ಆರೋಗ್ಯ

ಊಟವಾದ ಬಳಿಕ ಜೀರಿಗೆಯನ್ನು ಬಾಯಿಗೆ ಹಾಕಿ ಜಗಿಯಿರಿ, ಆರೋಗ್ಯದಲ್ಲಿ ವ್ಯತ್ಯಾಸ ಕಾಣಿರಿ.

Pinterest LinkedIn Tumblr


ಜೀರಿಗೆ ಅಡುಗೆಯ ಬಹಳ ಮುಖ್ಯವಾದ ಪದಾರ್ಥವಾಗಿದೆ. ಜೀರಿಗೆಯಿಂದ ಮಾಡಿದ ಅಡುಗೆಗಳು ಹೆಚ್ಚು ರುಚಿಯನ್ನ ನೀಡುವುದರ ಜೊತೆ ಹೆಚ್ಚು ಆರೋಗ್ಯವನ್ನು ಸಹ ನೀಡುತ್ತದೆ. ಜೀರಿಗೆ ಆರೋಗ್ಯಕ್ಕೆ ಬಹಳ ಅವಶ್ಯಕ ಮತ್ತು ತುಂಬಾ ಉಪಯುಕ್ತ. ಹಾಗಾದ್ರೆ ಜೀರಿಗೆಯಿಂದ ಹೊಟ್ಟೆಗೆ ಸಂಬಂದಿಸಿದ ಕಾಯಿಲೆಗಳನ್ನ ಹೇಗೆ ಗುಣಪಡಿಸಬಹುದು ಎಂಬುದನ್ನ ತಿಳಿಯೋಣ.

ಒಂದು ಲೋಟ ನೀರುಮಜ್ಜಿಗೆಗೆ ಒಂದು ಚಮಚ ಪುಡಿ ಮಾಡಿದ ಜೀರಿಗೆ ಪುಡಿಯನ್ನ ಹಾಗೂ ಅರ್ಧ ಚಮಚ ಇಂಗನ್ನ ಹಾಕಿ ಸೇವಿಸುವುದ ರಿಂದ ಅಸಿಡಿಟಿಯಿಂದಾಗಿ ಕಂಡುಬರುವ ಹೊಟ್ಟೆ ನೋವು ಕಡಿಮೆಯಾಗುತ್ತದೆ. ಅಷ್ಟೇ ಅಲ್ದೆ ಅಜೀರ್ಣತೆ ಹೆಚ್ಚಾಗಿ ವಾಂತಿ ಭೇದಿ ಯಾಗು ತ್ತಿದ್ದರೆ ಹುರಿದ ಅಕ್ಕಿಯ ಪುಡಿಗೆ ಜೀರಿಗೆ ಪುಡಿ, ಸ್ವಲ್ಪ ಉಪ್ಪು, ಸ್ವಲ್ಪ ಸಕ್ಕರೆ ಬೆರೆಸಿ ಗಂಜಿ ಅಥವಾ ಪಾಯಸದಂತೆ ತಯಾರಿಸಿ ಸೇವಿಸಿದರೆ ಅಜೀರ್ಣತೆ ನಿವಾರಣೆಯಾಗುತ್ತದೆ.

ಹೊಟ್ಟೆಯ ಬಾದೆಯನ್ನು ನಿವಾರಿಸಲು ನೀರನ್ನು ಕಾಯಲು ಇಡೀ ನಂತರ ಅದಕ್ಕೆ ಒಂದು ದೊಡ್ಡ ಚಮಚ ಉರಿದ ಜೀರಿಗೆಯನ್ನು ಹಾಕಿ, ಚನ್ನಾಗಿ ಕುದ್ದ ನಂತರ ಅದಕ್ಕೆ ಉಪ್ಪು ಮತ್ತು ತುಪ್ಪ ಸೇರಿಸಿ ಕುಡಿದರೆ ಹೊಟ್ಟೆನೋವು ಹಾಗೂ ಹೊಟ್ಟೆ ಉಬ್ಬರ ಕಡಿಮೆಯಾಗುತ್ತದೆ.

ಹೆಚ್ಚು ಬಾಯಾರಿಕೆಯಾಗುತ್ತಿದ್ದರೆ ಜಿರಿಗೆ ಹಾಗೂ ಕೊತ್ತೊಂಬರಿ ಬೀಜವನ್ನು ಹುರಿದು ಪುಡಿಮಾಡಿ ಅದಕ್ಕೆ ಸಕ್ಕರೆ ಮತ್ತು ನೀರು ಸೇರಿಸಿ ಕುಡಿಯಬೇಕು, ಇದರಿಂದ ಹೆಚ್ಚು ಬಾಯಾರುವಿಕೆ ಕಡಿಮೆಯಾಗುತ್ತದೆ.

ಹೊಟ್ಟೆ ನೋವು ವಾಂತಿ ಬಂದರೆ ಒಂದು ಚಮಚ ಜೀರಿಗೆ, ಒಂದು ಚಮಚ ಏಲಕ್ಕಿ ಪುಡಿಯನ್ನು ಒಂದು ದೊಡ್ಡ ಲೋಟ ನೀರಿನಲ್ಲಿ ಕುದಿಸಿ. ಅದು ಅರ್ಧದಷ್ಟಾಗಿ ತಣ್ಣಗಾದ ನಂತರ ಅದಕ್ಕೆ ಸಕ್ಕರೆ ಮತ್ತು ನಿಂಬೆ ರಸ ಸೇರಿಸಿ ಕುಡಿದರೆ ವಾಂತಿ ನಿಲ್ಲುತ್ತದೆ.

Comments are closed.