ಕನ್ನಡ ವಾರ್ತೆಗಳು

ಶಿರಾಡಿ ಘಾಟಿ ಕಾಮಗಾರಿ ಹಿನ್ನೆಲೆ : ಪರ್ಯಾಯ ರಸ್ತೆ ವ್ಯವಸ್ಥೆಗೆ ಅದ್ಯತೆ – ಜನವರಿ ಅಂತ್ಯಕ್ಕೆ ತುರ್ತು ಕಾಮಗಾರಿ ಪೂರ್ಣ

Pinterest LinkedIn Tumblr

siradi_gat_dc_1

ಮಂಗಳೂರು, ಜ.14 : ಶಿರಾಡಿ ಘಾಟಿಯು ಕಾಮಗಾರಿಯ ಹಿನ್ನೆಲೆಯಲ್ಲಿ ಬಂದ್ ಆಗಿರುವುದರಿಂದ ಪರ್ಯಾಯ ವ್ಯವಸ್ಥೆಯಾಗಿರುವ ಚಾರ್ಮಾಡಿ ಘಾಟಿಯಲ್ಲಿ ರಸ್ತೆಯ ತುರ್ತು ಕಾಮಗಾರಿಗಳು ಭರದಿಂದ ನಡೆಯುತ್ತಿದ್ದು, ಅಪಾಯಕಾರಿ ತಿರುವುಗಳಲ್ಲಿ ಸುಗಮ ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ಅಗತ್ಯ ಮುಂಜಾಗೃತಾ ವ್ಯವಸ್ಥೆಗಳನ್ನು ಅಳವಡಿಸಲು ಪ್ರಾಕೃತಿಕ ವಿಕೋಪ ನಿಧಿಯಿಂದ 5 ಲಕ್ಷ ರೂ.ಗಳನ್ನು ಬಳ ಸಲು ದ.ಕ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ನಿರ್ಧರಿಸಿದ್ದಾರೆ.

siradi_gat_dc_2

ಚಾರ್ಮಾಡಿ ಘಾಟಿಯ ತುರ್ತು ಅಭಿವೃದ್ಧಿ ಕಾಮಗಾರಿಗಳ ಕುರಿತಂತೆ ಮಂಗಳವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಪ್ರಸ್ತುತ ನಡೆಯುತ್ತಿರುವ ಕಾಮಗಾರಿಗಳ ಕುರಿತಂತೆ ಅಧಿಕಾರಿ ಗಳಿಂದ ಮಾಹಿತಿ ಪಡೆದ ಅವರು, ಈ ನಿರ್ಧಾರ ಕೈಗೊಂಡರು. ಘಾಟಿಯ 76 ಕಿ.ಮೀ.ನಿಂದ 86 ಕಿ.ಮೀವರೆಗಿನ ರಸ್ತೆಯಲ್ಲಿ 11 ಅತ್ಯಂತ ಅಪಾಯಕಾರಿ ತಿರುವುಗಳಿವೆ. ಶಿರಾಡಿ ಘಾಟಿ ದುರಸ್ತಿಗಾಗಿ ಬಂದ್ ಆಗುವ ಹಿನ್ನೆಲೆಯಲ್ಲಿ ಬದಲಿಯಾಗಿ ಪ್ರಮುಖ ಮಾರ್ಗವಾಗಿ ಉಪಯೋಗಿಸಲ್ಪಡುವ ಚಾರ್ಮಾಡಿಯಲ್ಲಿ ತುರ್ತು ದುರಸ್ತಿ ಕಾಮಗಾರಿ, ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಕಳೆದ ಜುಲೈಯಿಂದಲೇ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಸೂಚಿಸ ಲಾಗಿದ್ದರೂ ಯಾವುದೇ ಮುಂಜಾಗೃತಾ ಕ್ರಮಗಳನ್ನು ಕೆೈಗೊಳ್ಳಲಾಗಿಲ್ಲ. ಇದರಿಂದಾಗಿ ಆರಂಭಿಕ ಎರಡು ದಿನಗಳ ಕಾಲ ಈ ಮಾರ್ಗದಲ್ಲಿ ಸಂಚಾರ ಅಸ್ತವ್ಯಸ್ತವಾಗಲು ಕಾರಣವಾಯಿತು.ಇದಾದ ಮೇಲೂ ಅಲ್ಲಿನ್ನೂ ಸೂಕ್ತ ಸೂಚನಾ ಫಲಕಗಳನ್ನು ಹಾಕುವಲ್ಲಿ ಹೆದ್ದಾರಿ ಇಲಾಖೆ ವಿಫಲವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ಎಸ್ಪಿ ಡಾ. ಶರಣಪ್ಪ ಎಸ್. ಡಿ. ಸಭೆಯಲ್ಲಿ ಅಸಮಾಧಾನ ವ್ಯಕ್ತ ಪಡಿಸಿದರು.

