ಮಂಗಳೂರು,ಎಪ್ರಿಲ್.03: ನಗರದ ಬಸ್ತಿಹಿತ್ಲು ಶ್ರೀ ಶಾಂತಿನಾಥ ಸ್ವಾಮಿ ಬಸದಿಯಲ್ಲಿ ಗುರುವಾರ ಭಗವಾನ್ ಮಹಾವೀರ ಸ್ವಾಮಿಯ 2614ನೇ ಜಯಂತಿ ಮಹೋತ್ಸವ ಸಂಭ್ರಮದಿಂದ ನಡೆಯಿತು. ಬೆಳಗ್ಗೆ ಶಾಂತಿನಾಥ ಸ್ವಾಮಿಗೆ ಕ್ಷೀರಾಭಿಷೇಕ, ಅಗ್ರೋದಕ ಮೆರವಣಿಗೆ ಭಗವಾನ್ ಸ್ವಾಮಿಯ ಜನ್ಮ ಕಲ್ಯಾಣ, ಬಾಲಕ ನಾಮಕರಣೋತ್ಸವ ವಿಧಿ ವಿಧಾನಗಳು ನಡೆಯಿತು. ದಿವ್ಯಧ್ವನಿ ಮಕ್ಕಳ ಬಳಗದಿಂದ ಭಜನೆ ಕಾರ್ಯಕ್ರಮ ನಡೆಯಿತು.
ಮಂಗಳೂರು ಜೈನ್ ಸೊಸೈಟಿ ಅಧ್ಯಕ್ಷ ಎಲ್.ಡಿ.ಬಳ್ಳಾಲ್, ಉಪಾಧ್ಯಕ್ಷ ಸುರೇಶ್ ಬಳ್ಳಾಲ್, ಕಾರ್ಯದರ್ಶಿ ಪುಷ್ಪರಾಜ್ ಜೈನ್, ಶೋಭಾಕರ ಬಳ್ಳಾಲ್, ಜೈನ್ ಮಿಲನ್ ಅಧ್ಯಕ್ಷ ಯಶೋಧರ ಪೂವಾಣಿ, ಜತೆ ಕಾರ್ಯದರ್ಶಿ ಸನತ್ ಕುಮಾರ್ ಜೈನ್, ಜಿತೇಶ್ ಜೈನ್, ಯುವ ಜೈನ್ ಮಿಲನ್ ಅಧ್ಯಕ್ಷ ನಿರ್ಮಲ್ ಕುಮಾರ್ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು