ಉಡುಪಿ: ಪೊಡವಿಗೊಡೆಯನ ನಾಡು, ಕೃಷ್ಣನಗರಿ ಉಡುಪಿಯಲ್ಲಿ ಇಂದು(ಸೆ.10) ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ. ಉಡುಪಿ ಜಿಲ್ಲೆಯಲ್ಲಿ ಸೂರ್ಯಮಾನ ಪಂಚಾಂಗದಂತೆ ಇಂದು ಅಷ್ಟಮಿ ಆಚರಣೆ ನಡೆಯಲಿದೆ. ಇಂದು ಮಧ್ಯರಾತ್ರಿ 12:10ಕ್ಕೆ ಕೃಷ್ಣನಿಗೆ ಪರ್ಯಾಯ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅರ್ಘ್ಯ ಸಮರ್ಪಿಸಲಿದ್ದು ಸೆಪ್ಟಂಬರ್ 11ರಂದು ಪ್ರಮುಖ ಆಚರಣೆ ವಿಟ್ಲಪಿಂಡಿ ಸರಳವಾಗಿ ನಡೆಯಲಿದೆ.


ಪ್ರತೀ ವರ್ಷ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ವಿಟ್ಲಪಿಂಡಿ ಆಚರಣೆ ಸಂದರ್ಭ ನೆರೆಯುತ್ತಿದ್ದು ಈ ಬಾರಿ ಕೊರೋನಾ ಹಿನ್ನೆಲೆಯಲ್ಲಿ ಸಾರ್ವಜನಿಕರಿಲ್ಲದೇ ಸಾಂಪ್ರದಾಯಿಕವಾಗಿ, ಸರಳವಾಗಿ ನಡೆಯಲಿದೆ. ಕೋವಿಡ್ ನಿಯಮದಂತೆ ಈ ಬಾರಿ ಸಾರ್ವಜನಿಕರಿಗೆ ರಥಬೀದಿ ಪ್ರವೇಶ ನಿರಾಕರಿಸಲಾಗಿದೆ. ಶ್ರೀ ಕೃಷ್ಣ ದೇವರ ದರ್ಶನವನ್ನು ಒಳಗೆ ಪ್ರವೇಶಿಸಿ ಮಾಡಲು ಸಾಧ್ಯವಾಗದ ಕಾರಣ ಭಕ್ತರಿಗೆ ಪ್ರಸಾದವನ್ನು ರಥಬೀದಿಯಲ್ಲಿ ಮತ್ತು ರಾಜಾಂಗಣ ಸಮೀಪ ಹಾಕಿದ ಕೌಂಟರ್‌ನಲ್ಲಿ ಶುಕ್ರವಾರ- ಶನಿವಾರ ವಿತರಿಸಲಾಗುತ್ತದೆ. ಕೃಷ್ಣನ ಪ್ರಸಾದವನ್ನು ಭಕ್ತರಿಗೆ ವಿತರಿಸಲು ಒಂದು ಲಕ್ಷ ಚಕ್ಕುಲಿ, ಒಂದು ಲಕ್ಷ ಉಂಡೆಯನ್ನು ತಯಾರಿಸಲಾಗುತ್ತಿದೆ.
ಕನಕನ ಕಿಂಡಿ ಮೂಲಕ ರಥಬೀದಿ ಹೊರಗೆ ಕೃಷ್ಣದರ್ಶನ ಮಾಡಬಹುದು. ಈ ಬಾರಿ ಮುದ್ದುಕೃಷ್ಣ ವೇಷ ಸ್ಪರ್ಧೆ ಮತ್ತು ವೇಷಗಳ ಸ್ಪರ್ಧೆಗಳೂ ನಡೆಯೋದಿಲ್ಲ.
Comments are closed.