ಕನ್ನಡ ವಾರ್ತೆಗಳು

ಮಂಗಳೂರು ವಿಮಾನ ನಿಲ್ದಾಣ : ಪ್ರಯಾಣಿಕರೇ ಸ್ವತಃ ಬೋರ್ಡಿಂಗ್ ಕಾರ್ಡ್ ಪಡೆಯಲು ಸೆಲ್ಫ್ ಚೆಕ್ ಇನ್ ಕಿಯೋಸ್ಕ್ ಸೇವೆ ಆರಂಭ

Pinterest LinkedIn Tumblr

Mangalore_Airport_Pics

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೇ ಸ್ವತಃ ಬೋರ್ಡಿಂಗ್ ಕಾರ್ಡ್ ಪಡೆದುಕೊಳ್ಳುವ ಸೆಲ್ಫ್ ಚೆಕ್ ಇನ್ ಕಿಯೋಸ್ಕ್ ಸೇವೆಯನ್ನು ಶುಕ್ರವಾರ ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ಜೆ. ಟಿ. ರಾಧಾಕೃಷ್ಣ ಉದ್ಘಾಟಿಸಿದರು.

ಈ ಸಂದರ್ಭ ಜೆಟ್ ಏರ್‌ವೇಸ್ ನ ಗ್ಲಾಡ್‌ವಿನ್ ಮಸ್ಕರೇಞಸ್, ಏರ್ ಇಂಡಿಯಾದ ಸುಧೇರ್ ಭಟ್, ಸ್ಪೈಸ್ ಜೆಟ್‌ನ ಬಿದ್ದಪ್ಪ ಮತ್ತಿತರರು ಉಪಸ್ಥಿತರಿದ್ದರು.

ಪ್ರಯಾಣಿಕರು ನಾನಾ ವಿಮಾನ ಸೇವಾ ಸಂಸ್ಥೆಗಳ ಕೌಂಟರ್‌ಗೆ ತೆರಳಿ ಕ್ಯೂ ನಿಂತು ಬೋರ್ಡಿಂಗ್ ಪಾಸ್ ಪಡೆದುಕೊಳ್ಳುವ ಬದಲು, ಈ ಸ್ವಯಂ ಚಾಲಿತ ಕಂಪ್ಯೂಟರೀಕೃತ ಯಂತ್ರದಿಂದ ಸ್ವತಃ ಪಿಎನ್‌ಆರ್ ನಂಬರ್ ಬಳಸಿಕೊಂಡು ಬೋರ್ಡಿಂಗ್ ಪಾಸ್ ಪಡೆದುಕೊಳ್ಳಬಹುದು.

ದೇಶದ ನಾನಾ ವಿಮಾನ ನಿಲ್ದಾಣಗಳಾದ ಕೊಲ್ಕತ್ತಾ, ಭುವನೇಶ್ವರ್, ರಾಯಿಪುರ ಮುಂತಾದ ಕಡೆ ಇಂತಹ ಸೌಲಭ್ಯ ಆರಂಭಿಸಲಾಗಿದ್ದು, ಇದೀಗ ಮಂಗಳೂರಿನಲ್ಲಿ ಈ ಸೇವೆ ಆರಂಭಿಸಲಾಗಿದೆ.

Write A Comment