ಕನ್ನಡ ವಾರ್ತೆಗಳು

ಹದಿಹರೆಯದ ತಲ್ಲಣ ಬದುಕನ್ನು ಕಸಿಯಬಹುದು ಜಾಗೃತರಾಗಿ ಸ್ವಸ್ಥ ಸಮಾಜ ನಿರ್ಮಿಸಿ : ಪ್ರೋ. ಬಾಲಕೃಷ್ಣ ಶೆಟ್ಟಿ

Pinterest LinkedIn Tumblr

kateel_aids_awrens_1

ಮೂಲ್ಕಿ,ಫೆ.26 :ಯುವ ಸಮುದಾಯವು ಹದಿಹರೆಯದ ತಲ್ಲಣದಲ್ಲಿ ಸ್ವಲ್ಪ ಎಚ್ಚರತಪ್ಪಿದಲ್ಲಿ ತಮ್ಮ ಬದುಕನ್ನೆ ಕಸಿದುಕೊಳ್ಳುವ ಅಪಾಯ ಏಡ್ಸ್ ರೋಗದಿಂದ ಅಂಟಿಕೊಳ್ಳುವ ಮೊದಲೇ ಜಾಗೃತರಾಗಿ ಸ್ವಸ್ಥ ಸಮಾಜವನ್ನು ನಿರ್ಮಾಣ ಮಾಡಲು ಪರಸ್ಪರ ಕೈಜೋಡಿಸಬೇಕು ಎಂದು ಕಟೀಲು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೋ. ಬಾಲಕೃಷ್ಣ ಶೆಟ್ಟಿ ಹೇಳಿದರು. ಅವರು ಕಟೀಲು ರಥಬೀದಿಯಲ್ಲಿ ಶ್ರೀ ದುರ್ಗಾಪರಮೇಶ್ವರೀ ಪ್ರಥಮ ದರ್ಜೆ ಕಾಲೇಜಿನ ರೆಡ್ ರಿಬ್ಬನ್ ಕ್ಲಬ್‌ನ ಸಂಯೋಜನೆಯಲ್ಲಿ ಬುಧವಾರ ನಡೆದ ಏಡ್ಸ್ ಜನಜಾಗೃತಿ ಸಭೆಗೆ ಚಾಲನೆ ನೀಡಿ ಮಾತನಾಡಿದರು.

kateel_aids_awrens_2

ಕಾಲೇಜಿನ ವಿದ್ಯಾರ್ಥಿಗಳು ಕಾಲೇಜಿನಿಂದ ಕಟೀಲಿನವರೆಗೆ ಜಾಥಾವನ್ನು ನಡೆಸಿ ಏಡ್ಸ್ ಎಂಬ ಮಾರಕ ಕಾಯಿಲೆಯ ದುಷ್ಪರಿಣಾಮ ಹಾಗೂ ಜಾಗೃತಿ ಜನಜಾಗೃತಿಯ ಬಗ್ಗೆ ಬೀದಿನಾಟಕವನ್ನು ಪ್ರದರ್ಶಿಸಿದರು. ಕಾಲೇಜಿನ ಸುಮಾರು 850 ವಿದ್ಯಾರ್ಥಿಗಳ ಭಾಗವಹಿಸಿದ್ದರು.

ಕಾಲೇಜಿನ ಎನ್‌ಎಸ್‌ಎಸ್‌ನ ಯೋಜನಾಧಿಕಾರಿಗಳಾದ ಪ್ರೊ. ಕೇಶವ ಎಚ್ ಮತ್ತು ಡಾ| ಸುನಿತಾ ಎಚ್. ಬಿ, ವಿದ್ಯಾರ್ಥಿನಿ ಪ್ರಶ್ನಿತಾ ಹಾಜರಿದ್ದರು.

_ನರೇಂದ್ರ ಕೆರೆಕಾಡು

Write A Comment