ಕರ್ನಾಟಕ

ದೀಪಾವಳಿ ಉಡುಗೊರೆಯಾಗಿ ಮಹಿಳಾ ಕೊರೊನಾ ವಾರಿಯರ್ಸ್‌ಗಳಿಗೆ  ರಾಜ್ಯ ಸರ್ಕಾರದಿಂದ ಸ್ಪೆಷಲ್ ಗಿಫ್ಟ್

Pinterest LinkedIn Tumblr

ಬೆಂಗಳೂರು: ರಾಜ್ಯ ಸರ್ಕಾರ ದೀಪಾವಳಿ ಉಡುಗೊರೆಯಾಗಿ ಎರಡು ಸೀರೆಗಳನ್ನು ಮಹಿಳಾ ಕೊರೊನಾ ವಾರಿಯರ್ಸ್ ಗೆ ನೀಡಲಾಗುವುದು. ಕೊರೊನಾ ಬಿಕ್ಕಟ್ಟಿನಿಂದ ಸಂಕಷ್ಟಕ್ಕೆ ಸಿಲುಕಿದ ನೇಕಾರರಿಗೆ ನೆರವಾಗುವ ಉದ್ದೇಶದಿಂದ ಕೈಮಗ್ಗ ಮತ್ತು ಜವಳಿ ಇಲಾಖೆ ಯೋಜನೆ ರೂಪಿಸಿದೆ.

ಸಂಕಷ್ಟದಲ್ಲಿರುವ ನೇತಾರರು ಮತ್ತು ಪವರ್ ಲೂಮ್ ನೇಕಾರರಿಗೆ ನೆರವು ನೀಡಲು ಸೀರೆಗಳನ್ನು ಖರೀದಿಸಿ ವಿವಿಧ ಇಲಾಖೆಗಳ ಮೂಲಕ ಮಹಿಳಾ ಕೊರೊನಾ ವಾರಿಯರ್ಸ್ ಗಳಿಗೆ ತಲಾ 2 ಸೀರೆ ಉಚಿತವಾಗಿ ನೀಡಲಿದೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಜವಳಿ ಸಚಿವ ಶ್ರೀಮಂತ್ ಪಾಟೀಲ್ ಚರ್ಚಸಿದ್ದು, ಸಿಎಂ ಸೂಚನೆಯಂತೆ ನೇಕಾರರಿಂದ 6 ಲಕ್ಷ ಸೀರೆ ಖರೀದಿಸಲಾಗುವುದು. ದೀಪಾವಳಿ ಉಡುಗೊರೆಯಾಗಿ ಎರಡು ಸೀರೆಗಳನ್ನು ಮಹಿಳಾ ವಾರಿಯರ್ಸ್ ಗೆ ನೀಡಲಾಗುವುದು ಎಂದು ಹೇಳಲಾಗಿದೆ.

Comments are closed.