ಕನ್ನಡ ವಾರ್ತೆಗಳು

ತ್ವಚೆಯ ಸೌಂದರ್ಯಕ್ಕಾಗಿ ‘ಐಸ್ ಕ್ಯೂಬ್ ಫೇಶಿಯಲ್’ ಪ್ರಯತ್ನಿಸಿ ನೋಡಿ!

Pinterest LinkedIn Tumblr

ori_pc_46323-img-2015-01-24-1422082419-ic1

ನಮ್ಮಲ್ಲಿ ಬಹುತೇಕ ಮಂದಿ ಸ್ಕಿನ್ ಕೇರ್ ಉತ್ಪನ್ನಗಳಿಗಾಗಿ ಹುಡುಕಾಡುತ್ತೇವೆ. ಆದರೆ ನಮ್ಮ ಮನೆಯಲ್ಲಿಯೇ ದೊರೆಯುವ ಐಸ್‍ಕ್ಯೂಬ್‍ನಂತಹ ಪೇಶಿಯಲ್‍ಗಳನ್ನು ನಾವು ಸುಲಭವಾಗಿ ಮನೆಯಲ್ಲಿಯೇ ಮಾಡಿಕೊಳ್ಳಬಹುದು. ಇದರ ಮೂಲಕ ನೀವು ತಕ್ಷಣ ನಿಮ್ಮ ಮುಖಕ್ಕೆ ಹೊಳಪನ್ನು ನೀಡಬಹುದು. ಏಕೆಂದರೆ ಐಸ್‍ಕ್ಯೂಬ್ ಪೇಶಿಯಲ್ ಮುಖದ ತ್ವಚೆಗೆ ಅಗತ್ಯವಾದ ರಕ್ತ ಸಂಚಾರವನ್ನು ಒದಗಿಸುತ್ತದೆ.

ಐಸ್‍ಕ್ಯೂಬ್‍ಗಳ ಸಹಾಯದಿಂದ ನೀವು ವಯಸ್ಸಾದಂತೆ ಕಾಣುವುದನ್ನು ಸಹ ತಡೆಯಬಹುದು. ಎಲ್ಲರಿಗು ತಿಳಿದಂತೆ ಐಸ್‍ಕ್ಯೂಬ್ ಖರ್ಚಿಲ್ಲದೆ ಅಡುಗೆ ಮನೆಯಲ್ಲಿಯೇ ದೊರೆಯುತ್ತದೆ. ಆದರೆ ಅಡುಗೆ ಮನೆಗೆ ಓಡುವ ಮೊದಲು ಐಸ್‍ಕ್ಯೂಬನ್ನು ಹೇಗೆ ಫೇಶಿಯಲ್ ಆಗಿ ಬಳಸಬಹುದು ಎಂಬುದನ್ನು ತಿಳಿದುಕೊಳ್ಳೋಣ. ಮೊದಲು ಒಂದು ಪೇಪರ್ ಟಿಶ್ಯೂವನ್ನು ತೆಗೆದುಕೊಳ್ಳಿ. ಅದರಲ್ಲಿ ಐಸ್‌ಕ್ಯೂಬ್ ಇಡಿ.

ನಂತರ ಅದರಿಂದ ಮುಖದ ಮೇಲೇ ವೃತ್ತಾಕಾರವಾಗಿ ಮಸಾಜ್ ಮಾಡಿ. ಆದಷ್ಟು ಈ ಮಸಾಜನ್ನು ಬೆಳಗ್ಗೆ ಸ್ನಾನಕ್ಕೆ ಹೋಗುವ ಮೊದಲು ಮಾಡುವುದು ಉತ್ತಮ. ಜೊತೆಗೆ ನಿಮ್ಮ ಮುಖಕ್ಕೆ ಸೋಪ್ ಅಥವಾ ಫೇಸ್ ವಾಶ್ ಕ್ರೀಮ್ ಹಚ್ಚುವ ಮೊದಲು ಈ ಪರಿಹಾರವನ್ನು ಪ್ರಯತ್ನಿಸಿದರೆ ಮತ್ತಷ್ಟು ಉತ್ತಮ. ಮೊದಲು ಮುಖವನ್ನು ಚೆನ್ನಾಗಿ ತೊಳೆದುಕೊಂಡು, ಐಸ್ ಕ್ಯೂಬ್ ಮಸಾಜ್ ಮಾಡಿ, ಆಗ ನಿಮಗೆ ಐಸ್ ಕ್ಯೂಬ್ ಫೇಶಿಯಲ್‌ನ ಸಂಪೂರ್ಣ ಪ್ರಯೋಜನಗಳು ಲಭಿಸುತ್ತವೆ.

