ಕನ್ನಡ ವಾರ್ತೆಗಳು

10ನೇ ದಿನಕ್ಕೆ ಕಾಲಿಟ್ಟ ವಾರಾಹಿ ಸತ್ಯಾಗ್ರಹ; ಸ್ಥಳಕ್ಕೆ ಸಚಿವ ಸೊರಕೆ ಭೇಟಿ; ಮಾತುಕತೆ

Pinterest LinkedIn Tumblr

ಕುಂದಾಪುರ: ವಾರಾಹಿ ನೀರಿಗಾಗಿ ಉಡುಪಿ ಜಿಲ್ಲಾ ರೈತಸಂಘದ ವತಿಯಿಂದ ನಡೆಯುತ್ತಿರುವ ಸತ್ಯಾಗ್ರಹ ಇಂದಿಗೆ ೧೦ನೇ ದಿನಕ್ಕೆ ಕಾಲಿಡುತ್ತಿದ್ದು ಶನಿವಾರ ಮಧ್ಯಾಹ್ನದ ಸುಮಾರಿಗೆ ಉಡುಪಿ ಜಿಲ್ಲಾ ಉಅಸ್ತುವಾರಿ ಸಚಿವರು ದಿಡೀರ್ ಭೇಟಿ ನೀಡುವ ಮೂಲಕ ಸತ್ಯಾಗ್ರಹ ನಿರತರೊಡನೆ ಮಾತುಕತೆ ನಡೆಸಿದರು.

Varahi_Protest_Siddapura (1) Varahi_Protest_Siddapura

ಶನಿವಾರ ಮಧ್ಯಾಹ್ನದ ಸುಮಾರಿಗೆ ಸಿದ್ದಾಪುರದ ವಾರಾಹಿ ಯೋಜನೆ ಕಾರ್ಯನಿರ್ವಾಹಕ ಇಂಜಿನಿಯರ್ ಅವರ ಕಛೆರಿ ಸಮೀಪ ನಡೆಯುತ್ತಿರುವ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿದ ಅವರು ಸ್ಥಳಿಯರೊಂದಿಗೆ ಮಾತುಕತೆ ನಡೆಸಿದರು. ಈ ಸಂದರ್ಭ ಪ್ರತಿಭಟನಾಕಾರೌ ಇನ್ನು ಮೂರು ತಿಂಗಳುಗಳಳೊಳಗಾಗಿ ಸಂಬಂದಪಟ್ಟ ಸಚಿವರು ಹಾಗೂ ಅಧಿಕಾರಿಗಳನ್ನು ಒಗ್ಗೂಡಿಸಿ ವಾರಾಹಿ ನೀರನ್ನು ಕಾಲುವೆಗೆ ಹರಿಸಿಯೇ ಸಿದ್ಧ. ಒಂದೊಮ್ಮೆ ನೀರು ಹರಿಸದಿದಲ್ಲಿ ಉಗ್ರಮಟ್ಟದ ಹೋರಾಟ ಮಾಡುತ್ತೇವೆ ಎನ್ನುತ್ತಾ ರೈತರನ್ನು ಎರಹುಳು ಎಣಿಸುವುದು ಸರಿಯಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸೊರಕೆ ಅವರು ತಾನೂ ಒಬ್ಬ ರೈತ, ಸ್ಥಳದಲ್ಲಿನ ಪರಿಸ್ಥಿತಿಯ ಬಗ್ಗೆ ಸಂಬಂದಪಟ್ಟ ಸಚಿವರ ಗಮನಕ್ಕೆ ಈಗಾಗಲೇ ತರಲಾಗಿದೆ ಎಂದರು.

ಶುಕ್ರವಾರ ಕುಂದಾಪುರ ತಾಲೂಕುಪಂಚಾಯತ್ ಸರ್ವ ಸದಸ್ಯರು ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿ ಬಳಿಕ ವಾರಾಹಿ ನೀರಿಗಾಗಿ ನಡೆಯುತ್ತಿರುವ ಸತ್ಯಾಗ್ರಹದಲ್ಲಿ ಪಾಲ್ಘೊಂಡಿದರು. ಇದೇ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡುತ್ತಾ ರೈತಸಂಘದ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಶ್ಚಂದ್ರ ಶೆಟ್ಟಿ ಅವರು, ಜವನ್ದಾರಿಯುತ ಸಚಿವ ಶಾಸಕರು ಹಾಗೂ ಸಚಿವರು ಜನಪರವಾದ ಹೋರಾಟವಾದ ಈ ಸತ್ಯಾಗ್ರಹ ಸ್ಥಳಕ್ಕೆ ಬಂದು ರೈತರ ಸಮಸ್ಯೆಗಳಿಗೆ ಉತ್ತರ ಹೇಳುವ ಔದಾರ್ಯತೆ ತೋರಬೇಕಿತ್ತು, ನಾವು ಕರೆದು ಬರಲು ಇದು ಜನಪರವಾದ ಹೋರಾಟವೇ ಹೊರತು ಮದುವೆಯಲ್ಲ ಎಂದು ಚಾಟಿ ಬೀಸಿದ್ದರು.

ಅಲ್ಲದೇ ನಮ್ಮ ಹೋರಾಟವನ್ನು ಹತ್ತಿಕ್ಕುವ ಹಾಗೂ ಅದಕ್ಕೆ ವಿಭಿನ್ನ ಬಣ್ನಗಳನ್ನು ಕಟ್ಟಿ ಠೀಕಿಸುವ ಕೆಲಸವೂ ಆಗುತ್ತಿದೆ, ಇದಕ್ಕೆ ಮಣಿಯುವುದಿಲ್ಲ, ಎಷ್ಟು ವರ್ಷವಾದರೂ ಈ ಪ್ರತಿಭಟನೆ ಮುಂದುವರಿಯುತ್ತದೆ ಎಂದು ಗುಡುಗಿದ್ದರು. ಈ ಬೆನ್ನಲ್ಲೇ ಶುಕ್ರವಾರ ಸಂಜೆ ಸುಮಾರಿಗೆ ಬೈಂದೂರು ಶಾಸಕರಾದ ಕೆ. ಗೋಪಾಲ ಪೂಜಾರಿಯವರು ಕೆಲವು ಮಾಧ್ಯಮದವರಿಗೆ ಕರೆ ಮಾಡಿ ಜ. 16ಕ್ಕೆ ನೀರಾವರಿ ಸಚೈವರ ಸಮೇತ ಸಂಬಂದಪಟ್ಟ ಹಲವು ಸಚಿವರು ಸ್ಥಳಕ್ಕೆ ಆಗಮಿಸಿ ಚರ್ಚೆ ನಡೆಸುವ ಕುರಿತು ತಿಳಿಸಿದ್ದರು ಎನ್ನಲಾಗಿದ್ದು, ಶನಿವಾರ ಮಧ್ಯಾಹ್ನದ ಸುಮಾರಿಗೆ ಸಚಿವ ಸೊರಕೆಯವರು ಸತ್ಯಾಗ್ರಹ ನಡೆಯುವ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Write A Comment