ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯವು ತಿಂಗಳಪೂಜೆ (ಮಾಸಪೂಜೆ) ಸಲುವಾಗಿ 5 ದಿನಗಳ ಕಾಲ ಅಂದರೆ ಜು.17ರಿಂದ 21ರವರೆಗೆ ಬಾಗಿಲು ತೆರೆಯಲಿದೆ. ಕೇರಳದಲ್ಲೀಗ ಮಲಯಾಳಂ ತಿಂಗಳು ನಡೆಯುತ್ತಿದ್ದು, ಅದರ ನಿಮಿತ್ತ 5 ದಿನಗಳ ಕಾಲ ದೇಗುಲದ ಬಾಗಿಲು ತೆರೆದು ಪೂಜೆಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಕೇರಳ ಸರ್ಕಾರ ಶನಿವಾರ ಮಾಹಿತಿ ನೀಡಿದೆ.

(ಸಂಗ್ರಹ ಚಿತ್ರ)
ಕೊರೊನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಗರಿಷ್ಠ 5000 ಭಕ್ತರಿಗೆ ಮಾತ್ರ ಅವಕಾಶವಿದೆ. ಇಲ್ಲಿಗೆ ಆಗಮಿಸುವವರು ಎರಡೂ ಡೋಸ್ ಕೊವಿಡ್ 19 ಲಸಿಕೆ ಸ್ವೀಕರಿಸಿ, ಅದರ ಪ್ರಮಾಣಪತ್ರ ಹೊಂದಿರಬೇಕು. 48 ಗಂಟೆಗಳ ಹಿಂದೆ ಪಡೆದ ಆರ್ಟಿ-ಪಿಸಿಆರ್ ನೆಗೆಟಿವ್ ರಿಪೋರ್ಟ್ ತರಬೇಕು. ಈ ದಾಖಲೆಗಳನ್ನು ಹೊಂದಿದ್ದರೆ ಮಾತ್ರ ದೇವಾಲಯಕ್ಕೆ ಪ್ರವೇಶ ನೀಡಲಾಗುತ್ತದೆ. ದೇಗುಲಕ್ಕೆ ಆಗಮಿಸಲು ಭಕ್ತರು ಮೊದಲು ತಮ್ಮ ಲಸಿಕೆ ಪ್ರಮಾಣ ಪತ್ರ ಮತ್ತು ಆರ್ಟಿ-ಪಿಸಿಆರ್ ನೆಗೆಟಿವ್ ವರದಿಯನ್ನು ವರ್ಚ್ಯುವಲ್ ಕ್ಯೂ ಮೂಲಕ ನೀಡಿ, ಆನ್ಲೈನ್ನಲ್ಲಿ ಬುಕಿಂಗ್ ಮಾಡಬೇಕಾಗುತ್ತದೆ.
ಕೊರೊನಾ ಎರಡನೇ ಅಲೆ ಉಲ್ಬಣಗೊಂಡ ಹಿನ್ನೆಲೆಯಲ್ಲಿ ತಿರುವಾಂಕೂರು ದೇವಸ್ವಂ ಮಂಡಳಿ ಮೇ ತಿಂಗಳಿಂದ ಶಬರಿಮಲೆ ದೇವಸ್ಥಾನ ಪ್ರವೇಶಕ್ಕೆ ಭಕ್ತರಿಗೆ ನಿಷೇಧ ಹೇರಿತ್ತು.
Comments are closed.