ಕನ್ನಡ ವಾರ್ತೆಗಳು

ಆಳ್ವಾಸ್ ವಿರಾಸತ್-2015: ಪ್ರತಿಭೆ ಪ್ರದರ್ಶಿಸಿದ ಅಂಧ-ವಿಕಲಚೇತನ ಕಲಾವಿದರು

Pinterest LinkedIn Tumblr

Alvas_Virasat_3dDay_1

ಮೂಡುಬಿದಿರೆ, ಜ.11: ಇಲ್ಲಿನ ವಿದ್ಯಾಗಿರಿಯ ಪ್ಯಾಲೇಸ್ ಗ್ರೌಂಡ್‌ನ ವಿರಾಸತ್ ವೇದಿಕೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್-2015ರ 3ನೆ ದಿನ ಅಂಧ ಹಾಗೂ ವಿಕಲಚೇತನ ಕಲಾವಿದರು ತಮ್ಮ ಪ್ರತಿಭೆಯ ಮೂಲಕ ನೆರೆದವರನ್ನು ಮೋಡಿಗೊಳಿಸಿದರು.

ಅಂಧ ಕಲಾವಿದರ ಸುಮಧುರ ಕಂಠದಿಂದ ಹಳೆ ಮತ್ತು ಹೊಸ ಹಿಂದಿ ಚಲನಚಿತ್ರದ ಹಾಡುಗಳ ನಿನಾದ ‘ಅಖಿಯೋಂಕೆ ಝರೋಂಕೋ ಸೇ’ ಚಿತ್ರ ರಸಸಂಜೆ ವೇದಿಕೆಯ ಮುಂಭಾಗದಲ್ಲಿ ಸೇರಿರುವ ಪ್ರೇಕ್ಷಕರನ್ನು ಗಾಯನ ಲೋಕದಲ್ಲಿ ತೇಲಿಸಿದವು.

Alvas_Virasat_3dDay_2

ಮುಂಬೈನ ಸೋನಲ್ ಪ್ರೊಡಕ್ಷನ್ಸ್ ಹಾಗೂ ನಂದುಕದಮ್ಸ್ ತಂಡದ 30 ಅಂಧ ಕಲಾವಿದರು ನಡೆಸಿಕೊಟ್ಟ ಈ ಚಿತ್ರ ರಸಸಂಜೆಯಲ್ಲಿ ಓರ್ವ ಕಲಾವಿದ ಹೆಣ್ಣಿನ ಧ್ವನಿಯನ್ನೇ ಹೋಲುವ ರಾಗದೊಂದಿಗೆ ಹಾಡಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು.

ಉಳಿದ ಕಲಾವಿದರು ಮೈನೆ ಪ್ಯಾರ್ ಕಿಯಾ, ಧರ್ಮಾತ್ಮ, ಮೊಘಲ್-ಇ-ಆಝಾಮ್ ಮೊದಲಾದ ಹಲವು ಹಿಂದಿ ಸಿನೆಮಾ ಹಾಡುಗಳನ್ನು ಹಾಡಿ ಎಲ್ಲರ ಗಮನಸೆಳೆದರು. ಅಲ್ಲದೆ ಇದೇ ತಂಡದ ಕೆಲವು ಅಂಧ ಕಲಾವಿದರು ಹಾಡಿನ ಹಿನ್ನೆಲೆಯಲ್ಲಿ ಯೋಗ ಪ್ರದರ್ಶನವನ್ನು ನೀಡಿ ಪ್ರೇಕ್ಷಕರ ಮೆಚ್ಚುಗೆಯ ಕರತಾಡನಕ್ಕೆ ಪಾತ್ರರಾದರು.

Alvas_Virasat_3dDay_3 Alvas_Virasat_3dDay_4 Alvas_Virasat_3dDay_5

 Alvas_Virasat_3dDay_7 Alvas_Virasat_3dDay_6

Alvas_Virasat_3dDay_8 Alvas_Virasat_3dDay_9 Alvas_Virasat_3dDay_10 Alvas_Virasat_3dDay_11 Alvas_Virasat_3dDay_12 Alvas_Virasat_3dDay_13 Alvas_Virasat_3dDay_14 Alvas_Virasat_3dDay_15 Alvas_Virasat_3dDay_16 Alvas_Virasat_3dDay_19 Alvas_Virasat_3dDay_20 Alvas_Virasat_3dDay_21 Alvas_Virasat_3dDay_22

ಇದಲ್ಲದೆ ಹೊಸದಿಲ್ಲಿಯ ಸೈಯದ್ ಸಲ್ಲಾವುದ್ದೀನ್ ಪಾಶಾ ನಿರ್ದೇಶನದಲ್ಲಿ ಎಬಿಲಿಟಿ ಅನ್ಲಿಮಿಟೆಡ್ ಫೌಂಡೇಶನ್‌ನ ವಿಕಲಚೇತನರ ಸಾಹಸ ನೃತ್ಯ ‘ಮಿರಾಕಲ್ಸ್ ಆನ್ ವ್ಹೀಲ್ಸ್’ ಪ್ರದರ್ಶನಗೊಳ್ಳುವ ಮೂಲಕ ಸೇರಿದ ಜನರನ್ನು ನಿಬ್ಬೆರಗಾಗುವಂತೆ ಮಾಡಿತು.

Alvas_Virasat_3dDay_8 Alvas_Virasat_3dDay_9 Alvas_Virasat_3dDay_10 Alvas_Virasat_3dDay_11 Alvas_Virasat_3dDay_12 Alvas_Virasat_3dDay_13 Alvas_Virasat_3dDay_14 Alvas_Virasat_3dDay_15 Alvas_Virasat_3dDay_16 Alvas_Virasat_3dDay_19 Alvas_Virasat_3dDay_20 Alvas_Virasat_3dDay_21 Alvas_Virasat_3dDay_22 Alvas_Virasat_3dDay_23 Alvas_Virasat_3dDay_24 Alvas_Virasat_3dDay_25 Alvas_Virasat_3dDay_26 Alvas_Virasat_3dDay_27 Alvas_Virasat_3dDay_28 Alvas_Virasat_3dDay_29 Alvas_Virasat_3dDay_30 Alvas_Virasat_3dDay_31 Alvas_Virasat_3dDay_32 Alvas_Virasat_3dDay_33 Alvas_Virasat_3dDay_34 Alvas_Virasat_3dDay_35 Alvas_Virasat_3dDay_36 Alvas_Virasat_3dDay_37 Alvas_Virasat_3dDay_38 Alvas_Virasat_3dDay_39 Alvas_Virasat_3dDay_40

ಪಂಜಾಬ್‌ನ ಜಿ.ಸಿ. ನೈಲ್ ಕಾಲೇಜು ಪತ್ರಾನ್ ಇಲ್ಲಿನ ವಿದ್ಯಾರ್ಥಿಗಳಿಂದ ಪಂಜಾಬಿ ಜನಪದ ನೃತ್ಯ ವೈವಿಧ್ಯ, ಗುಜರಾತ್ ಅಹ್ಮದಬಾದ್‌ನ ರಂಗ ಮಲ್ಹರ್ ಪರ್ಫಾರ್ಮಿಂಗ್ ಆರ್ಟ್ಸ್‌ನ ಕಲಾವಿದರಿಂದ ಗುಜರಾತಿ ಜನಪದ ನೃತ್ಯ ವೈವಿಧ್ಯ ಹಾಗೂ ಆಳ್ವಾಸ್ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ವಿರಾಸತ್‌ನ ಮೂರನೆ ದಿನವೂ ಮುಂದುವರಿಯಿತು.

Write A Comment