ಕನ್ನಡ ವಾರ್ತೆಗಳು

ಬಿಜೆಪಿ ಕಛೇರಿಯಲ್ಲಿ ಹೊಸ ಸದಸ್ಯತ್ವದ ವೆಬ್‌ಸೈಟ್ ಕಾರ್ಯಾಗಾರ ಉದ್ಘಾಟನೆ.

Pinterest LinkedIn Tumblr

bjp_news_photo_1a

ಮಂಗಳೂರು,ಫೆ.26 : ಬಿಜೆಪಿ ಸದಸ್ಯತ್ವ ನೋಂದಣಿ ಕಾರ್ಯ ನಾಗಾಲೋಟದಲ್ಲಿದ್ದು, ಈಗಾಗಲೇ 5.80 ಕೋಟಿ ಸದಸ್ಯರು ನೋಂದಣಿಯಾಗಿದ್ದಾರೆ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಶ್ರೀವಾಸ್ತವ್ ಹೇಳಿದ್ದಾರೆ. ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಬಿಜೆಪಿ ಸದಸ್ಯತ್ವದ ವೆಬ್‌ಸೈಟ್ ಕುರಿತು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಸದಸ್ಯತ್ವ ನೋಂದಣಿಗಾಗಿ ವೆಬ್‌ಸೈಟ್ ಆರಂಭಿಸಲಾಗಿದ್ದು, ಸಕ್ರಿಯ ಸದಸ್ಯರು ಸ್ಮಾರ್ಟ್ ಫೋನ್, ಟ್ಯಾಬ್ಲೆಟ್, ಲ್ಯಾಪ್‌ಟಾಪ್ ಮೂಲಕ ನೋಂದಣಿ ಕಾರ್ಯ ಸುಗಮವಾಗಿ ನೆರವೇರಿಸಬಹುದು ಎಂದು ಅವರು ತಿಳಿಸಿದರು.

bjp_news_photo_1 bjp_news_photo_2 bjp_news_photo_3 bjp_news_photo_4 bjp_news_photo_6

ತಂತ್ರಜ್ಞಾನವನ್ನು ಬಳಸಿಕೊಂಡು ಹೊಸ ತಲೆಮಾರನ್ನು ತಲುಪುವಲ್ಲಿ ಪಕ್ಷ ಮುಂಚೂಣಿಯಲ್ಲಿದೆ ಎಂದು ಹೇಳಿದ ಅವರು, ಸಾಮಾಜಿಕ ಜಾಲತಾಣದಲ್ಲಿ ಪಕ್ಷದ ಹಲವು ಮುಖಂಡರು ಸಕ್ರಿಯವಾಗಿ ಜನಸಂಪರ್ಕ ಸಾಧಿಸಿದ್ದಾರೆ ಎಂದರು.

ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ ಉಳ್ಳಾಲ್ ಅಧ್ಯಕ್ಷತೆ ವಹಿಸಿದ್ದರು. ಹಿಂದು ಳಿದ ಮೋರ್ಚಾದ ರಾಜ್ಯ ಉಪಾಧ್ಯಕ್ಷ ನಿತಿನ್‌ಕುಮಾರ್, ಜಿಲ್ಲಾ ಉಪಾಧ್ಯಕ್ಷ ರಾದ ಸುರೇಶ್ಚಂದ್ರ, ಕಸ್ತೂರಿ ಪಂಜ, ಸದಸ್ಯತ್ವ ಅಭಿಯಾನ ಸಹಸಂಚಾಲಕ ಕ್ಯಾಪ್ಟನ್ ಬ್ರಿಜೇಶ್ ಚೌಟ, ಸಂಜಯ್ ಪ್ರಭು ಉಪಸ್ಥಿತರಿದ್ದರು. ನಿತಿನ್ ಶೆಟ್ಟಿ ಸ್ವಾಗತಿಸಿದರು. ರಕ್ಷಿತ್ ಶೆಟ್ಟಿ ವಂದಿಸಿದರು.

Write A Comment