ಕನ್ನಡ ವಾರ್ತೆಗಳು

ದಲಿತ ಯುವತಿಯನ್ನು ನಂಬಿಸಿ ಅತ್ಯಾಚಾರ: ಆರೋಪಿ ಪೊಲೀಸ್ ಅತಿಥಿ..

Pinterest LinkedIn Tumblr

rape

ಕಾರ್ಕಳ: ದಲಿತ ಯುವತಿಯನ್ನು ಅತ್ಯಾಚಾರ ಎಸಗಿದ ಆರೋಪಿಯನ್ನು ಕಾರ್ಕಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ನಿಟ್ಟೆ ಗ್ರಾಮದ ಲೆಮಿನಕ್ರಾಸ್ ಪೊಯ್ಯದಪಾದೆ ನಿವಾಸಿ ಮೊಹಮ್ಮದ್ ಆಶೀಫ್(27) ಅತ್ಯಾಚಾರ ಎಸಗಿದ ಆರೋಪಿ.

ದಲಿತ ಯುವತಿ ಮೂಲ್ಕಿ ಮೂಲದವಳು.ಆಕೆಯ ಬಳಿ ಮೊಹಮ್ಮದ್ ಆಶಿಫ್ ತನ್ನನ್ನು ಆದಿತ್ಯ ಶೆಟ್ಟಿ ಎಂದು ಪರಿಚಯಿಸಿಕೊಂಡಿದ್ದ. ಬಳಿಕ ಕಳೆದ ಫೆ.4ರಂದು ಬರ್ತ್‌ಡೇ ಪಾರ್ಟಿಗೆಂದು ಆಹ್ವಾನಿಸಿ ಅತ್ಯಾಚಾರ ಎಸಗಿದ್ದ. ಫೆ.22ರಂದು ಆಕೆಯನ್ನು ಪರಪಾಡಿ ಸೇತುವೆ ಬಳಿ ಕರೆದುಕೊಂಡು ಹೋಗುತ್ತಿರುವ ವೇಳೆ ಸಾರ್ವಜನಿಕರು ಸಂದೇಹಗೊಂಡು ಈ ಜೋಡಿಯನ್ನು ಬಂಧಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಇದೀಗ ದಲಿತ ಯುವತಿಯು ಆತ ಅತ್ಯಾಚಾರ ಎಸಗಿರುವ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾಳೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Write A Comment