ಕನ್ನಡ ವಾರ್ತೆಗಳು

ವಾರಾಹಿ ಧರಣಿ ಹತ್ತಿಕ್ಕಲು ಸಚಿವ ಸೊರಕೆ ಯತ್ನ ಮಾಡ್ತಿದ್ದಾರೆಯೇ..?; ನಾಲ್ಕನೇ ದಿನಕ್ಕೆ ಕಾಲಿರಿಸಿದ ಅಹೋರಾತ್ರಿ ವಾರಾಹಿ ನೀರಿಗಾಗಿ ಪ್ರತಿಭಟನೆ

Pinterest LinkedIn Tumblr

ಕುಂದಾಪುರ: ವಾರಾಹಿ ಸಂತ್ರಸ್ಥರ ಮಾತುಗಳನ್ನು ಕೇಳಿದ್ದಾಗ, ವಾರಾಹಿ ಇಲಾಖೆಯು ಮೂಲ ಉದ್ದೇಶ ಮರೆತಂತೆ ಇದೆ. ವಾರಾಹಿ ಯೋಜನೆ ಸರಿಯಾಗಿದ್ದಿದ್ದರೆ, ಇಂದು ಬ್ರಹ್ಮವರದ ಸಕ್ಕರೆ ಕರ್ಖಾನೆ ಉಳಿಯುತ್ತಿತ್ತು. ವಾರಾಹಿ ಕಾಲುವೆಯಲ್ಲಿ ನೀರು ಹರಿಸುವ ಬಗ್ಗೆ ಅರಣ್ಯ, ನೀರಾವರಿ, ಕಂದಾಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮಾತನಾಡಿ, ಜ.14 ಅಥವಾ 15 ನೇ ದಿನಾಂಕದಂದು ಈ ಭಾಗಕ್ಕೆ ಕರೆತರಲಾಗುವುದು. ಹಾಗೇಯೆ ಕಾರ್ಕಳದಲ್ಲಿ ನಡೆಯಲಿರುವ ಮಹಾ ಮಸ್ತಾಭಿಷೇಕಕ್ಕೆ, ಮುಖ್ಯಮಂತ್ರಿಗಳು ಆಗಮಿಸಲಿದ್ದು ಅವರೊಂದಿಗೆ ಇದರ ಬಗ್ಗೆ ಚರ್ಚಿಸಲಾಗುತ್ತದೆ ಎಂದು ಕೇಂದ್ರ ಸರಕಾರದ ಮಾಜಿ ಸಚಿವ ಹಾಗೂ ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಅವರು ಹೇಳಿದರು.

Varahi_Raitha Sangha_Protest

ಅವರು ನಾಲ್ಕನೇ ದಿನಕ್ಕೆ ಕಾಲಿರಿಸಿದ ಉಡುಪಿ ಜಿಲ್ಲಾ ರೈತ ಸಂಘದ ನೇತ್ರತ್ವದಲ್ಲಿ ವಾರಾಹಿ ನೀರಿಗಾಗಿ ವಾರಾಹಿ ಕಚೇರಿ ಎದುರು ನಡೆಯುತ್ತಿರುವ ಅಹೋರಾತ್ರಿ ಪ್ರತಿಭಟನೆಯ ಸಭೆಗೆ ಆಗಮಿಸಿ, ಸಂತ್ರಸ್ಥರ ಹಾಗೂ ರೈತ ಸಂಘಟನೆಯ ಅಭಿಪ್ರಾಯ ಕೇಳಿದ ನಂತರ ಮಾತನಾಡಿದರು.

ವಾರಾಹಿ ಯೋಜನೆ ಆರಂಭಗೊಂಡು 35 ವರ್ಷದ ನಂತರ ಅಧಿಕಾರಿಗಳು ಡಿಮಂಡ್ ಫಾರೇಸ್ಟ್ ಸಮಸ್ಯೆ, ಭೂಸ್ವಾಧಿನ ಆಗಲಿಲ್ಲ ಎಂದು ಹೇಳುವುದು ಸರಿಯಲ್ಲ. ರೈತ ಸಂಘಟನೆಯು ಮಾಡುತ್ತಿರುವ ಪ್ರತಿಭಟನೆಯು, ಪಕ್ಷದ ವಿರೂಧ ವಲ್ಲ. ವಾರಾಹಿಯ ನೀರಿಗಾಗಿ ಪ್ರತಿಭಟನೆ. ವಾರಾಹಿ ಯೋಜನೆ ಸರಿಪಡಿಸುವ ಅಂತೀಮ ಅಧಿಕಾರಿಗಳನ್ನು ಸರಕಾರ ನೇಮಿಸಬೇಕು. ಇದು ಸರಕಾರದ ಜವಬ್ದಾರಿಯೂ ಕೂಡ. ನಾನೂ ಪ್ರತಿಭಟನೆ ಹಿಂದಕ್ಕೆ ಪಡೆಯಿರಿ ಎಂದು ಹೇಳುತ್ತಿಲ್ಲ. ಪ್ರತಿಭಟನೆ ಹಿಂದಕ್ಕೆ ಪಡೆಯುವ ನಿರ್ಧಾರ ಸಂಘಟನೆಗೆ ಬಿಟ್ಟಿದ್ದು. ನಾನೂ ಸರಕಾರದಲ್ಲಿ ಮಾತನಾಡುವ ಕೆಲಸ ಮಾಡುತ್ತೆನೆ ಎಂದು ಹೇಳಿದರು.

ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಚಂದ್ರ ಶೆಟ್ಟಿ ಅವರು ಆಸ್ಕರ್ ಫೆರ್ನಾಂಡಿಸ್ ಅವರೊಂದಿಗೆ ವಾರಾಹಿಯ ಬಗ್ಗೆ, ಜವಬ್ದಾರಿ ವಹಿಸಿಕೊಳ್ಳುವ ಹಾಗೂ ಜವಬ್ದಾರಿ ಹೇಳಿಕೊಳ್ಳುವ ಸರಕಾರ ಹಾಗೂ ಅಧಿಕಾರಿಗಳು ಇಲ್ಲದಿದ್ದ ಮೇಲೆ ರೈತರು ಎನ್ನು ಮಾಡಬೇಕು. ವಾರಾಹಿ ಯೋಜನೆ ರೈತರ ಭೂಮಿ, ಸರಕಾರದ ಹಣ ಬಳಸಿಕೊಂಡು ವಿದ್ಯುತ್ ಉತ್ಪಾದಿಸುವ ಸಂಚು ಇದ್ದಾಗಿದೆ. ಇಲ್ಲಿ ತಯಾರಾಗುವ ವಿದ್ಯುತ್ ಸಾಗಣಿಕೆಗೆ, ಕಾಡು ಕಡಿದು ವಿದ್ಯುತ್ ಲೈನ್ ಮಾಡುವಾಗ ಅರಣ್ಯ ಅಡ್ಡ ಬರುದಿಲ್ಲ. ಕಾಲುವೆ ಮಾಡುವಾಗ ಮಾತ್ರ ಅರಣ್ಯ ಅಡ್ಡ ಬರುತ್ತದೆ ವಾರಾಹಿ ಇಲಾಖೆಗೆ. ಒಂದು ಯೋಜನೆಗೆ ಎನ್‌ಓಸಿ ಸಿಗದೆ, ಯೋಜನೆ ಆರಂಭಿಸಲು ಸಾಧ್ಯವೇ. ವಾರಾಹಿ ಯೋಜನೆ ಆರಂಭಗೊಂಡು ೩೫ವರ್ಷಗಳು ಕಳೆದರು, ಇಲ್ಲಿಯ ತನಕ ಇಲಾಖೆಯು ಭೂಸ್ವಾಧಿನ, ಅರಣ್ಯ ಪರವಾನಿಗೆ ಪಡೆಯಲಿಲ್ಲ. ಇಲ್ಲಿಯ ತನಕ ಕಾಮಗಾರಿ ಮಾಡಿದ ಗುತ್ತಿಗೆದಾರರಲ್ಲಿ ಕೆಲಸ ಮಾಡಿಸಿಕೊಳ್ಳಲು ಇಲಾಖೆಗೆ ಆಗಲ್ಲಿಲ್ಲ. ಆದರೆ ಗುತ್ತಿಗೆದಾರರಿಗೆ ಇ‌ಎಫ್‌ಐ ಮಾಡಿಕೊಟ್ಟಿದ್ದಾರೆ. ಇತಂಹ ಬದ್ದತೆ ಇಲ್ಲದ ಅಧಿಕಾರಿಗಳಿಂದ ಇನ್ನೂ ೩೫ವರ್ಷಗಳು ಹೊದರು, ಕಾಲುವೆಯಲ್ಲಿ ನೀರು ಬಿಡಲು ಸಾಧ್ಯವಿಲ್ಲ. ಸರಕಾರಕ್ಕೆ ವಾರಾಹಿ ಯೋಜನೆ ಮಾಡಲು ಸರಕಾರಕ್ಕೆ ಇಷ್ಟ ಇದ್ದರೆ ಮಾಡಲಿ. ಒಂದು ವೇಳೆ ವಿದ್ಯುತ್ ಉತ್ಪಾದನೆಗಾಗಿ ಮಾತ್ರ ವಾರಾಹಿ ಯೋಜನೆಯಾದರೆ, ಸರಕಾರ ಸ್ವಷ್ಟ ಪಡಿಸಲಿ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ರೈತ ಸಂಘ ಆಕ್ರೋಶ: ರೈತ ಸಂಘವು ವಾರಾಹಿ ನೀರಿಗಾಗಿ ಹೋರಾಟಗಳನ್ನು ಮಾಡುತ್ತಿದ್ದರೆ, ಇತ್ತ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ ಸೊರಕೆ ಪ್ರತಿಭಟನೆ ಹತ್ತಿಕ್ಕುವ ಪ್ರಯತ್ನ ಮಾಡುತ್ತಾರೆ. ಕಾಂಗ್ರೆಸ್ ಪಕ್ಷದಲ್ಲಿ ಗೆದ್ದು, ಸಚಿವರಾದ ವಿನಯ ಕುಮಾರ ಸೊರಕೆ ಅವರು ಬೇರೆ ಪಕ್ಷದ ವಕ್ತರಾರ ಮೂಲಕ ಧರಣಿ ನಿಯಂತ್ರಿಸಲು ನೋಡುತ್ತಿದ್ದಾರೆ. ಉಡುಪಿ ಜಿಲ್ಲಾ ಇತ್ತಿಹಾಸದಲ್ಲಿಯೇ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ನಡುವೆ ಸಂಘರ್ಷ ಎರ್ಪಟಿದ್ದಿಲ್ಲ. ಇತಂಹ ಸಚಿವರು ಸಂಘರ್ಷವನ್ನು ತಂದು ಹಾಕಿದ್ದರು. ಸರಿಯಾದನ್ನು ಸರಿಯೆಂದು ಹೇಳದ ಸಚಿವರು ಹಾಗೂ ಸರಕಾರ ಯಾಕೇ ಬೇಕು ಎಂದು ಆಸ್ಕರ್ ಫೆರ್ನಾಂಡಿಸ್, ಕಾಂಗ್ರೆಸ್ ಪಕ್ಷದ ರಾಜ್ಯ ಕೆಪಿಸಿಸಿ ಕಾರ್ಯದರ್ಶಿ ಎಂ.ಎ. ಗಪೂರ್ ಹಾಗೂ ಉಡುಪಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹಾಗೂ ಶಾಸಕ ಕೆ. ಗೋಪಾಲ ಪೂಜಾರಿ ಎದುರೇ ಉಡುಪಿ ಜಿಲ್ಲಾ ಸಂಘ ಹಾಗೂ ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಚಂದ್ರ ಶೆಟ್ಟಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ವಾರಾಹಿ ನೀರಿಗಾಗಿ ಪ್ರತಿಭಟನೆಯ ನಾಲ್ಕನೇ ದಿನದ ಪ್ರತಿಭಟನೆಯ ನೇತ್ರತ್ವವನ್ನು ಬೆಳ್ವೆ ಮತ್ತು ಹಾರ್ದಳ್ಳಿ- ಮಂಡಳ್ಳಿ ಗ್ರಾಮದವರು ಹಾಗೂ ಕುಂದಾಪುರ ತಾಲೂಕಿನ ಇತರ ಸಂಘಟನೆಗಳು ವಹಿಸಿದರು.

