ಹಲವಾರು ರೋಗಗಳಿಗೆ ಮನೆಯಲ್ಲೇ ಮದ್ದಿದೆ ಎಂಬುದು ಎಷ್ಟೋ ಜನಕ್ಕೆ ಗೊತ್ತಿದ್ದರೂ ಅದನ್ನು ಉಪಯೋಗ ಮಾಡಿಕೊಳ್ಳದಿರುವವರೇ ಹೆಚ್ಚು. ಇದಕ್ಕೆ ಕಾರಣವೂ ಇದೆ. ಆಧುನಿಕ ಯುಗದಲ್ಲಿ ತಂತ್ರಜ್ಞಾನಗಳೊಂದಿಗೆ ಸಾಗುತ್ತಿರುವ ನಾವು ನಮ್ಮಲ್ಲೇ ಇರುವ ನೈಸರ್ಗಿಕವಾದ ಔಷಧಿಗಳನ್ನು ಅರಿಯದೆ ಸಾಕಷ್ಟು ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳುತ್ತಿದ್ದೇವೆ. ಇಂತಹ ಸಮಸ್ಯೆಗಳಲ್ಲಿ ಕೀಲುನೋವು (ಆರ್ಥೈಟಿಸ್), ರಕ್ತದೊತ್ತಡ, ಸಂಧಿವಾತ, ಕ್ಯಾನ್ಸರ್, ಮಧುಮೇಹ, ಕಿಡ್ನಿಯ ಕಲ್ಲು, ಕೊಲೆಸ್ಟ್ರಾಲ್ ಸಹ ಇಂದಿನ ಬಹುತೇಕ ಮಂದಿ ಎದುರಿಸುತ್ತಿರುವ ಸಮಸ್ಯೆ. ಆಯರ್ವೇದ ನಮ್ಮ ಪುರಾತನ ವೈದ್ಯ ಪದ್ಧತಿ. ಇದರಲ್ಲೂ ಸಹ ಇಂತಹ ಅದೆಷ್ಟೋ ಮನೆಯಲ್ಲಿ ಬಳಸುವ ಪದಾರ್ಥಗಳಿಂದಲೇ ಗುಣ ಕಂಡುಕೊಳ್ಳುವುದು ವಿಶೇಷ.
ನಾವು ದಿನನಿತ್ಯ ಆಹಾರದಲ್ಲಿ ಬಳಸುವ ಮೆಂತ್ಯಕಾಳಿನಿಂದ ಸಾಕಷ್ಟು ಉಪಯೋಗವಿದ್ದು ನಮ್ಮ ಅದೇಷ್ಟೋ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲದು. ಅದಕ್ಕೆ ಪೂರಕವೆಂಬಂತೆ ಹೇಳಬಹುದಾದರೆ ಮೆಂತ್ಯೆಕಾಳು ನೆನೆಸಿದ ನೀರು ಆಯಸ್ಸು ನೂರು ಎನ್ನಬಹುದು. ಕೂತರು, ನಿಂತರು, ಬಗ್ಗಿದರೂ ಕೀಲುಗಳ ನೋವು ಬಾಧಿಸುವವರು ಇತರೆ ಮೂಳೆ ಸಮಸ್ಯೆಗಳ ನಿವಾರಣೆಗೆ ಮೆಂತ್ಯೆ ಪ್ರಮುಖ ಪಾತ್ರ ವಹಿಸುತ್ತದೆ. ಎಂತಹ ಆರ್ಥೈಟಿಸ್ ಇದ್ದರೂ ಕೆಲವೇ ದಿನಗಳಲ್ಲಿ ನೋವು ಕಡಿಮೆಯಾಗಿ ಸಮಾಧಾನದ ನಿಟ್ಟುಸಿರು ಬಿಡುವಂತಾಗಲೂ ಇದರ ನಿಯಮಿತ ಸೇವನೆ ಅಗತ್ಯ.
