ಕರ್ನಾಟಕ

ಮಂಡ್ಯದಲ್ಲಿ ಸರಣಿ ಅಪಘಾತ: ದಂಪತಿ ದಾರುಣ ಸಾವು

Pinterest LinkedIn Tumblr

ಮಂಡ್ಯ: ಎರಡು ಕಾರುಗಳು ಮತ್ತು ಒಂದು ಬೈಕ್‌ ನಡುವೆ ನಡೆದ ಸರಣಿ ಅಪಘಾತದಲ್ಲಿ ಕಾರಿನಲ್ಲಿದ್ದ ದಂಪತಿ ದಾರುಣವಾಗಿ ಮೃತಪಟ್ಟ ಘಟನೆ ಭಾನುವಾರ ರಾಷ್ಟ್ರೀಯ ಹೆದ್ದಾರಿ 209ರ ದಾಸನದೊಡ್ಡಿ ಗ್ರಾಮದ ಬಳಿ ನಡೆದಿದೆ.

ಚನ್ನಪಟ್ಟಣದ ನಿವಾಸಿಗಳಾದ ಜೋಶಿ, ಮಧುಸೂದನ್ ಜೋಶಿ ಹಾಗೂ ಅವರ ಪತ್ನಿ ಗಂಗಾ ಜೋಶಿ ಸಾವನ್ನಪ್ಪಿದವರು.

ಚನ್ನಪಟ್ಟಣದಿಂದ ಕಾರಿನಲ್ಲಿ ಗಂಗಾ ಜೋಶಿ, ಮಧುಸೂದನ್ ಜೋಶಿ ಮತ್ತು ಅನುಷಾ ಅವರು ತಾಲ್ಲೂಕಿನ ಶಿವಸಮುದ್ರದ ಗಗನಚುಕ್ಕಿ ಜಲಪಾತ ವೀಕ್ಷಣೆ ಹೋಗುತ್ತಿದ್ದರು. ಯಳದೂಂರು ಕಡೆಯಿಂದ ಮದ್ದೂರುಗೆ ಕಾರಿನಲ್ಲಿ ನಾಗರಾಜು, ಕುಮಾರ್ ಸೇರಿದಂತೆ ನಾಲ್ವರು ತೆರಳುತ್ತಿದ್ದರು. ಬೆಳಕವಾಡಿ ಗ್ರಾಮದ ಮೂವರು ಬೈಕ್ ನಲ್ಲಿ ಮಳವಳ್ಳಿಗೆ ಹೋಗುತ್ತಿದ್ದ ವೇಳೆ ಸರಣಿ ಅಪಘಾತವಾಗಿದೆ.ಘಟನೆಯಲ್ಲಿ ಎರಡು ಕಾರುಗಳು ನಜ್ಜುಗುಜ್ಜುಯಾಗಿದ್ದು, ಬೈಕ್ ಮತ್ತು ಕಾರಿನಲ್ಲಿದ್ದ ಹತ್ತು ಜನರಿಗೆ ಗಾಯವಾಗಿದೆ. ಗಾಯಗಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಗ್ರಾಮಾಂತರ ಮತ್ತು ಬೆಳಕವಾಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.