ತಾ. ಪಂ. ಸದಸ್ಯರಾದ ರಾಜು ಪೂಜಾರಿ ಬೈಂದೂರು, ಸದಾನಂದ ಶೆಟ್ಟಿ ಕೆದೂರು, ಪ್ರದೀಪ ಕುಮಾರ ಶೆಟ್ಟಿ ಬದ್ಕಲ್‌ಕಟ್ಟೆ, ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಸಂಘಟನೆಯ ಜಿಲ್ಲಾಧ್ಯಕ್ಷ ಮುರುಳಿಧರ ಶೆಟ್ಟಿ, ಉಡುಪಿ ಜಿಲ್ಲಾ ರೈತ ಸಂಘದ ಪದಾಧಿಕಾರಿಗಳಾದ ಮಲ್ಯಾಡಿ ಶಿವರಾಮ ಶೆಟ್ಟಿ, ಬೆಳ್ವೆ ಸತೀಶ್ ಕಿಣಿ, ಜಯರಾಮ ಶೆಟ್ಟಿ ಸೂರ್‍ಗೋಳಿ, ಚೋರಾಡಿ ಅಶೋಕ ಕುಮಾರ ಶೆಟ್ಟಿ, ಶಾಡಿಗುಂಡಿ ರಾಜೀವ ಶೆಟ್ಟಿ, ಪ್ರಕಾಶ್ಚಂದ್ರ ಶೆಟ್ಟಿ ಕಂಬದಕೋಣಿ, ಬಲಾಡಿ ಸಂತೋಷ್‌ಕುಮಾರ ಶೆಟ್ಟಿ, ಸದಾಶಿವ ಶೆಟ್ಟಿ ಶಂಕರನಾರಾಯಣ, ಬಿದ್ಕಲ್‌ಕಟ್ಟೆ ಹರಿಪ್ರಸಾದ್ ಶೆಟ್ಟಿ, ರೋಹಿತ್ ಕುಮಾರ ಶೆಟ್ಟಿ ತೊಂಬತ್ತು, ವಿಕಾಸ್ ಹೆಗ್ಡೆ ಬಸ್ರೂರು, ಎಸ್.ಕೆ. ವಾಸುದೇವ ಪೈ, ಸತೀಶ್ ಕುಮಾರ ಶೆಟ್ಟಿ ಕಡ್ರಿ, ಎಚ್. ಸುಧಾಕರ ಶೆಟ್ಟಿ ಹಾಗೂ ರೈತ ಸಂಘದ ವಿವಿಧ ಕಡೆಯ ಮುಖಂಡರು ಮತ್ತು ಮುಂತಾದವರು ಉಪಸ್ಥಿತರಿದರು.

Write A Comment