ಕನ್ನಡ ವಾರ್ತೆಗಳು

ಶಿಕ್ಷಣದಿಂದ ಲೋಕ ನೆಲೆ ನಿಂತಿದೆ: ಎಪಿ ಅಬೂಬಕರ್ ಮುಸ್ಲಿಯಾರ್

Pinterest LinkedIn Tumblr

mancila_musliyar_1

ಉಳ್ಳಾಲ,ಎ.25 : ಮದ್ರಸ ಶಿಕ್ಷಣದಿಂದ ಲೋಕ ನೆಲೆ ನಿಂತಿದೆ. ಎಷ್ಟು ಅಭಿವೃದ್ಧಿಯಾಗಿದೆಯೋ ಅಷ್ಟೇ ಅಭಿವೃದ್ಧಿ ಮದ್ರಸ ಆಗಬೇಕು. ಲೋಕದಲ್ಲಿ ಜನತೆಗೆ ಉನ್ನತ ಸ್ಥಾನ ಸಿಕ್ಕಿದ್ದರೆ ಅದು ಶಿಕ್ಷಣದಿಂದ ಮಾತ್ರ ಸಾಧ್ಯ. ಪುರಾತನ ಕಾಲದಲ್ಲಿ ಚಪ್ಪರದ ಮದ್ರಸದಲ್ಲಿ, ಅಥವಾ ಸಣ್ಣ ಕೊಠಡಿಯೊಳಗೆ ಎಲ್ಲಾ ವಿದ್ಯಾರ್ಥಿಗಳನ್ನು ಕೂಡಿ ಹಾಕಿ ಧಾರ್ಮಿಕ ಶಿಕ್ಷಣ ನೀಡಲಾಗುತ್ತಿತ್ತು. ಆಗ ಧಾರ್ಮಿಕ ಶಿಕ್ಷಣ ಕೇವಲ ಧರ್ಮದ ಬಗ್ಗೆ ಅರ್ಥಮಾಡಿಕೊಳ್ಳಲು ಮಾತ್ರ ಸೀಮಿತವಾಗಿತ್ತು. ಪ್ರಸಕ್ತ ಮದ್ರಸ ಶಿಕ್ಷಣ ವಿವಿಧ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಕಲಿಸುವುದರಿಂದ ಮತ್ತು ವಿದ್ಯಾರ್ಥಿಗಳ ಸಂಖ್ಯೆ ಅಧಿಕ ಇರುವುದರಿಂದ ಮದ್ರಸ ಕೊಠಡಿ ವಿಶಾಲವಾಗಿರಬೇಕು ಎಂದು ಎಪಿ ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಹೇಳಿದರು. ಅವರು ಮಂಚಿಲದಲ್ಲಿ ನಡೆದ ಮಸ್ಜುದುಲ್ ಜಾಮಿಯಾ‌ಅಲ್-ಮುನವ್ವರ್‍ಮತ್ತು ಮಂಬವುಲ್ ಉಲೂಂ ಮದ್ರಸದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ಶೈಕ್ಷಣಿಕ ಕೇಂದ್ರ ಪ್ರಸಕ್ತ ಕಾಲದಲ್ಲಿ ಅಗತ್ಯ ಇದೆ. ಇಸ್ಲಾಂನ ಬಗ್ಗೆ ಕೂಲಂಕಷವಾಗಿ ಅಭ್ಯಸಿಸಲು ಮದ್ರಸ ಬೇಕಾಗಿದೆ. ಆದರೆ ಶಿಕ್ಷಣ ನೀಡುವ ಗುರುಗಳು ಮತ್ತು ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಬಹಳ ಆಸಕ್ತಿಯಿಂದ ಮದ್ರಸ ಶಿಕ್ಷಣಕ್ಕೆ ಆಸಕ್ತಿ ನೀಡಿದಲ್ಲಿ ಗೊಂದಲವಿಲ್ಲದೇ ಶಿಕ್ಷಣ ಪಡೆಯಬಹುದು.ಬೋಧಕರ ಪಾತ್ರ ಮದ್ರಸ ಶಿಕ್ಷಣದಲ್ಲಿ ಮಹತ್ವವಾದುದು ಎಂದರು. ಹುಸೈನ್ ಸ‌ಅದಿ ಕೆಸಿರೋಡ್ , ಎಸಿ‌ಎಂ ಕಾಂತಪುರಂ ಮಾತನಾಡಿದರು.

mancila_musliyar_2 mancila_musliyar_3 mancila_musliyar_4 mancila_musliyar_5 mancila_musliyar_6 mancila_musliyar_7 mancila_musliyar_8 mancila_musliyar_9 mancila_musliyar_10 mancila_musliyar_11 mancila_musliyar_12 mancila_musliyar_13 mancila_musliyar_14

ಅಸ್ಸಯ್ಯದ್ ಹಾಮಿದ್ ಇಂಬಿಚ್ಚಿಕೋಯ ತಂಙಳ್ ದುವಾ ನೆರವೇರಿಸಿದರು. ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಯು. ಯಸ್‌ಹಂಝ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಅಶ್ರಫ್ ಅಹ್ಮದ್ ರೈಟ್ ವೇ ಉದ್ಘಾಟಿಸಿದರು. ಅಬ್ದುಲ್ ಜಬ್ಬಾರ್ ಅಶ್ರಫಿ ಅತಿಥಿಗಳನ್ನು ಸ್ವಾಗತಿಸಿದರು. ಎಚ್.ಎಚ್ ಹಾಜಿ ಕುಂಞ ಅಹ್ಮದ್, ಪ್ರ.ಕಾರ್ಯದರ್ಶಿ ಮೊಹಮ್ಮದ್ ಮುಸ್ತಫ ಇಸ್ಮಾಯಿಲ್, ಅಬ್ದುಲ್ ಹಮೀದ್, ಕೆ. ವಿ ಸುಲೇಮಾನ್ ಸಖಾಫಿ ಮುಫತ್ತೀಸ್ ಸೈಯದ್ ಮದನಿ ಅರೆಬಿಕ್ ಟ್ರಸ್ಟ್, ಮಂಚಿಲ ಜುಮಾ ಮಸೀದಿ ಅಧ್ಯಕ್ಷ. ಇದಿನಬ್ಬ ಮಂಚಿಲ , ಅಲೇಕಳ ಮಸೀದಿ ಅಧ್ಯಕ್ಷ ಯು. ಎ.ಇಸ್ಮಾಯಿಲ್, ಎ.ಎ. ಹೈದರ್ ಪರ್ತಿಪಾಡಿ, ಫಾರೂಕ್ ಮಾರ್ಗತಲೆ, ಹನೀಫ್ ಉಸ್ತಾದ್, ಉದ್ಯಮಿ ಬಶೀರ್, ನಝೀರ್ ಖಾದರ್, ಅಯ್ಯುಬ್ ಯು.ಪಿ, ಇಬ್ರಾಹಿಂ ಮಾರ್ಗತಲೆ, ಮೊದಲಾದವರು ಉಪಸ್ಥಿತರಿದ್ದರು.

Write A Comment