ಕನ್ನಡ ವಾರ್ತೆಗಳು

ಅರಿವಳಿಕೆ ಯಡವಟ್ಟು : ಕೋಮಾ ಸ್ಥಿತಿಯಲ್ಲಿ ಯುವಕ

Pinterest LinkedIn Tumblr

overe_dose_ansthe_1

ಮೂಲ್ಕಿ, ಮಾರ್ಚ್.12 : ಚರಂಡಿಯೊಂದನ್ನು ದಾಟುವಾಗ ಆಯಾತಪ್ಪಿ ಬಿದ್ದು ಕೈ ಮುರಿತಕ್ಕೆ ಒಳಗಾದ ಯುಕವನೋರ್ವನಿಗೆ ಶಸ್ತ್ರ ಚಿಕಿತ್ಸೆ ನೀಡಲು ಅನೇಸ್ತಿಯಾ ಇಂಜೆಕ್ಷನ್ ಕೊಟ್ಟ ವೈದ್ಯರು ಚಿಕಿತ್ಸೆ ಮುಗಿದು ಐದು ದಿನವಾದರೂ ಇನ್ನೂ ಪ್ರಜ್ಞೆ ಮರಳಿ ಬಂದಿಲ್ಲ ಎಂದು ಆತನ ಕುಟುಂಬದವರು ಆಸ್ಪತ್ರೆಯ ವಿರುದ್ಧ ಹರಿಹಾಯ್ದ ಘಟನೆ ನಿನ್ನೆ ನಡೆದಿದೆ.

ಮೂಲತ ಬಾಗಲಕೊಟೆ ನಿವಾಸಿಯಾಗಿದ್ದು ಕಳೆದ 20ವರ್ಷದಿಂದ ತಡಂಬೈಲ್‍ನಲ್ಲಿ ವಾಸಿಸುತ್ತಿರುವ ಪಾರ್ಥ ಗೌಡ(25) ಎಂಬ ಯುವಕನೇ ಈಗ ಆಸ್ಪತ್ರೆಯ ಹಾಸಿಗೆಯಲ್ಲಿ ಪ್ರಜ್ಞೆ ಕಳೆದುಕೊಂಡು ಮಲಗಿದ್ದು, ಮುಕ್ಕದಲ್ಲಿರುವ ಜಿಲ್ಲೆಯ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಈ ಘಟನೆ ನಡೆದಿದೆ.

ಕಳೆದ ಭಾನುವಾರ ತನ್ನ ಗೆಳೆಯರೊಂದಿಗೆ ಚಿಕತ್ಸೆಗಾಗಿ ದಾಖಲಾಗಿದ್ದ ಪಾರ್ಥ ಗೌಡನ ಕೈಗೆ ಗಾಯವಾಗಿದ್ದನ್ನು ಕಂಡ ವೈದ್ಯರು ತಕ್ಷಣ ಶಸ್ತ್ರ ಚಿಕಿತ್ಸೆ ಮಾಡಬೇಕು ಎಂದು ಹೇಳಿದ್ದರಿಂದ ಪಾರ್ಥಗೌಡ ಸಣ್ಣ ಶಸ್ತ್ರಕ್ರಿಯೆ ಎಂಬ ಕಾರಣಕ್ಕೆ ಒಪ್ಪಿಕೊಂಡು ಅಂದೇ ಆಸ್ಪತ್ರೆಯಲ್ಲಿ ವೈದ್ಯರು ಶಸ್ತ್ರಕ್ರಿಯೆ ನಡೆಸುವ ಉದ್ದೇಶದಿಂದ ಅರಿವಳಿಕೆ (ಅನೇಸ್ತಿಯಾ) ಇಂಜೆಕ್ಷನ್ ನೀಡಿದ್ದರು. ಆದರೆ ಅರಿವಳಿಕೆ ಇಂಜೆಕ್ಷನ್ ವ್ಯತಿರಿಕ್ತಗೊಂಡ ಕಾರಣ ದಿಂದ ಭಾನುವಾರ ಪ್ರಜ್ಞೆ ಕಳೆದುಕೊಂಡಿದ್ದ ಪಾರ್ಥ ಇಂದಿಗೂ ಕೋಮಾದಿಂದ ಹೊರ ಬಂದಿಲ್ಲ ಎಂಬ ಆತಂಕ ಆತನ ಮನೆಯವರಿಗೆ ಎದುರಾಗಿದೆ.

ಈ ಬಗ್ಗೆ ವೈದ್ಯರಲ್ಲಿ ಕೇಳಿದರೆ ಏನೋನೊ ಹೇಳುತ್ತಾರೆ. ಕೊನೆಗೆ ದೇವರಲ್ಲಿ ಮೊರೆ ಹೋಗಿ ಎಂದು ಹೇಳಿದ್ದರಿಂದ ಕೋಮಾದಲ್ಲಿರುವ ತಮ್ಮ ಮಗನ ದುಸ್ಥಿತಿಗೆ ಕಾರಣ ಏನು ಎಂದು ಸ್ಪಷ್ಟ ಪಡಿಸಲು ಆಗ್ರಹಿಸಿದ್ದಾರೆ.

ಆಸ್ಪತ್ರೆಯ ನಿರ್ಲಕ್ಷ್ಯದ ವಿರುದ್ಧ ಕಿಡಿಕಾರಿರುವ ಪಾರ್ಥಗೌಡನ ಸ್ನೇಹಿತರು ನಿನ್ನೆ ವೈದ್ಯರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದು ಶೀಘ್ರವಾಗಿ ಚಿಕಿತ್ಸೆ ನೀಡದಿದ್ದರೆ ಆಸ್ಪತ್ರೆ ವಿರುದ್ಧ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ವೈದ್ಯರು ಸಹ ಯಾವುದೇ ಪ್ರತಿಕ್ರಿಯೆಯನ್ನು ನೀಡಲು ನಿರಾಕರಿಸಿದ್ದು ಕುತೂಹಲಕ್ಕೀಡಾಗಿದೆ.

Write A Comment