೆ ವಿಭಾಗದ ಮುಖ್ಯಸ್ಥ ಎಸ್. ಹೃದಯರಾಜನ್ ಅಂದಾಜಿಸಿದ್ದಾರೆ.

ಒಮಾನ್‌ನಲ್ಲಿರುವ 4 ಲಕ್ಷ ಭಾರತೀಯರಲ್ಲಿ ಸುಮಾರು ಶೇಕಡಾ 15ರಷ್ಟು ಮಂದಿ ಸೂಕ್ತ ದಾಖಲೆ ಪತ್ರಗಳನ್ನು ಹೊಂದಿಲ್ಲ. ಇಂಥವರಿಗಾಗಿ ಒಮಾನ್ ಸರಕಾರ ಕ್ಷಮಾದಾನ ಯೋಜನೆಯು ಪ್ರಯೋಜನಕಾರಿಯಾಗಿದೆ’’ ಎಂದವರು ಹೇಳಿದ್ದಾರೆ.ಇದೇ ರೀತಿಯ ಯೋಜನೆಯೊಂದನ್ನು ಬಹರೈನ್‌ನಲ್ಲಿ ಒಂದೆರಡು ತಿಂಗಳಲ್ಲಿ ಪ್ರಕಟಿಸುವ ಸಾಧ್ಯತೆಯಿದೆ ಎಂದವರು ಹೇಳಿದ್ದಾರೆ.

Write A Comment