ಆರೋಗ್ಯ

ಮೊಳಕೆ ಕಾಳು ತಿನ್ನುವುದರಿಂದ ಕೂದಲು ದಟ್ಟವಾಗಿ ಸಧೃಡವಾಗುವುದು ಗೋತ್ತೆ?

Pinterest LinkedIn Tumblr

ಹವಮಾನ, ಅನಾರೋಗ್ಯಕರ ಲೈಫ್ ಸ್ಟೈಲ್ ಇವೆರಡು ಸಾಕು ಸಮಸ್ಯೆಗಳನ್ನು ತರಲು. ಕೂದಲು ಉದುರುವಿಕೆ, ಆಯಾಸ, ತೂಕ ಏರಿಕೆ ಇಂತಹ ಹಲವಾರು ಸಮಸ್ಯೆಗಳಿಗೆ ನಮ್ಮ ಲೈಫ್ ಸ್ಟೈಲ್ ಕಾರಣವಾಗುತ್ತದೆ. ಮುಖ್ಯವಾಗಿ ಕೂದಲು ಉದುರುವಿಕೆ. ಕೆಲವರು ತಮ್ಮ ೪೦ ನೇ ವಯಸ್ಸಿನಲ್ಲಿಯೇ ಕೂದಲು ಬಕ್ಕ ತಲೆ ಸಮಸ್ಯೆಗೆ ಗುರಿಯಾಗುತ್ತಾರೆ.

ಆದರೆ ನಿಮಗೆ ಗೊತ್ತಾ ಕೇವಲ ಮೊಳಕೆ ಕಾಳು ತಿನ್ನುವ ಮೂಲಕ ನೀವು ಈ ಸಮಸ್ಯೆಯನ್ನು ನಿವಾರಣೆ ಮಾಡಬಹುದು ಎಂದು. ಹೌದು ಹೆಸರು ಕಾಳು ಎಲ್ಲಾ ಕಾಳುಗಳಿಗಿಂತ ಹೆಚ್ಚು ಪೌಷ್ಟಿಕಾಂಶವನ್ನು ಹೊಂದಿದೆ. ಇದರಲ್ಲಿ ವಿಟಾಮಿನ್ ಎ, ಬಿ, ಸಿ ಮತ್ತು ಈ ಹೆಚ್ಚಿನ ಪ್ರಮಾಣದಲ್ಲಿದೆ. ಜೊತೆಗೆ ಇದರಲ್ಲಿ ಪೊಟ್ಯಾಶಿಯಂ, ಐರನ್, ಕ್ಯಾಲ್ಶಿಯಂ ಕೂಡ ಹೆಚ್ಚಾಗಿರುತ್ತದೆ. ಪ್ರತಿದಿನ ಮೊಳಕೆ ಬಂದ ಮೊಳಕೆ ಕಾಳು ತಿನ್ನುವುದರಿಂದ ಕೂದಲು ದಟ್ಟವಾಗುತ್ತದೆ, ಜೊತೆಗೆ ಸಧೃಡವಾಗುತ್ತದೆ.

ಮೊಳಕೆ ಕಾಳಿನ ಲಾಭ ಏನು ?
ಮೊಳಕೆ ಬಂದ ಹೆಸರು ಕಾಳು ಸೇವನೆ ಮಾಡಿದರೆ ದೇಹಕ್ಕೆ ೩೦ ಕ್ಯಾಲರಿ ಮತ್ತು ಒಂದು ಗ್ರಾಮ್ ಫ್ಯಾಟ್ ಸಿಗುತ್ತದೆ. ಇದರಲ್ಲಿ ಮೆಗ್ನೇಶಿಯಂ, ಕಾಪರ್, ಫೋಲೇಟ್, ವಿಟಾಮಿನ್,ವಿಟಾಮಿನ್ ಸಿ, ಫೈಬರ್, ಪೊಟ್ಯಾಶಿಯಂ, ಫಾಸ್ಫೋರಸ್, ಮೆಗ್ನೇಸಿಯಂ, ಐರನ್, ವಿಟಾಮಿನ್ ಬಿ ೬, ನಿಯಾಸಿಸ್, ಥೈಮಿನ್ ಮತ್ತು ಪ್ರೊಟೀನ್ ಅಂಶಗಳಿವೆ. ಇವು ಆರೋಗ್ಯಕ್ಕೆ ತುಂಬಾನೇ ಉಪಯುಕ್ತವಾಗಿವೆ. ನೀವು ಪ್ರತಿದಿನ ಮೊಳಕೆ ಕಾಳು ಸೇವನೆ ಮಾಡಿದರೆ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ.

Comments are closed.