siradi_gat_dc_3

ಘಾಟಿಯ ಎಷ್ಟು ಕಡೆಗಳಲ್ಲಿ ಸೂಚನಾ ಫಲಕ, ನಿಮ್ನದರ್ಪಣಗಳನ್ನು ಅಳವಡಿಸಲಾಗುತ್ತದೆ ಎಂಬ ಎಸ್ಪಿ ಡಾ.ಶರಣಪ್ಪರ ಪ್ರಶ್ನೆಗೆ ರಾಷ್ಟ್ರೀಯ ಹೆದ್ದಾರಿ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಹನೀಫ್, ಈ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದರು. ಇದರಿಂದ ಅಸಮಾಧಾನಗೊಂಡ ಎಸ್ಪಿ, 3 ತಿಂಗಳ ಮುಂಚಿತವಾಗಿಯೇ ಸಾಕಷ್ಟು ಸಭೆಗಳ ಮೂಲಕ ಅಗತ್ಯ ಕ್ರಮಗಳ ಬಗ್ಗೆ ಮುನ್ಸೂಚನೆ ನೀಡಲಾಗಿದ್ದರೂ ಏನೂ ಆಗಿಲ್ಲ. ಇದು ಗಂಭೀರ ವಿಷಯ. ತುರ್ತು ಮುಂಜಾಗೃತಾ ಕ್ರಮ ಕೈಗೊಳ್ಳುವುದು ಅತ್ಯಗತ್ಯ ಎಂದವರು ಸೂಚಿಸಿದರು. ಈ ಸಂದರ್ಭ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ, ಚಾರ್ಮಾಡಿ ಘಾಟಿಯ ರಸ್ತೆಯಲ್ಲಿ ಪಥ ಬದಲಾವಣೆ, ತಿರುವು, ವೇಗ ನಿಯಂತ್ರಕ, ಎಚ್ಚರಿಕಾ ಫಲಕ ಸೇರಿದಂತೆ ಇತರ ಅಗತ್ಯ ಮುಂಜಾಗೃತಾ ವ್ಯವಸ್ಥೆಗೆ ಪ್ರಾಕೃತಿಕ ವಿಕೋಪ ನಿಧಿಯಿಂದ 5 ಲಕ್ಷ ರೂಪಾಯಿಗಳನ್ನು ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭುರಿಗೆ ಸೂಚಿಸಿದರು.

ಮಾಣಿ- ಸಂಪಾಜೆ ರಸ್ತೆ ಹಾಗೂ ಘಾಟಿ ರಸ್ತೆಯ ಇಕ್ಕೆಲ ಗಳಲ್ಲಿ ವಿಸ್ತರಣೆಗೊಳಿಸಿದ್ದಲ್ಲಿ ಮಣ್ಣು ತುಂಬಿ ರುವ ಜಾಗದಲ್ಲಿ ಜಲ್ಲಿ ಕಲ್ಲುಗಳನ್ನು ಹಾಕಿ ಸಮತಟ್ಟುಗೊ ಳಿಸುವ ಹಾಗೂ ಮಳೆ ನೀರು ಹರಿದು ಹೋಗಲು ತಾತ್ಕಾಲಿಕ ಕಿರಿದಾದ ಚರಂಡಿ ವ್ಯವಸ್ಥೆ, ಪೇಯ್ಟಿಂಗ್ ಹಾಗೂ ಇತರ ತುರ್ತು ಕಾಮಗಾರಿಗಳನ್ನು ಜನವರಿ ಅಂತ್ಯದೊಳಗೆ ಮುಗಿಸುವುದಾಗಿ ಅಧಿಕಾರಿಗಳು ಈ ಸಂದರ್ಭ ಭರವಸೆ ನೀಡಿದರು.

ಶೀಘ್ರದಲ್ಲೇ ತಾತ್ಕಾಲಿಕ ಮೊಬೈಲ್ ಟವರ್ :
ಯಾವುದೇ ರೀತಿಯ ಅಪಘಾತ ಹಾಗೂ ಅಗತ್ಯ ಸಂದರ್ಭಗಳಲ್ಲಿ ಚಾರ್ಮಾಡಿ ಯಲ್ಲಿ ದೂರವಾಣಿ ಸಂಪರ್ಕ ಸಮಸ್ಯೆಯನ್ನು ನೀಗಿಸುವ ಸಲುವಾಗಿ ಶೀಘ್ರದಲ್ಲೇ ಬಿಎಸ್ಸೆನ್ನೆಲ್‌ನ ತಾತ್ಕಾಲಿಕ ಮೊಬೈಲ್ ಟವರ್‌ಗೆ ಕ್ರಮ ಕೆೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ತಿಳಿಸಿದರು. ಘಾಟಿಯಲ್ಲಿ ಅಗತ್ಯ ಸಂದರ್ಭಕ್ಕೆ ಎರಡು ಕ್ರೇನ್‌ಗಳನ್ನು ಸದಾ ಸಿದ್ಧವಾಗಿಡುವಂತೆ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಅವರು ಸೂಚಿಸಿದರು. ಈ ಮಾರ್ಗವಾಗಿ ಸಂಚರಿಸುವ ವಾಹನಗಳ ದಟ್ಟನೆಯನ್ನು ಐದು ದಿನಗಳ ಕಾಲ ಕ್ಯಾಮರಾ ಮೂಲಕ ಸಮೀಕ್ಷೆ ನಡೆಸುವಂತೆ ಎಸ್ಪಿ ಸೂಚಿಸಿದರು. ಚಾರ್ಮಾಡಿಯಲ್ಲಿ ಪ್ರಸ್ತುತ ಪೊಲೀಸ್ ಹೊರಠಾಣೆ ಕಾರ್ಯ ನಿರ್ವಹಿಸುತ್ತಿದ್ದು, ಬೆಳ್ತಂಗಡಿ ಠಾಣೆಯ ಪಿಎಸ್ಸೈ, ಎಸ್ಸೈ ಸೇರಿದಂತೆ ಆರು ಸಿಬ್ಬಂದಿ ಪುನರಾವರ್ತಿತ ನೆಲೆಯಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದಾರೆ ಎಂದು ಎಸ್ಪಿ ಡಾ.ಶರಣಪ್ಪ ತಿಳಿಸಿದರು.

Write A Comment