ಕನ್ನಡ ವಾರ್ತೆಗಳು

ಮಂಗಳೂರುನಲ್ಲಿ ವಿದ್ಯಾರ್ಥಿಗಳಿಂದ ಸ್ವಚ್ಛತಾ ಅಭಿಯಾನ

Pinterest LinkedIn Tumblr

anns_college_cleancity_2

ಮಂಗಳೂರು,ಜ.31 : ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪುಣ್ಯತಿಥಿಯ ಅಂಗವಾಗಿ ಸ್ವಚ್ಛ ಭಾರತಕ್ಕಾಗಿ, ಸ್ವಚ್ಛ ಮಂಗಳೂರು ಎಂಬ ಧ್ಯೇಯದೊಂದಿಗೆ ಸಂತ ಆಗ್ನೇಸ್ ಕಾಲೇಜು, ಹಾಗೂ ಚೈಲ್ಡ್‌ಲೈನ್ ಮಂಗಳೂರು, ಜೆ.ಸಿ.ಐ ಮಂಗಳೂರು ಇವರ ಸಹಯೋಗದೊಂದಿಗೆ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ನಗರದ ಪ್ರಮುಖ 15  ಸ್ಥಳಗಳಲ್ಲಿ ನಡೆಯಿತು.

ಈ ಕಾರ್ಯಕ್ರಮವನ್ನು ಆಗ್ನೇಸ್ ಕಾಲೇಜು ಎದುರುಗಡೆ ಮಹಾನಗರ ಪಾಲಿಕೆಯ ಮೇಯರ್ ಶ್ರೀ ಮಹಾಬಲ ಮಾರ್ಲರವರು ಉದ್ಘಾಟಿಸಿದರು, ಸಭೆಯನ್ನುದ್ಧೇಶಿಸಿ ಮಾತನಾಡಿದ ಅವರು, ಪರಿಸರ ಸ್ವಚತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವುವನ್ನು ಮೂಡಿಸುವಲ್ಲಿ, ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆ ಹಾಗೂ ವಿದ್ಯಾರ್ಥಿಗಳು ಸರಕಾರದ ಜೊತೆ ಕೈಜೋಡಿಸುತ್ತಿರುವುದು ಹಾಗೂ ತಮ್ಮ ಕಾಳಜಿ ಶ್ಲಾಘನೀಯ ಎಂದರು, ಆ ನಿಟ್ಟಿನಲ್ಲಿ ನಗರದಲ್ಲಿ ಇಂತಹ ಸ್ವಚ್ಛತಾ ಅಭಿಯಾನ ಇನ್ನೂ ಹೆಚ್ಚು ನಡೆಯಬೇಕು, ಎಲ್ಲಾ ವಿದ್ಯಾರ್ಥಿಗಳು ಪಾಲ್ಗೋಳ್ಳಬೇಕೆಂದು ಹೇಳಿದರು.

anns_college_cleancity_1 anns_college_cleancity_6 anns_college_cleancity_4 anns_college_cleancity_5

ಸಂತ ಆಗ್ನೇಸ್ ಕಾಲೇಜಿನ ಪ್ರಾಂಶುಪಾಲರಾದ ಸಿ|| ಸುಪ್ರಿಯಾ ವಿದ್ಯಾರ್ಥಿನಿಯರುಗಳಿಗೆ ಸ್ವಚತಾ ಕೆಲಸಕ್ಕೆ ಪರಿಕರಗಳನ್ನು ವಿತರಿಸಿದರು. ಆಗ್ನೇಸ್ ಕಾಲೇಜಿನ ಸುಮಾರು 600  ವಿದ್ಯಾರ್ಥಿನಿಯರುಗಳು ಭಾಗವಹಿಸಿದ್ದರು, ಕಾಲೇಜು ಉಪನ್ಯಾಸಕರು, ಜೆ.ಸಿ.ಐ ಮಂಗಳೂರು ಹಾಗೂ ಚೈಲ್ಡ್‌ಲೈನ್ ಸಿಬಂಧಿಗಳು ನಗರದ ಪ್ರಮುಖ ಸ್ಥಳಗಳಲ್ಲಿ ಸ್ವಚ್ಛತೆಯನ್ನು ಮಾಡುವುದರ ಹಾಗೂ ಸಾರ್ವಜನಿಕರಿಗೆ ಮಾಹಿತಿಯನ್ನು ನೀಡುವುದರ ಮೂಲಕ ಜನರಲ್ಲಿ ಸ್ವಚ್ಛತೆಯ ಬಗ್ಗೆ ಅರಿವುವನ್ನು ಮೂಡಿಸಿದರು.

anns_college_cleancity_10 anns_college_cleancity_6 anns_college_cleancity_7 anns_college_cleancity_8 anns_college_cleancity_9

ಪಡೀಲ್ ಚೈಲ್ಡ್‌ಲೈನ್ ನಿರ್ದೇಶಕರಾದ ರೆನ್ನಿ ಡಿ’ಸೋಜ, ಜೆ.ಸಿ.ಐ, ಲೋಹಿತ್ ಶೆಟ್ಟಿ, ಜೆ.ಸಿ.ಐ ಡಾ|| ಸಚಿನ್ ನಡ್ಕ, ಮ.ನ.ಪಾ ಆರೋಗ್ಯಾಧಿಕಾರಿ ಡಾ|| ಮಂಜಯ್ಯ ಶೆಟ್ಟಿ, ಆಗ್ನೇಸ್ ಕಾಲೇಜಿನ ಉಪನ್ಯಾಸಕರಾದ ಡಾ|| ಜಯಂತ್, ಚಂದ್ರಮೋಹನ್, ಶ್ರೀಮತಿ ಆಶಾ, ಚೈಲ್ಡ್‌ಲೈನ್ ಸಂಯೋಜನಾಧಿಕಾರಿ ಸಂಪತ್ತ್ ಕಟ್ಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Write A Comment