
ಮುಂಬೈ : ಬಾಲಿವುಡ್ ಮಾಫಿಯಾ ಮತ್ತು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಸಮರಕ್ಕೆ ನಿಂತಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಶಿವಸೇನೆಯಿಂದ ಬೆದರಿಕೆ ಬೆನ್ನಲ್ಲೇ ವಿವಾದಗಳ ನಡುವೆಯೂ ಭಾರಿ ಭದ್ರತೆಯೊಂದಿಗೆ ಸೆಪ್ಟಂಬರ್ 9ರಂದು ಮುಂಬೈಗೆ ಆಗಮಿಸಿದ್ದರು. ಕಂಗನಾಗೆ ಕೇಂದ್ರ ಸರ್ಕಾರ ವೈ ಪ್ಲಸ್ ಭದ್ರತೆ ನೀಡಿತ್ತು. ವೈ ಪ್ಲಸ್ ಭದ್ರತೆಯೊಂದಿಗೆ ನಟಿ ಕಂಗನಾ ಮುಂಬೈಗೆ ಆಗಮಿಸಿದ್ದರು.
ಕಳೆದೊಂದು ವಾರದಿಂದ ವಿವಾದದ ಕೇಂದ್ರ ಬಿಂದುವಾಗಿದ್ದ ಕಂಗನಾ ಮುಂಬೈಗೆ ಗುಡ್ ಬೈ ಹೇಳಿದ್ದಾರೆ. ಮುಂಬೈ ನಗರವನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿ, ಶಿವಸೇನೆ ವಿರುದ್ಧ ಮಾತಿನ ಸಮರ ಸಾರಿ ಶಿವಸೇನೆ ಕೆಂಗಣ್ಣಿಗೆ ಗುರಿಯಾಗಿದ್ದ ಕಂಗನಾ ಇದೀಗ ತನಗೆ ಬೆದರಿಕೆ ಕೆರೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಮುಂಬೈ ತೊರೆಯುತ್ತಿರುವುದಾಗಿ ಕಂಗನಾ ಟ್ವೀಟ್ ಮಾಡಿದ್ದಾರೆ.
ನಟಿ ಕಂಗನಾ ರಣಾವತ್ ಮುಂಬೈ ನಿಂದ ಹಿಮಾಚಲ ಪ್ರದೇಶಕ್ಕೆ ವಾಪಸ್ ಆಗಿದ್ದಾರೆ. ಸೆಪ್ಟಂಬರ್ 14ರಂದು ಬೆಳಗ್ಗೆ ಹುಟ್ಟೂರಿಗೆ ವಾಪಸ್ ಹೊರಟ ಕಂಗನಾಗೆ ಸಹೋದರಿ ರಂಗೋಲಿ ಸಾಥ್ ನೀಡಿದರು. ‘ಭಾರವಾದ ಹೃದಯದಿಂದ ಮುಂಬೈ ತೊರೆಯುತ್ತಿದ್ದೀನಿ ಎಂದು ನೋವಿನಿಂದ ತಿಳಿಸಿರಿವ ಕಂಗನಾ ನಾನು ಮುಂಬೈಯಲ್ಲಿ ಇದ್ದಷ್ಟು ದಿನ ಭಯಬೀತಳಾಗಿದ್ದೆ, ನನ್ನ ಕಚೇರಿಯನ್ನು ನೆಲಸಮ ಮಾಡಿದರು. ಇದೀಗ ನನ್ನ ಮನೆ ನೆಲಸಮ ಮಾಡಲು ಬರುತ್ತಿದ್ದಾರೆ, ಸುತ್ತಮುತ್ತ ಬಂದೂಕುಗಳನ್ನು ಹಿಡಿದುಕೊಂಡ ಭದ್ರತಾ ಸಿಬ್ಬಂದಿಗಳ ಮಧ್ಯೆ ಬದುಕುವುದು ಕಷ್ಟವಾಗುತ್ತಿದೆ ಎಂದು ಕಂಗನಾ ಟ್ವೀಟ್ ನಲ್ಲಿ ಬರೆದಿದ್ದಾರೆ.
ಶಿವಸೇನೆ ಜೊತೆಗಿನ ಮಾತಿನ ಚಕಮಕಿಯ ನಡುವೆ ಕಂಗನಾ ಬಂಗಲೆಯನ್ನು ಮುಂಬೈ ಮಹಾನಗರ ಪಾಲಿಕೆ ಒಡೆದು ಹಾಕಿದೆ. ಇದು ರಾಜಕೀಯ ಪ್ರೇರಿತ ಎಂದು ಆರೋಪಿಸಿರುವ ಕಂಗನಾ, ಸಿಎಂ ಉದ್ಧವ್ ಠಾಕ್ರೆಯನ್ನು ಏಕವಚನದಲ್ಲಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ. ನನ್ನನ್ನು ದುರ್ಬಲಳು ಎಂದು ಪರಿಗಣಿಸಿ ತುಂಬಾ ದೊಡ್ಡ ತಪ್ಪು ಮಾಡಿದ್ದೀರಾ. ನನ್ನನ್ನು ಹೆದರಿಸುವ ಪ್ರಯತ್ನ, ಕೀಳಾಗಿ ಕಾಣುವ ಮೂಲಕ ನಿಮ್ಮ ನಿಜವಾದ ಬಣ್ಣ ಬಯಲಾಗುತ್ತಿದೆ” ಎಂದು ಕಂಗನಾ ಹೇಳಿದ್ದಾರೆ.
ಕಳೆದ ಕೆಲವು ದಿನಗಳಿಂದ ಯಾವ ರೀತಿ ನನ್ನನ್ನು ಭಯಪಡಿಸಲಾಯಿತು ಎನ್ನುವುದೇ ಮುಂಬಾಯಿ ಪಾಕ್ ಅಕ್ರಮಿತ ಕಾಸ್ಮೀರವಾಗುತ್ತದೆ ಎಂಬ ನನ್ನ ಮಾತಿಗೆ ಸಾಕ್ಷಿ ಎಂದು ತಮ್ಮ ಟ್ವೀಟ್ ನಲ್ಲಿ ಕಂಗನಾ ಹೇಳಿದ್ದಾರೆ.
Comments are closed.