ಕನ್ನಡ ವಾರ್ತೆಗಳು

ದನದ ಹಟ್ಟಿಗೆ ಅಕಸ್ಮಿಕ ಬೆಂಕಿ.

Pinterest LinkedIn Tumblr

cattal_room_fiar

ಮೂಲ್ಕಿ,ಫೆ.26  : ಇಲ್ಲಿನ ಮೂಲ್ಕಿ ಹೋಬಳಿಯ ಐಕಳ ಗ್ರಾಮ ಪಂಚಾಯಿತಿಯ ಬಳಿಯ ಮನೆಯೊಂದರ ದನದ ಹಟ್ಟಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಅಪಾರ ನಷ್ಟ ಸಂಭವಿಸಿದ ಘಟನೆ ಬುಧವಾರ ಬೆಳಕಿಗೆ ಬಂದಿದೆ. ಐಕಳ ನಿವಾಸಿ ವಿನ್ಸಿ ರೋಡ್ರಿಗಸ್ ಎಂಬುವರ ಮನೆಯ ಆವರಣದಲ್ಲಿರುವ ದನದ ಹಟ್ಟಿಯಲ್ಲಿ ಏಕಾ‌ಏಕಿ ಹೊಗೆ ಕಾಣಿಸಿಕೊಂಡಿದ್ದರಿಂದ ಬೆಂಕಿಯ ಕೆನ್ನಾಲಿಗೆಯು ಹಟ್ಟಿಯಲ್ಲಿದ್ದ ದನಕ್ಕೂ ತಗುಲಿ ಗಾಯಗಳಾಗಿದ್ದು ಅದನ್ನು ರಕ್ಷಿಸಲಾಗಿದೆ.

ಹಟ್ಟಿಗೆ ಬೆಂಕಿಯು ಸಂಪೂರ್ಣವಾಗಿ ಆವರಿಸಿಕೊಂಡಿದ್ದರಿಂದ ಅದರೊಳಗೆ ಇದ್ದ ಮರದ ಕಟ್ಟಿಗೆಗಳು, ತೆಂಗಿನ ಗೆರಟೆಗಳು, ಸಿಪ್ಪೆಗಳೊಂದಿಗೆ ಇನ್ನಿತರ ವಸ್ತುಗಳು ಉರಿದು ಬೂದಿ ಆಗಿದೆ. ಮನೆಯವರೊಂದಿಗೆ ಸ್ಥಳೀಯರು ಸಹ ಬೆಂಕಿಯನ್ನು ನಂದಿಸಲು ಸಾಕಷ್ಟು ಶ್ರಮಿಸಿದ್ದರು ಪ್ರಯೋಜನಕ್ಕೆ ಬಾರಲಿಲ್ಲ ಎನ್ನಲಾಗಿದೆ.

ಸ್ಥಳಕ್ಕೆ ಕಂದಾಯ ಇಲಾಖೆಯ ಗ್ರಾಮ ಕರಣೀಕರು ಹಾಗೂ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಸಹಿತ ಅಧ್ಯಕ್ಷೆ ಪದ್ಮಿನಿ ಭೇಟಿ ನೀಡಿ ಸೂಕ್ತ ಪರಿಹಾರದ ಭರವಸೆಯನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ. ಬೆಂಕಿಯ ಸ್ಪಷ್ಟ ಕಾರಣ ಇನ್ನೂ ತಿಳಿದು ಬಂದಿಲ್ಲ.

_ನರೇಂದ್ರ ಕೆರೆಕಾಡು

Write A Comment