ಕನ್ನಡ ವಾರ್ತೆಗಳು

ಬೆಂಗಳೂರಿನ ಯಲಹಂಕದಲ್ಲಿ ಪ್ರತಿಷ್ಠಿತ ಇನ್‌ಲ್ಯಾಂಡ್ ಸಂಸ್ಥೆಯ ‘ಇನ್‌ಲ್ಯಾಂಡ್ ಎಡಿಲಾನ್’ ವಿನೂತನ ವಸತಿ ಸಮುಚ್ಚಯಕ್ಕೆ ಶಿಲಾನ್ಯಾಸ

Pinterest LinkedIn Tumblr

Inland_edilon_pooja_1

ಬೆಂಗಳೂರು, ಜ.10: ‘ಇನ್‌ಲ್ಯಾಂಡ್’ ಸಂಸ್ಥೆಯು ಬೆಂಗಳೂರಿನ ವಿಮಾನ ನಿಲ್ದಾಣದ ಮುಖ್ಯ ರಸ್ತೆಯ ಸಮೀಪದ ರಸ್ತೆಯ ಯಲಹಂಕ ನ್ಯೂಟೌನ್ ನಗರದಲ್ಲಿ ನಿರ್ಮಿಸಲಿರುವ ತನ್ನ ಮಹತ್ವಾಕಾಂಕ್ಷೆಯ ‘ಇನ್‌ಲ್ಯಾಂಡ್ ಎಡಿಲಾನ್’ ವಿನೂತನ ವಸತಿ ಸಮುಚ್ಚಯಕ್ಕೆ ಶುಕ್ರವಾರ ಶಿಲಾನ್ಯಾಸ ನೆರವೇರಿತು.

ವಿವಿಧ ಧಾರ್ಮಿಕ ಗುರುಗಳಾದ ವೌಲಾನ ಅನ್ವರ್ ಸಾಯಿ, ಅರ್ಚಕ ಶ್ರೀನಿವಾಸ್ ಭಟ್ ಹಾಗೂ ಫಾ.ಜಾಕಿನ್ ಡಿಸೋಜ ಪ್ರಾರ್ಥನೆ ನೆರವೇರಿಸಿದರು. ಇದೇ ಸಂದರ್ಭ ‘ಇನ್‌ಲ್ಯಾಂಡ್ ಎಡಿಲಾನ್’ನ ಸಂಪೂರ್ಣ ಮಾಹಿತಿಯುಳ್ಳ ಬ್ರೋಷರ್‌ನ್ನು ಬಿಡುಗಡೆಗೊಳಿಸಲಾಯಿತು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಿರಾಜ್ ಅಹ್ಮದ್, ನಿರ್ದೇಶಕರುಗಳಾದ ಮೆಹರಾಜ್ ಯೂಸುಫ್, ವಹಾಜ್ ಯುಸೂಫ್, ಜನರಲ್ ಮ್ಯಾನೇಜರ್ ಜಯಪ್ರಕಾಶ್ ತುಂಬೆ, ಕಾನೂನು ಸಲಹೆಗಾರ ಜೆರೋನಾ ಡಿಸೋಜ, ಸಂಗೀತ ನಿರ್ದೇಶಕ ಗುರುಕಿರಣ್, ಚಿತ್ರನಟ ಜ್ಯೋತಿರಾಜ್ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.

Inland_edilon_pooja_2 Inland_edilon_pooja_3 Inland_edilon_pooja_4 Inland_edilon_pooja_5 Inland_edilon_pooja_6 Inland_edilon_pooja_7 Inland_edilon_pooja_8

Inland_edilon_pooja_12 Inland_edilon_pooja_11 Inland_edilon_pooja_10 Inland_edilon_pooja_9

Inland_edilon_pooja_13 Inland_edilon_pooja_14 Inland_edilon_pooja_15 Inland_edilon_pooja_16 Inland_edilon_pooja_17 Inland_edilon_pooja_18 Inland_edilon_pooja_19 Inland_edilon_pooja_20 Inland_edilon_pooja_21 Inland_edilon_pooja_22 Inland_edilon_pooja_23 Inland_edilon_pooja_24 Inland_edilon_pooja_25

ಈ ಸಂದರ್ಭ ಮಾತನಾಡಿದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಿರಾಜ್ ಅಹ್ಮದ್, ‘ಇನ್‌ಲ್ಯಾಂಡ್ ಎಡಿಲಾನ್’ ವಸತಿ ಸಮುಚ್ಚಯವು ಒಟ್ಟು 116 ಉನ್ನತ ಶ್ರೇಣಿಯ ಅಪಾರ್ಟ್‌ಮೆಂಟ್‌ಗಳನ್ನು ಹೊಂದಿರುತ್ತದೆ. ಈ ವಸತಿ ಸಮುಚ್ಚಯದ ಪ್ರತಿಯೊಂದು ಅಂತಸ್ತು 2 ಮತ್ತು 3 ಬೆಡ್‌ರೂಮ್‌ಗಳ 3 ಬ್ಲಾಕ್‌ಗಳನ್ನು ಹೊಂದಿದ್ದು, ಪ್ರತೀ ಬ್ಲಾಕ್‌ನಲ್ಲಿ 8 ಫ್ಲಾಟ್‌ಗಳಿರಲಿವೆ. ಇದು ತಳ, ನೆಲ ಮತ್ತು 4 ಅಂತಸ್ತುಗಳನ್ನು ಹೊಂದಿರಲಿದೆ. ‘ಇನ್‌ಲ್ಯಾಂಡ್ ಎಡಿಲಾನ್’ ಶಾಪಿಂಗ್ ಮಾಲ್, ಇಂಟರ್‌ನ್ಯಾಷನಲ್ ಸ್ಕೂಲ್, ಆಸ್ಪತ್ರೆ, ಕಾಲೇಜು ಹಾಗೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲೇ ನಿರ್ಮಾಣಗೊಳ್ಳಲಿದೆ ಎಂದು ಹೇಳಿದರು.

Write A Comment