ಮಡಿಕೇರಿ: ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದು ವ್ಯಾಪ್ತಿಯ ಚೇರಳ ಶ್ರೀಮಂಗಲ ಗ್ರಾಮದ ಬಿ.ಎಂ.ಬೋಪಯ್ಯ ಎಂಬವರ ತೋಟದಿಂದ ದಿನಾಂಕ 2020 ನವೆಂವರ್ ತಿಂಗಳಿನಲ್ಲಿ ಯಾರೋ ಕಳ್ಳರು ಬೀಟಿ ಮರವನ್ನು ಕಳವು ಮಾಡಿಕೊಂಡು ಹೋಗಿದ್ದ ಬಗ್ಗೆ 20.4.2021 ರಂದು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲಾಗಿತ್ತು.


ಪ್ರಕರಣದ ತನಿಖೆಯನ್ನು ಕೈಗೊಂಡ ಮಡಿಕೇರಿ ಗ್ರಾಮಾಂತರ ಠಾಣೆಯ ಪೊಲೀಸ್ ನಿರೀಕ್ಷಕ ಎಸ್.ಎಸ್.ರವಿಕುಮಾರ್ ಅವರು ಪೊಲೀಸ್ ವರಿಷ್ಠಾಧಿಕಾರಿ ಮತ್ತು ಮಡಿಕೇರಿ ಉಪ ವಿಭಾಗದ ಪ್ರಭಾರ ಡಿವೈ.ಎಸ್.ಪಿ ಹೆಚ್.ಎಂ.ಶೈಲೇಂದ್ರ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳೊಂದಿಗೆ ಕಳ್ಳತನ ಆರೋಪಿಗಳನ್ನು ಬಂಧಿಸಿದ್ದಾರೆ.
ಸೋಮವಾರಪೇಟೆ ತ್ಯಾಗತ್ತೂರು ನಿವಾಸಿ ಇಬ್ರಾಹಿಂ (27)ವರ್ಷ, ವಾಲ್ನೂರು ತ್ಯಾಗತ್ತೂರು ಗ್ರಾಮ, ಸೋಮವಾರಪೇಟೆ ತಾಲ್ಲೂಕು, ಸಿದ್ದಾಪುರದ ಉಮ್ಮರ್ ಎಂ.ಕೆ. (33), ಮೈಸೂರು ನಗರದ ವಾಸಿಮ್ ಅಕ್ರಮ್ (25) ಬಂಧಿತ ಆರೋಪಿಗಳು. ಅವರಿಂದ ಕಳವು ಮಾಡಿದ 1.5 ಲಕ್ಷ ರೂಪಾಯಿ ಮೌಲ್ಯದ ಬೀಟಿ ಮರದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಮಡಿಕೇರಿ ಗ್ರಾಮಾಂತರ ಠಾಣೆಯ ಪಿ.ಐ. ರವಿಕಿರಣ್ ಎಸ್.ಎಸ್ ಸಿಬ್ಬಂದಿಗಳಾದ ರವಿಕುಮಾರ್, ಮಹೇಶ್ ಎಂ.ಕೆ, ದಿನೇಶ್ ಕೆ.ಡಿ. ಡಿಸಿಐಬಿ ವಿಭಾಗದ ಯೋಗೇಶ್, ನಿರಂಜನ್, ಅನಿಲ್ ಕುಮಾರ್ ಮತ್ತು ಶರತ್ ರವರು ಭಾಗಿಯಾಗಿದ್ದು ಇವರ ಕಾರ್ಯವೈಖರಿಯನ್ನು ಕೊಡಗು ಎಸ್ಪಿ ಕ್ಷಮಾ ಮಿಶ್ರಾ ಪ್ರಶಂಶಿಸಿದ್ದಾರೆ.
Comments are closed.