ಆರೋಗ್ಯ

ಗರ್ಭನಿರೋಧಕ ಮಾತ್ರೆಗಳು ತಂದೊಡ್ಡುವ ಸಮಸ್ಯೆಗಳು

Pinterest LinkedIn Tumblr

ಆಧುನಿಕ ಸಮಾಜದಲ್ಲಿ ಗರ್ಭನಿರೋಧಕ ಮಾತ್ರೆ ಬಳಕೆ ಹೊಸ ವಿಚಾರವಲ್ಲ. ಇದರಿಂದ ಸಾಕಷ್ಟು ಅಡ್ಡ ಪರಿಣಾಮಗಳಿವೆ ಎಂಬುದನ್ನು ತಿಳಿದಿದ್ದರೂ ಇದರ ಬಳಕೆಯಲ್ಲಿ ಇಳಿಕೆಯಾಗಿಲ್ಲ. ಆರೋಗ್ಯ ತಜ್ಞರು ಇದನ್ನು ಮಿತಿಮೀರಿ ಬಳಸದಂತೆ ಎಚ್ಚರಿಕೆ ನೀಡಿದ್ದಾರೆ. ಆರೋಗ್ಯ ತಜ್ಞರ ಪ್ರಕಾರ, ಗರ್ಭ ನಿರೋಧಕದ ಅನಿಯಮಿತ ಸೇವನೆಯಿಂದ ಸ್ಟ್ರೋಕ್ ಬರುವ ಸಾಧ್ಯತೆ ಹೆಚ್ಚಿದೆಯಂತೆ. ಧೂಮಪಾನದ ಚಟ, ರಕ್ತದೊತ್ತಡ, ಮಧುಮೇಹದ ಸಮಸ್ಯೆ ಕಾಡುತ್ತದೆಯಂತೆ. ಗರ್ಭನಿರೋಧಕ ಮಾತ್ರೆ ಸೇವಿಸುವ ಮಹಿಳೆಯರಲ್ಲಿ ರಕ್ತದ ಕೊರತೆ ಹೆಚ್ಚಾಗುತ್ತದೆಯಂತೆ.

ಕೂದಲು ಉದುರುವಿಕೆ :
ಗರ್ಭನಿರೋಧಕ ಗುಳಿಗೆಗಳು ಕೂಡ ಕೂದಲ ಉದುರುವಿಕೆಗೆ ಕಾರಣವಾಗುತ್ತದೆ. ಅದರಲ್ಲೂ ಮುಖ್ಯವಾಗಿ ಕೂದಲು ಉದುರುವಿಕೆಯ ಇತಿಹಾಸವುಳ್ಳ ಕುಟುಂಬ ಸದಸ್ಯರಲ್ಲಿ ಇದು ಹೆಚ್ಚು. ಗುಳಿಗೆಯ ಬಳಕೆ ನಿಲ್ಲಿಸಿದ ಬಳಿಕ ಅದು ಸಾಮಾನ್ಯ ಸ್ಥಿತಿಗೆ ಬರುತ್ತದೆ. ಇನ್ನು ರಕ್ತದ ಏರು ಒತ್ತಡ, ಹೃದಯ ರೋಗದ ಔಷಧ ಸೇವಿಸುವವರಲ್ಲೂ ಕೂದಲುದುರುವಿಕೆ ಕಂಡು ಬರುತ್ತದೆ.

ನೆನಪಿನ ಶಕ್ತಿ ಹಾಳಾಗುತ್ತೆ :
ಮೋಜಿನ ಜೀವನದ ಬೆನ್ನು ಬಿದ್ದ ಯುವ ಸಮುದಾಯ ಬಯಕೆ ತೀರಿಸಿಕೊಳ್ಳುವ ಭರದಲ್ಲಿ ಎಡವುವುದೇ ಹೆಚ್ಚು. ಇಂಥ ಸಂದರ್ಭದಲ್ಲಿ ಗರ್ಭಧಾರಣೆಯಾಗುವುದನ್ನು ತಪ್ಪಿಸಲು ಬಹುತೇಕ ಯುವಸಮುದಾಯ ಗರ್ಭನಿರೋಧಕಗಳ ಮೊರೆ ಹೋಗುತ್ತದೆ. ಇವು ದೇಹದ ಹಾರ್ಮೋನುಗಳ ಮೇಲೆ ನೇರವಾಗಿ ಪರಿಣಾಮ ಬೀರಿ ಸ್ಮರಣಶಕ್ತಿಯನ್ನು ಕುಗ್ಗಿಸುತ್ತವೆ. ಅತಿಯಾದ ಗರ್ಭನಿರೋಧಕ ಗುಳಿಗೆಗಳ ಸೇವನೆ ನಿಮ್ಮ ನೆನಪುಗಳನ್ನೇ ಹಾಳುಮಾಡಬಹುದು, ಸ್ಮರಣಶಕ್ತಿಗೆ ಹೊಡೆತ ನೀಡಬಹುದು ಎಚ್ಚರ.

ಬಂಜೆತನ :
ಅತಿಯಾದ ಗರ್ಭನಿರೋಧಕ ಗುಳಿಗೆಗಳ ಸೇವನೆ ಬಂಜೆತನಕ್ಕೆ ಕಾರಣವಾಗಬಹುದು ಎಂಬ ಸತ್ಯವನ್ನು ವೈಜ್ಞಾನಿಕ ಸಂಶೋಧನೆಗಳು ಈಗಾಗಲೇ ಸಾಬೀತುಪಡಿಸಿವೆ.

ಲೈಂಗಿಕ ಹಾರ್ಮೋನುಗಳ ಕುಂಠಿತ :
ಗರ್ಭನಿರೋಧಕ ಗುಳಿಗೆಗಳು ಈಸ್ಟ್ರೋಜೆನ್, ಪ್ರೋಜೆಸ್ಟಿರೋನ್ ಮೊದಲಾದ ಲೈಂಗಿಕ ಹಾರ್ಮೋನುಗಳನ್ನು ಕುಂಠಿತಗೊಳಿಸುತ್ತವೆ.

ಪಾರ್ಶ್ವ ವಾಯುವಿನ ಸಾಧ್ಯತೆ :
ಅತಿ ಹೆಚ್ಚು ಗರ್ಭನಿರೋಧಕ ಗುಳಿಗೆಗಳನ್ನು ಸೇವಿಸಿದ ಮಹಿಳೆಯರಲ್ಲಿ ಈ ಗುಳಿಗೆಗಳು ಹಾರ್ಮೋನುