ಕನ್ನಡ ವಾರ್ತೆಗಳು

ಕಪ್ಪು ಹಣ ದಾಖಲೆ ನೀಡಲು ಸ್ವಿಸ್ ಬ್ಯಾಂಕ್ ಹಾಗೂ ಸ್ವಿಟ್ಜರ್ ಲೆಂಡ್ ಪೂರ್ಣ ಸಹಕಾರ: ಅರುಣ್ ಜೇಟ್ಲಿ

Pinterest LinkedIn Tumblr

black money

ದಾವೋಸ್ ,ಜ.22 : ವಿದೇಶದಲ್ಲಿ ಕಪ್ಪುಹಣ ಹೊಂದಿದವರ ಮಾಹಿತಿ ಸಂಗ್ರಹಿಸುವ ಕಾರ್ಯವನ್ನು ಸರ್ಕಾರ ಮುಂದುವರಿಸಿದ್ದು, ಕಪ್ಪುಹಣ ಇರಿಸಿದ ಭಾರತೀಯರ ವೈಯಕ್ತಿಕ ಬ್ಯಾಂಕ್ ಖಾತೆಗಳ ಮಾಹಿತಿಯ ದಾಖಲೆಗಳನ್ನು ವಿನಿಮಯ ಮಾಡಿಕೊಳ್ಳಲು ಸ್ವಿಸ್ ಬ್ಯಾಂಕ್ ಹಾಗೂ ಸ್ವಿಟ್ಜರ್ ಲೆಂಡ್ ಪೂರ್ಣ ಸಹಕಾರ ನೀಡುತ್ತಿವೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದರು.

ಇಲ್ಲಿನ ಹಣಕಾಸು ಸಚಿವ ಎವೆಲಿನ್ ವಿಡ್ಮರ್ ಅವರ ಜತೆ ಬುಧವಾರ ರಾತ್ರಿ 40 ನಿಮಿಷ ಈ ಕುರಿತು ಮಾತುಕತೆ ನಡೆಸಿದ್ದು, ಸ್ವಿಟ್ಜರ್ ಲೆಂಡ್ ಮಾಹಿತಿ ವಿಮಯ ಹಾಗೂ ತ್ವರಿತವಾಗಿ ಕಾರ್ಯ ನಿರ್ವಹಿಸಲು ಸಹಕಾರ ನೀಡಲಿದೆ ಎಂದು ಅವರು ಹೇಳಿದ್ದಾಗಿ ಜೇಟ್ಲಿ ತಿಳಿಸಿದ್ದಾರೆ.  ಕಪ್ಪುಹಣದ ಸಮಸ್ಯೆಯನ್ನು ನಿಯಂತ್ರಿಸಲು ಭಾರತ-ಸ್ವಿಟ್ಜರ್ ಲ್ಯಾಂಡ್ ನಲ್ಲಿ ಹಣ ಇರಿಸುವವರ ಹಾಗೂ ಅವರು ತೆರಿಗೆ ಪಾವತಿ ಮಾಡಿರುವ ಬಗ್ಗೆ ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಳ್ಳುವ ಕುರಿತು ದ್ವಿಪಕ್ಷೀಯ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

‘ಸ್ವಿಟ್ಜರ್ ಲೆಂಡ್ ಕಪ್ಪುಹಣ ಇರಿಸಿದ ಭಾರತೀಯರ ಬ್ಯಾಂಕ್ ಖಾತೆಯ ವೈಯಕ್ತಿಕ ಮಾಹಿತಿ ನೀಡುವ ಭರವಸೆ ನೀಡಿದೆ. ದ್ವಿಪಕ್ಷೀಯ ಒಪ್ಪಂದ ಮಾಡಿಕೊಳ್ಳುವುದರಿಂದ ಮುಂದೆ ಪರಸ್ಪರ ಮಾಹಿತಿ ವಿನಿಮಯಕ್ಕೆ ಸಹಾಯವಾಗಲಿದೆ’ ಎಂದು ಜೇಟ್ಲಿ ತಿಳಿಸಿದ್ದಾರೆ.

Write A Comment