ಮಸಾಜ್ ಮಾಡಲು ಒಂದು ಅತ್ಯುತ್ತಮ ವಿಧಾನ
ಐಸ್‌ಕ್ಯೂಬ್ ಪೇಶಿಯಲ್‌ನ ಮೊದಲ ಪ್ರಯೋಜನವೆಂದರೆ, ನಿಮ್ಮ ತ್ವಚೆಗೆ ಆರೈಕೆ ಲಭಿಸುತ್ತದೆ. ಈ ಮಸಾಜ್ ಮಾಡುವಾಗ ನಿಮ್ಮ ತ್ವಚೆ ಬಿಗಿಯಾಗುತ್ತದೆ. ಈ ವಿಧಾನವನ್ನು ವಾರಕ್ಕೆ ಎರಡು ಬಾರಿ ಮಾಡಿ. ಆದರೆ  ಯಾವುದೇ ಕಾರಣಕ್ಕು ಇದನ್ನು ಹೆಚ್ಚಾಗಿ ಮಾಡಬೇಡಿ.

ಮೊಡವೆಗಳಿಗೆ ಚಿಕಿತ್ಸೆ
ಈ ಮಸಾಜ್ ಮಾಡುವುದರಿಂದ ನೀವು ತ್ವಚೆಯ ಮೇಲೆ ಇರುವ ರಂಧ್ರಗಳನ್ನು ಕಡಿಮೆ ಮಾಡಿಕೊಳ್ಳಬಹುದು. ಐಸ್ ಕ್ಯೂಬ್ ಪೇಶಿಯಲ್ ಮೊಡವೆಗಳ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದು ನಿಮ್ಮ ತ್ವಚೆಯಲ್ಲಿರುವ ಕಲೆಗಳನ್ನು ಇಲ್ಲದಂತೆ ಮಾಡುತ್ತವೆ. ಯಾರು ತಮ್ಮ ಮುಖದಲ್ಲಿರುವ ಎಲ್ಲಾ ಮೊಡವೆ ಮತ್ತು ಕಲೆಗಳನ್ನು ನಿವಾರಿಸಿಕೊಳ್ಳಲು ಬಯಸುತ್ತಾರೋ, ಅವರು ಈ ವಿಧಾನದಿಂದ ಒಳ್ಳೆಯ ಫಲಿತಾಂಶವನ್ನು ಕಾಣಬಹುದು. ಮೊಸರಿನಲ್ಲಿ ಅಡಗಿದೆ ತ್ವಚೆಯ ಸೌಂದರ್ಯವನ್ನು ವೃದ್ಧಿಸುವ ರಹಸ್ಯ!

ಸನ್ ಬರ್ನ್‌ಗೆ ರಾಮಬಾಣ
ಇದರ ಜೊತೆಗೆ ಐಸ್ ಕ್ಯೂಬ್ ಮಸಾಜ್, ಸನ್ ಬರ್ನ್‌ಗೆ ರಾಮ ಬಾಣವಾಗಿ ಕೆಲಸ ಮಾಡುತ್ತದೆ. ಸೂರ್ಯನ ಕಿರಣಗಳ ಒಡೆತಕ್ಕೆ ಸಿಲುಕಿದ ತ್ವಚೆಗೆ ಶೀಘ್ರವಾಗಿ ತಂಪು ಮಾಡುವ ಐಸ್‌ಕ್ಯೂಬ್‍ನ ಗುಣವು ನಿಮಗೆ ಹಿತವನ್ನು ನೀಡುತ್ತವೆ. ಅದರಲ್ಲಿಯು ಬಿಸಿಲು ಅಧಿಕವಾಗಿರುವ ದೇಶಗಳಲ್ಲಿ ವಾಸಿಸುವವರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಏಕೆಂದರೆ ತಕ್ಷಣಕ್ಕೆ ನಿಮಗೆ ಐಸ್‌ಕ್ಯೂಬ್‍ಗಳೆ ಆಪದ್ಭಾಂಧವನಾಗಿ ಬರುತ್ತವೆ.

ವಯಸ್ಸಾದಂತೆ ಕಾಣುವುದನ್ನು ತಡೆಯುತ್ತವೆ
ನಿಮ್ಮ ಮುಖದ ಮೇಲೆ ಕಾಣಿಸಿಕೊಳ್ಳುವ ಸುಕ್ಕುಗಳನ್ನು ಐಸ್‌ಕ್ಯೂಬ್‍ಗಳಿಂದ ಕಡಿಮೆ ಮಾಡಿಕೊಳ್ಳಬಹುದು. ಐಸ್ ಕ್ಯೂಬ್ ಫೇಶಿಯಲ್‍ನಿಂದ ನಿಮ್ಮ ಮುಖದ ಭಾಗಕ್ಕೆ ರಕ್ತ ಸಂಚಾರ ಅಧಿಕವಾಗುತ್ತದೆ. ಇದರಿಂದ ನಿಮ್ಮ ಮುಖದ ಹೊಳಪು ಹೆಚ್ಚುತ್ತದೆ. ಆಗ ನಿಮ್ಮ ಮುಖ ಕಳೆಯಿಂದ ನಳನಳಿಸುತ್ತದೆ. ಹಾಗಾಗಿ ಐಸ್ ಕ್ಯೂಬ್ ಫೇಶಿಯಲನ್ನು ತಪ್ಪದೆ ಮಾಡಿ.

Write A Comment