ಮನೋರಂಜನೆ

ಡ್ರಗ್​ ದಂಧೆ-ನಾನು ಅಂತವಳಲ್ಲ: ಐಂದ್ರಿತಾ ರೈ

Pinterest LinkedIn Tumblr


ಬೆಂಗಳೂರು: ಡ್ರಗ್​ ದಂಧೆಗೆ ಸಂಬಂಧಪಟ್ಟಂತೆ ಈಗಾಗಲೇ ನಟಿ ರಾಗಿಣಿ ಹಾಗೂ ಸಂಜನಾಳನ್ನ ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ. ಇನ್ನೂ ಬಹಳಷ್ಟು ಜನರು ಅರೆಸ್ಟ್ ಆಗುವ ಸಂಭವವೂ ಇದೆ. ಆದ್ರೆ ಇಂದು ಬೆಳ್ಳಂಬೆಳಿಗ್ಗೆ ನಟಿ ಐಂದ್ರಿತಾ ರೈ ಅವರ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅದ್ರಲ್ಲಿ ಡ್ರಗ್ ಪೆಡ್ಲರ್ ಶೇಖ್ ಫಾಜಿಲ್​ಗೆ ಐಂದ್ರಿತಾ ಥ್ಯಾಂಕ್ಸ್ ಹೇಳುತ್ತಿದ್ದಾರೆ. ಇಬ್ಬರಿಗೂ ಏನು ಸಂಬಂಧ ಎನ್ನುವ ಅನುಮಾನ ಮೂಡಿದ್ದು. ಈ ವಿಚಾರವಾಗಿ ಖುದ್ದು  ಐಂದ್ರಿತಾ ರೈ ಅವರೇ ಬಿಟಿವಿಗೆ ಪ್ರತಿಕ್ರಿಯೆ ನೀಡಿದ್ದಾರೆ.

“ಹಾಯ್ ಸಲಾಂ ವಾಲೆ ಕುಂ, ನಾನು ಐಂದ್ರಿತಾ ರೈ, ನಾನು ಶ್ರೀಲಂಕಾದ ಅತಿ ದೊಡ್ಡ ಕ್ಯಾಸಿನೋ, ಕೂಲೆಸ್ಟ್ ಕ್ಯಾಸಿನೋ ಗೆ ಬರ್ತಾ ಇದ್ದೀನಿ. ನೀವು ಬನ್ನಿ ನಾವೆಲ್ಲರೂ ಅಲ್ಲಿಯೇ ಮೀಟ್ ಮಾಡೋಣ. ಆಂಡ್ ನನ್ನನು ಇನ್ವೈಟ್ ಮಾಡಿದ್ದಕ್ಕೆ ಶೇಖ್ ಫಾಜಿಲ್ ಅವರಿಗೆ ಥ್ಯಾಂಕ್ ಯು ಎಂದು ಆ ವೀಡಿಯೋದಲ್ಲಿ ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ನಟಿ ಐಂದ್ರಿತಾ ರೈ ಹಾಗೂ ಡ್ರಗ್ ಪೆಡ್ಲರ್ ಶೇಖ್ ಫಾಜಿಲ್​ಗು ಏನು ಸಂಬಂಧ..? ಐಂದ್ರಿತಾ ಸಹ ಈ ಡ್ರಗ್​ ಜಾಲದಲ್ಲಿ ಇದ್ದಾರಾ..? ಎಂಬ ಪ್ರಶ್ನೆ ಮೂಡಿತ್ತು. ಆದ್ರೆ ನಟಿ ಐಂದ್ರಿತಾ ಸ್ಪಷ್ಟನೆ ನೀಡಿದ್ದಾರೆ.

Comments are closed.