ಕಾಯಿಲೆಗಳನ್ನು ನಿವಾರಿಸುವುದು ಮಾತ್ರವಲ್ಲದೆ ಕೆಲವೊಂದು ರೋಗಗಳು ಬರದಂತೆಯೂ ತಡೆಯುವುದು ಇದರ ವೈಶಿಷ್ಟ್ಯ. ಮೆಂತ್ಯ ನೆನೆಸಿದ ನೀರನ್ನು ಕುಡಿಯುವುದರಿಂದ ಮತ್ತು ನೆನಸಿದ ಮೆಂತ್ಯವನ್ನು ತಿನ್ನುವುದರಿಂದ ಹಸಿವು ಕಡಿಮೆಯಗುವುದು. ಇದರಿಂದ ತೂಕ ಕಳೆದುಕೊಳ್ಳಲು ಸಹಕಾರಿ. ಮೆಂತ್ಯೆ ನೀರಿನಲ್ಲಿರುವ ಉರಿಯೂತ ಶಮನಕಾರಿ ಗುಣವು ಜೀರ್ಣಕ್ರಿಯೆಗೆ ನೆರವಾಗುವುದು ಮತ್ತು ಹೊಟ್ಟೆ ಉರಿಯನ್ನು ಶಮನಗೊಳಿಸುವುದು.
ಗ್ಲಾಕ್ಟೊಮನ್ನನ್ ಮತ್ತು ಪಟಾಶಿಯಂ ಅಂಶಗಳು ಮೆಂತ್ಯದಲ್ಲಿರುವುದರಿಂದ ಇದು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಮಂತ್ಯೆ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುವುದಲ್ಲದೆ ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡುತ್ತದೆ. ಮಂತ್ಯೆ ಬಳಕೆಯಿಂದ ಕರುಳಿನಲ್ಲಿರುವ ವಿಷಕಾರಿ ಅಂಶಗಳು ದೂರವಾಗಿ ಕ್ಯಾನ್ಸರ್‍ನಂತಹ ಕಾಯಿಲೆಗಳನ್ನು ತಡೆಗಟ್ಟುತ್ತದೆ.
ಮೆಂತ್ಯೆಯಲ್ಲಿ ಗ್ಲಾಕ್ಟೊಮನ್ನನ್ ಎನುವ ಪ್ರಮುಖ ನಾರಿನಾಂಶವು ಸಕ್ಕರೆ ಅಂಶವನ್ನು ಹೀರಿಕೊಳ್ಳುವುದನ್ನು ತಗ್ಗಿಸುವುದು. ಇದರಿಂದ ಮಧುಮೇಹ ತಡೆಯಬಹುದು.
ಖಾಲಿ ಹೊಟ್ಟೆಯಲ್ಲಿ ಒಂದು ತಿಂಗಳ ಕಾಲ ಮೆಂತೆ ನೆನೆಸಿದ ನೀರನ್ನು ಕುಡಿದರೆ ಕಿಡ್ನಿ ಕಲ್ಲನ್ನು ಹೊರಹಾಕಲು ನೆರವಾಗುತ್ತದೆ. ಅಗತ್ಯ ವಿರುವ ಮೆಂತ್ಯ ನೀರು ತಯಾರಿಸುವ ವಿಧಾನವೆಂದರೆ ತುಸು ಬೆಚ್ಚಗಿನ ಒಂದು ಲೋಟ ನೀರಿನಲ್ಲಿ ಒಂದು ಸ್ಪೂನ್ ಮೆಂತ್ಯ ಹಾಕಿ ರಾತ್ರಿ ಇಡೀ ನೆನಸಬೇಕು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯುವುದರಿಂದ ಆರ್ಥೈಟಿಸ್‍ನಂತಹ ಗಂಭೀರ ಸಮಸ್ಯೆಯು ಪರಿಣಾಮಕಾರಿಯಾಗಿ ನಿವಾರಣೆಯಾಗಬಲ್ಲದು.
Comments are closed.