ಕನ್ನಡ ವಾರ್ತೆಗಳು

ಬೈಂದೂರು; ನಿಶ್ಚಿತಾರ್ಥವಾಗಿದ್ದ ಯುವತಿ ಬಾವಿಗೆ ಹಾರಿ ಆತ್ಮಹತ್ಯೆ; ಕಾರಣ ನಿಗೂಢ

Pinterest LinkedIn Tumblr

Byndoor_Lady_Death

ಕುಂದಾಪುರ: ಇಲ್ಲಿನ ಬೈಂದೂರು ಸಮೀಪದ ಪಡುವರಿ ಗ್ರಾಮದ ಮಡುವಾಳ್‌ಹಿತ್ಲು ಮನೆಯ ಲಕ್ಷ್ಮೀ ದೇವಾಡಿಗ ಮತ್ತು ಈರ ದೇವಾಡಿಗರ ಪುತ್ರಿ ಅನುಸುಯಾ(27) ಮನೆಯ ಪಕ್ಕದ ಹಾಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವತಿ.

ಇತ್ತೀಚೆಗಷ್ಟೇ ಅನುಸೂಯ ಇವಳಿಗೆ ಮದುವೆ ನಿಶ್ಚಯವಾಗಿದ್ದು ಕಳೆದ 2 ತಿಂಗಳ ಹಿಂದೆ ನಾಗೂರು ಮೂಲದ ಯುವಕನೊಂದಿಗೆ ನಿಶ್ಚಿತಾರ್ಥವೂ ಅದ್ದೂರಿಯಿಂದ ನಡೆದಿದೆ. ಇನ್ನೇನು ಮದುವೆಗೆ ಕೆಲವು ತಿಂಗಳು ಬಾಕಿ ಇತ್ತು. ಮದುವೆ ಆಗುವ ಹುಡುಗನು ಆಗಾಗ ಮನೆಗೆ ಬರುತ್ತಿದ್ದ. ನಿನ್ನೆ ಸಂಜೆ ಸಮೇತ ಮನೆಗೆ ಬಂದು ಹೋಗಿದ್ದ ಎನ್ನಲಾಗುತ್ತಿದೆ. ಅಕ್ಕಪಕ್ಕದ ಮನೆಯವರು ಹೇಳುವ ಪ್ರಕಾರ ಮದುವೆ ನಿಶ್ಚಯವಾದ ಹುಡುಗ ಪ್ರತಿದಿನ ಪೋನ್ ಮಾಡಿ ಅಸಭ್ಯವಾಗಿ ಬೈಯುತ್ತಿದ್ದ ಅಲ್ಲದೇ ಮನೆಗೂ ಯಾವಾಗಲೂ ಬಂದು ಅವಾಚ್ಯ ಶಬ್ಡದಿಂದ ಬೈಯುತ್ತಿದ್ದ. ಇದರಿಂದ ಮನನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿರಬೇಕು ಎನ್ನುವುದು ನೆರೆಹೊರೆಯವರ ಅಭಿಪ್ರಾಯ.

ಆದರೆ ಯುವತಿ ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದು ಸ್ವಷ್ಟವಾಗಿಲ್ಲ. ಸ್ಥಳಕ್ಕೆ ಬೈಂದೂರು ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಲಕ್ಷ್ಮೀ ದೇವಾಡಿಗ ಮತ್ತು ಇರ ದೇವಾಡಿಗರಿಗೆ 4 ಹೆಣ್ಣು ಮಕ್ಕಳು ಹಾಗೂ 1 ಗಂಡು. ಇವರಲ್ಲಿ ಮೊದಲನೇಯವಳು ನಾಗರತ್ನ, ಎರಡನೇಯವಳು ಪದ್ಮಾವತಿ, ಮೂರನೇಯವ ಉದಯ, ನಾಲ್ಕನೇಯವಳು ಅನುಸೂಯ ಹಾಗೂ ಕೊನೆಯವಳು ಜ್ಯೋತಿ. ನಾಗರತ್ನ, ಪದ್ಮಾವತಿ, ಉದಯ ಇವರಿಗೆ ಮದುವೆ ಆಗಿತ್ತು.

Write A Comment