ಕನ್ನಡ ವಾರ್ತೆಗಳು

ಕುಂದಾಪುರ ಉಪವಿಭಾಗದ ನೂತನ ಡಿವೈ‌ಎಸ್ಪಿ ಎಮ್. ಮಂಜುನಾಥ ಶೆಟ್ಟಿ

Pinterest LinkedIn Tumblr

ಕುಂದಾಪುರ: ಕುಂದಾಪುರ ಉಪವಿಭಾಗದ ಡಿವೈ‌ಎಸ್ಪಿ ಆಗಿ ಎಮ್. ಮಂಜುನಾಥ ಶೆಟ್ಟಿ ಮಂಗಳವಾರ ಅಧಿಕಾರ ಸ್ವೀಕರಿಸಿದ್ದಾರೆ.

Kundapura_DYSP_Manjunatha Shetty (3) Kundapura_DYSP_Manjunatha Shetty Kundapura_DYSP_Manjunatha Shetty (1) Kundapura_DYSP_Manjunatha Shetty (2) Kundapura_DYSP_Manjunatha Shetty (5) Kundapura_DYSP_Manjunatha Shetty (4)

ಕುಂದಾಪುರದ ಡಿವೈ‌ಎಸ್ಪಿ ಕಛೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಂದಾಪುರ ತಾಲೂಕಿನ ಬಗ್ಗೆ ಇನ್ನಷ್ಟೇ ತಿಳಿಯಬೇಕಾಗಿದೆ. ಪತ್ರಕರ್ತರ ಹಾಗೂ ನಾಗರೀಕರ ಸಲಹೆ ಸಹಕಾರ ಪಡೆದುಕೊಂಡು ಇಲ್ಲಿ ಆಗಬೇಕಾದ ಕಾರ್ಯಗಳ ಬಗ್ಗೆ ಗಮನಹರಿಸಲಾಗುತ್ತದೆ. ಎಲ್ಲರ ಸಹಕಾರವಿದ್ದಾಗ ಮಾತ್ರವೇ ಉತ್ತಮ ಕಕಾರ್ಯವನ್ನು ಮಾಡಲು ಸಾಧ್ಯವಿದೆ ಎಂದರು.

ಈ ವೇಳೆ ಕುಂದಾಪುರ ನಗರದಲ್ಲಿ ಟ್ರಾಫಿಕ್ ವ್ಯವಸ್ಥೆ ಹದಗೆಟ್ಟಿರುವ ವಿಚಾರ ಗಮನಕ್ಕೆ ತಂದಿದ್ದು ಈ ಬಗ್ಗೆ ಗಮನಹರಿಸಿ ಶೀಘ್ರವೇ ಟ್ರಾಫಿಕ್ ವ್ಯವಸ್ಥೆ ಸರಿಪಡಿಸುವಲ್ಲಿ ಕ್ರಮಕೈಗೊಳ್ಳುವ ಭರವಸೆ ನೀಡಿದರು.

ಉಡುಪಿ ತಾಲೂಕಿನ ಕೆಂಜೂರು ಎಂಬ ಕುಗ್ರಾಮದಲ್ಲಿ ಜನಿಸಿದ ಮಂಜುನಾಥ ಶೆಟ್ಟಿ ಅವರು ಬಾರ್ಕೂರಿನ ನ್ಯಾಶನಲ್ ಜೂನಿಯರ್ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದು ಬಳಿಕ ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದರು. 1990 ರಲ್ಲಿ ಪೊಲೀಸ್ ಇಲಾಖೆ ಸೇರಿದ ಅವರು ಉಪನಿರೀಕ್ಷಕರಾಗಿ 1992ರಲ್ಲಿ ಉಪ್ಪಿನಂಗಡಿ, ಸುಬ್ರಮಣ್ಯ, ಬೆಳ್ತಂಗಡಿ ಸೇರಿದಂತೆ ಮಂಗಳೂರಿನ ಹಲವೆಡೆ ಸಲ್ಲಿಸಿದ್ದರು. ಬಳಿಕ 2001 ರಲ್ಲಿ ಇನ್ಸ್‌ಪೆಕ್ಟರ್ ಆಗಿ ಬಡ್ತಿ ಹೊಂದಿದ ಅವರು ಸಿ.ಐ.ಡಿ.ಯಲ್ಲಿ ೩ ವರ್ಷ, ಇಮಿಗ್ರೇಶನ್ ವಿಭಾಗದಲ್ಲಿ ಮೂರು ವರ್ಷ ಹಾಗೂ ಮಂಗಳೂರಿನಲ್ಲಿ ಟ್ರಾಫಿಕ್ ಇನ್ಸ್‌ಪೆಕ್ಟರ್ ಆಗಿದ್ದರು. 2012 ಅಕ್ಟೋಬರ್ ತಿಂಗಳಿನಲ್ಲಿ ಡಿವೈ‌ಎಸ್ಪಿ ಆಗಿ ಬಡ್ತಿ ಹೊಂದಿದ ಅವರು ಉಡುಪಿಯ ಕರಾವಳಿ ಕಾವಲು ಪಡೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಹೀಗೆ ಸುದೀರ್ಘ 25 ವರ್ಷಗಳ ಕಾಲ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಸದ್ಯ ಕುಂದಾಪುರ ಡಿವೈ‌ಎಸ್ಪಿ ಆಗಿದ್ದಾರೆ.

ಈ ಸಂದರ್ಭದಲ್ಲಿ ಕುಂದಾಪುರ ವೃತ್ತನಿರೀಕ್ಷಕ ದಿವಾಕಕರ ಪಿ.ಎಂ, ಕುಂದಾಪುರ ಠಾಣಾಧಿಕಾರಿ ನಾಸೀರ್ ಹುಸೇನ್, ಶಂಕರನಾರಾಯಣ ಠಾಣಾಧಿಕಾರಿ ದೇಜಪ್ಪ, ಮಹಿಳಾ ಠಾಣೆಯ ಪಿ‌ಎಸ್ಸೈ ಸುಜಾತಾ, ಸಂಚಾರಿ ಠಾಣೆ ಉಪನಿರೀಕ್ಷಕ ದೇವೆಂದ್ರ ಮೊದಲಾದವರು ಉಪಸ್ಥಿತರಿದ್ದು ನೂತನ ಡಿವೈ‌ಎಸ್ಪಿ ಅವರನ್ನು ಹೃತ್ಪೂರ್ವಕವಾಗಿ ಬರಮಾಡಿಕೊಂಡರು.

Write A Comment