
ಬೆಂಗಳೂರು: 2014 ರಲ್ಲಿ ಪಕ್ಷದ ಸಭೆ ಮಾಡಲು ಶ್ರೀಲಂಕಾಗೆ ಹೋಗಿದ್ವಿ, ಇಲ್ಲಿನ ಖರ್ಚು ವೆಚ್ಚಕ್ಕಿಂತ ಗೋವಾದಲ್ಲಿ ಕಡಿಮೆ ಎಂದು ಅಲ್ಲಿ ಸಭೆ ಮಾಡಿದ್ದೆವು. ಆ ವಿಚಾರವನ್ನು ಈಗ ಯಾಕೆ ಪ್ರಸ್ತಾಪ ಮಾಡುತ್ತಿದ್ದಾರೆ ಎಂಬುದನ್ನು ಅವರನ್ನೇ ಕೇಳಬೇಕು ಎಂದು ಕುಮಾರಸ್ವಾಮಿ ಶಾಸಕ ಜಮೀರ್ ಅಹಮದ್ಗೆ ತಿರುಗೇಟು ನೀಡಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು ನಿನ್ನೆ ಜಮೀರ್ ಅಹ್ಮದ್ ನಾನೂ ಕೊಲಂಬೊಕ್ಕೆ ಹೋಗಿದ್ದೆ, ಕುಮಾರಸ್ವಾಮಿಯವರೂ ಹೋಗಿದ್ರು, ಜೊತೆಗೆ ಅವರ ಶಾಸಕರೂ ಬಂದಿದ್ರು ಎಂದಿದ್ರು.
ಡ್ರಗ್ ಮಾಫಿಯಾ ಬಗ್ಗೆ ಇಂದು ನಡೆಯುತ್ತಿರುವ ತನಿಖೆ ದಾರಿ ತಪ್ಪಬಾರದು, 6 ವರ್ಷದ ಹಿಂದೆ ನಡೆದ ಸುದ್ದಿಯನ್ನು ಈಗ ಈಗ ಯಾಕೆ ಪ್ರಸ್ತಾಪಿಸಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ಡ್ರಗ್ಸ್ ವಿಚಾರಣೆಯ ದಾರಿ ತಪ್ಪಿಸಲು ನನ್ನ ಹೆಸರನ್ನು ಬಳಕೆ ಮಾಡಲಾಗುತ್ತಿದೆ ಎಂದು ಹೆಚ್ಡಿಕೆ ಆರೋಪ ಮಾಡಿದ್ದಾರೆ.
ಇದೇ ವೇಳೆ ಜಮೀರ್ ಅವರು ನಿಮ್ಮನ್ನು ಕರೆದುಕೊಂಡು ಹೋಗಿದ್ರಾ ಎಂಬ ಪ್ರಶ್ನೆಗೆ ಉತ್ತರಿಸಿದ ಹೆಚ್ಡಿಕೆ, ನಮ್ಮನ್ನು ಅವ್ರು ಯಾಕೆ ಕರೆದುಕೊಂಡು ಹೋಗಬೇಕು. ನಮಗೆ ಹೋಗೋಕೆ ಬರಲ್ವಾ ಅಂತ ಹೆಚ್ಡಿಕೆ ಪ್ರಶ್ನಿಸಿದ್ದಾರೆ. ನಾವು ಹೋದ ಕ್ಯಾಸಿನೋದಲ್ಲಿ ಡ್ರಗ್ಸ್ ಇರಲಿಲ್ಲ ಎಂದು ಹೆಚ್ಡಿಕೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ನಿರ್ಮಾಪಕನಾಗಿ ನಾನು ಕೂಡ ಸಿನಿಮಾ ಕ್ಷೇತ್ರದಲ್ಲಿ ಇದ್ದವನು. ಆಗ ನನ್ನ ಗಮನಕ್ಕೆ ಡ್ರಗ್ಸ್ ವಿಚಾರ ಬಂದಿಲ್ಲ ಡ್ರಗ್ಸ್ ದಂಧೆ ಕೇವಲ ಸ್ಯಾಂಡಲ್ವುಡ್ ಮಾತ್ರವಲ್ಲ ಎಲ್ಲ ಕಡೆ ಇದೆ. ಕ್ಯಾಸಿನೋದಲ್ಲೇ ಡ್ರಗ್ಸ್ ಇರುತ್ತೆ ಅಂತ ಹೇಳುವುಕ್ಕೆ ಆಗಲ್ಲ ಎಂದು ಹೇಳಿದರು.
ಸ್ಯಾಂಡಲ್ವುಡ್ನಲ್ಲಿ ಮಾತ್ರ ಡ್ರಗ್ಸ್ ದಂಧೆ ಇಲ್ಲ. ಎಂಜಿ ರೋಡ್, ಮಲ್ಯ ರೋಡ್ಗೆ ಸಂಜೆ ಮೇಲೆ ಹೋಗಿ ನೋಡಿ ಅಂದ್ರು. ಅಷ್ಟೇ ಅಲ್ಲ ಡ್ರಗ್ಸ್ ಮಾಫಿಯಾದ ತನಿಖೆ ನಿಷ್ಪಕ್ಷಪಾತವಾಗಿ ನಡೆಸಿ ಅದರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ ಎಂದು ಸರ್ಕಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
Comments are closed.