ವಿಟ್ಲ,ಮಾರ್ಚ್.12 : ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಕೇರಳಕ್ಕೆ ಕೊಂಡೊಯ್ದು, ಪೊಲೀಸರಿಂದ ತಪ್ಪಿಸಿಕೊಂಡಿದ್ದ ಪ್ರಮುಖ ಆರೋಪಿ ಕನ್ಯಾನ ಗ್ರಾಮದ ಪೊಯ್ಯಗದ್ದೆ ನಿವಾಸಿ ಇಕ್ಕು ಯಾನೆ ಇಕ್ಬಾಲ್ (23) ನನ್ನು ವಿಟ್ಲ ಪೊಲೀಸರು ಬುಧವಾರ ಕನ್ಯಾನ ಸಮೀಪದ ಪೈವಳಿಕೆಯಲ್ಲಿ ಬಂಧಿಸಿದ್ದಾರೆ.
ಕನ್ಯಾನ ಕಾಲೇಜಿನ ವಿದ್ಯಾರ್ಥಿಗಳಿಬ್ಬರು ಸೇರಿದಂತೆ ಇತರ ಇಬ್ಬರು ಯುವಕರು ಅಪ್ರಾಪ್ತ ಬಾಲಕಿ ಅಪಹರಣ ಪ್ರಕರಣದಲ್ಲಿ ಯುವಕನೊಂದಿಗೆ ಕೈಜೋಡಿಸಿದ್ದಾರೆನ್ನಲಾಗಿತ್ತು. ಪೊಲೀಸರು ಹುಡುಗಿಯ ಹುಡುಕಾಟದಲ್ಲಿದ್ದಾರೆಂಬ ಮಾಹಿತಿ ತಿಳಿದ ಯುವಕ ತಪ್ಪಿಸಿಕೊಂಡಿದ್ದ. ಮನೆಗೆ ಬರುವ ಖಚಿತ ಮಾಹಿತಿ ಪಡೆದ ವಿಟ್ಲ ಪೊಲೀಸರ ತಂಡ ಆರೋಪಿಯನ್ನು ಬಂಧಿಸಿದೆ.
