ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೋವಿಡ್ ಆಂಬುಲೆನ್ಸ್ ಅನ್ನು ಬೈಂದೂರು ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿಯವರು ಮುತುವರ್ಜಿಯಲ್ಲಿ ಮಂಜೂರು ಮಾಡಿಸಿದ್ದಾರೆ.

ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು ತುರ್ತು ಕ್ರಮ ವಹಿಸಲು ಅಂಬುಲೆನ್ಸ್ ವಾಹನದ ಅವಶ್ಯಕತೆ ಬಗ್ಗೆ ಇತ್ತೀಚೆಗೆ ಕೊಲ್ಲೂರಿನಲ್ಲಿ ಸಂಸದ ಬಿ.ವೈ ರಾಘವೇಂದ್ರ ನೇತೃತ್ವದಲ್ಲಿ ನಡೆದ ಕೊರೋನಾ ನಿಯಂತ್ರಣ ಸಭೆಯಲ್ಲಿ ಸಂಸದರ ಗಮನಕ್ಕೆ ತಂದಿದ್ದು ಅವರು ಕೂಡ ಅಗತ್ಯ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಅಂತೆಯೇ ಸದ್ಯ 108 ಆಂಬುಲೆನ್ಸ್ ವಾಹನವನ್ನು ಕೋವಿಡ್ ಅಂಬುಲೆನ್ಸ್ ಆಗಿ ನಿಯೋಜಿಸಲಾಗಿದ್ದು ಕೊರೋನಾ ಸೋಂಕಿತರನ್ನು ಸಂಬಂದಪಟ್ಟ ಆಸ್ಪತ್ರೆಗೆ ಸಾಗಿಸಲು ಶುಕ್ರವಾರದಿಂದ ಬಳಸಿಕೊಳ್ಳಲಾಗುತ್ತಿದೆ.
ಶಾಸಕ ಹಾಗೂ ಸಂಸದರ ಈ ತುರ್ತು ಸ್ಪಂದನ ಕಾರ್ಯ ಕ್ಕೆ ಜನರು ಶ್ಲಾಘಿಸಿದ್ದಾರೆ.
Comments are closed.