ಕನ್ನಡ ವಾರ್ತೆಗಳು

ಸಂಘಟನೆಯ ಮೂಲಕ ದಲಿತ ಹಕ್ಕುಗಳನ್ನು ಪಡೆಯಬೇಕು; ಸಾಮಾಜಿಕ ಹೋರಾಟಗಾರ ಜಯನ್ ಮಲ್ಪೆ

Pinterest LinkedIn Tumblr

ಕುಂದಾಪುರ: ರಾಜ್ಯದಲ್ಲಿ ಹರಿದು ಹಂಚಿ ಹೋಗಿರುವ ವಿವಿಧ ದಲಿತ ಸಂಘಟನೆಯ ಮುಖ್ಯಸ್ಥರು ಒಟ್ಟುಗೂಡಿ ಒಂದೇ ವೇದಿಕೆಯಡಿಯಲ್ಲಿ ನಿರ್ಮಿಸಿಕೊಂಡ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕೆ‌ಎಸ್‌ಡಿ‌ಎಸ್‌ಎಸ್). ಇಡೀ ದೇಶದಲ್ಲಿಯೇ ಅತ್ಯಂತ ಮೂಲ ನಿವಾಸಿಗಳಾಗಿ, ಬದುಕಿನುದ್ದಕ್ಕೂ ಬವಣೆ ಪಡುತ್ತಿರುವ ದಲಿತ ಸಮುದಾಯಕ್ಕೆ ಹಲವು ಸಂಘಟನೆಗಳಿದ್ದರೂ ಸಶಕ್ತತೆಯತ್ತ ಮುಖಮಾಡಲು ಸಾಧ್ಯವಾಗಿಲ್ಲ. ಆ ನಿಟ್ಟಿನಲ್ಲಿಯೇ ವಿವಿಧ ಸಂಘಟನೆಗಳ ಸಮಾನಮನಸ್ಕರು ಒಟ್ಟಸೇರಿ ಚರ್ಚಿಸಿದರ ಪರಿಣಾಮವೇ ಈ ರೀತಿಯ ಒಂದು ಹೊಸ ವೇದಿಕೆಗೆ ಕಾರಣವಾಗಿದೆ. ಸಂಘಟನೆಯ ಮೂಲಕ ದಲಿತ ಹಕ್ಕುಗಳನ್ನು ಪಡೆಯುವುದು ಮತ್ತು ದಲಿತರು ತನ್ಮೂಲಕ ಮುಖ್ಯವಾಹಿನಿಯತ್ತ ಬರುವುದು ಈ ಸಂಘಟನೆ ಏಕಮಾತ್ರ ಉದ್ದೇಶವಾಗಿದೆ ಎಂದು ಸಾಮಾಜಿಕ ಹೋರಾಟಗಾರ ಜಯನ್ ಮಲ್ಪೆ ಹೇಳಿದರು.

DSS_Taluku_Sammelana

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕೆ‌ಎಸ್‌ಡಿ‌ಎಸ್‌ಎಸ್)ನ ಕುಂದಾಪುರ ತಾಲೂಕು ಸಮಿತಿಯ ಪದಗ್ರಹಣ ಕಾರ್ಯಕ್ರಮ ಭಾನುವಾರ ನಗರದ ಅಂಬೇಡ್ಕರ್ ಸಭಾಭವನದಲ್ಲಿ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ಶಪಥ ಬೋಧಿಸಿ ಮಾತನಾಡಿದರು.

ಹಿರಿಯ ಸಾಹಿತಿ, ಕುಂದಾಪುರದಲ್ಲಿ ಪ್ರಥಮ ಬಾರಿಗೆ ದಲಿತ ಸಂಘಟನೆಯನ್ನು ಸ್ಥಾಪಿಸಿದ ಹಿರಿಯ ದಲಿತ ನಾಯಕ ಕೆ.ಕೆ.ಕಾಳಾವರ್ಕರ್ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಕುಂದಾಪುರ ಪುರಸಭೆಯ ಅಧ್ಯಕ್ಷೆ ಯು.ಎಸ್. ಕಲಾವತಿ ಅಂಬೇಡ್ಕರ್ ಭಾವಚಿತ್ರಕ್ಕೆ ಹಾರಾರ್ಪಣೆ ಮಾಡಿದರು.

ಇದೇ ಸಂದರ್ಭದಲ್ಲಿ ಕಸ್ತೂರಿ ರಂಗನ್ ವರದಿ ದಲಿತರಿಗೆ ಹಾಗೂ ಬುಡಕಟ್ಟು ಸಮುದಾಯಗಳಿಗೆ ವರವೋ ಶಾಪವೋ ಎಂಬ ವಿಷಯದಲ್ಲಿ ವಿಚಾರ ಸಂಕಿರಣ ನಡೆಯಿತು.

ಉಡುಪಿ ಜಿಲ್ಲಾ ಸಂಚಾಲಕ ಶ್ಯಾಮ್‌ರಾಜ್ ಭಿರ್ತಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ದ.ಸಂ.ಸ ಹೋರಾಟಗಾರ ನಾರಾಯಣ ಮಣೂರು, ಪತ್ರಕರ್ತ ಜಾನ್ ಡಿಸೋಜಾ, ನಿವೃತ್ತ ಕಂದಾಯ ಅಧಿಕಾರಿಗಳಾದ ಜಯಕರ ಪುತ್ತೂರು, ತಾಲೂಕು ಸಂಚಾಲಕ ರಾಜು ಬೆಟ್ಟಿನ ಮನೆ, ಗಿರೀಶ್ ಕುಮಾರ್ ಗಂಗೊಳ್ಳಿ, ವಾಸುದೇವ ಮುದೂರು, ಅಣ್ಣಪ್ಪ ಬೀಜಾಡಿ ಮತ್ತು ವಿವಿಧ ಗ್ರಾಮ ಶಾಖೆಯ ಸಂಚಾಲಕರು ಉಪಸ್ಥಿತರಿದ್ದರು. ವಕೀಲ ಟಿ. ಮಂಜುನಾಥ ಗಿಳಿಯಾರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

Write A Comment