ಕನ್ನಡ ವಾರ್ತೆಗಳು

ಮಳಿ ಮ್ಯಾಜಿಕ್ ಸಿಸ್ಟರ್ಸ್‌‌ಗೆ ಅತಿ ಕಿರಿಯ ಜಾದೂಗಾರ್ತಿ ವಿಶ್ವದಾಖಲೆ ಗೌರವ

Pinterest LinkedIn Tumblr

mali_sisters_kudla

ಮಂಗಳೂರು: ಮಳಿ ಮ್ಯಾಜಿಕ್ ಸಿಸ್ಟರ್ಸ್‌ ಎಂದೇ ಖ್ಯಾತಿ ಗಳಿಸಿರುವ ಪುಟಾಣಿ ಜಾದೂಗಾರ್ತಿಯರಾದ ಅಪೂರ್ವ ಮತ್ತು ಅಂಜನಾ ವಿಶ್ವದ ಅತ್ಯಂತ ಕಿರಿಯ ಜಾದೂ ಗಾರ್ತಿಯರೆಂಬ ವಿಶ್ವ ದಾಖಲೆ ಗೌರವಕ್ಕೆ ಪಾತ್ರರಾಗಿದ್ದಾರೆ.

ಈ ಪುಟಾಣಿಗಳು ತಮ್ಮ ಒಂದೂವರೆ ವರ್ಷ ಪ್ರಾಯದಿಂದಲೇ ಜಾದೂ ಪ್ರದರ್ಶನ ನೀಡಿ ರುವ ಬಗ್ಗೆ ದಾಖಲೆಗಳನ್ನು ಪರಿಗಣಿಸಿದ ಲಂಡನ್ ಮೂಲದ ವಾರ್ ಆಫ್ ವರ್ಲ್ಡ್ ರೆಕಾರ್ಡ್ಸ್ ಫೌಂ ಡೇಶನ್ ಒಟ್ಟು ನಾಲ್ಕು ವಿಭಾಗಗಳಲ್ಲಿ ವಿಶ್ವ ದಾಖಲೆ ಪ್ರಮಾಣಪತ್ರ ಮತ್ತು ಚಿನ್ನದ ಪದಕಗಳನ್ನು ನೀಡಿದೆ. ಇವರು ಮಂಗಳಾ ಮ್ಯಾಜಿಕ್ ವರ್ಲ್ಡ್ ಮೂಲಕ 500ಕ್ಕೂ ಹೆಚ್ಚು ಜಾದೂ ಪ್ರದರ್ಶನಗಳನ್ನು ನೀಡಿದ್ದಾರೆ ಎಂದು ಸಹೋದರಿಯರ ತಂದೆ, ಜಾದೂಗಾರ ರಾಜೇಶ್ ಮಳಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೆನರಾ ಹೈಸ್ಕೂಲ್‌ನ (ಸಿಬಿಎಸ್‌ಇ) 3ನೇ ತರಗತಿ ವಿದ್ಯಾರ್ಥಿನಿ ಅಪೂರ್ವ ಮಳಿ ಅವರಿಗೆ ಯಂಗೆಸ್ಟ್ ಸ್ಲೈಟ್ ಆಫ್ ಹ್ಯಾಂಡ್ ಮೆಜೀಶಿ ಯನ್ ಮತ್ತು ಯಂಗೆಸ್ಟ್ ಬ್ಲೈಂಡ್ ಫೋಲ್ಡೆಡ್ ಮೋಟರ್ ಬೈಕ್ ರೈಡರ್ ಎಂದು ವಿಶ್ವದಾಖಲೆ ಪ್ರಮಾಣಪತ್ರಗಳು ಲಭಿಸಿವೆ. 2ನೇ ತರಗತಿ ವಿದ್ಯಾರ್ಥಿನಿ ಅಂಜನಾ ಮಳಿ ಅವರಿಗೆ ಯಂಗೆಸ್ಟ್ ಇಲ್ಯೂಷನಿಸ್ಟ್ ಎಂಬ ಪ್ರಮಾಣಪತ್ರ ಲಭಿಸಿದೆ. ಮಾತ್ರವಲ್ಲದೆ ಅವರಿಬ್ಬರೂ ಅತಿ ಹೆಚ್ಚು ಜಾದೂ ಪ್ರದರ್ಶನ ನೀಡಿರುವ ವಿಶ್ವದ ಅತಿ ಕಿರಿಯ ಸಹೋದರಿಯೆಂಬ ಪ್ರಮಾಣಪತ್ರವೂ ಲಭಿಸಿದೆ ಎಂದು ಅವರು ತಿಳಿಸಿದರು.

ಖ್ಯಾತ ಜಾದೂಗಾರ ಕುದ್ರೋಳಿ ಗಣೇಶ್, ಕೆನರಾ ಹೈಸ್ಕೂಲ್ ಸಿಬಿಎಸ್‌ಇ ಪ್ರಿನ್ಸಿಪಾಲ್ ಜೋಯ್ ಜೆ. ರೈ, ಮಳಿ ಸಹೋದರಿಯರ ತಾಯಿ ಶುಭಾರಾಜ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Write A Comment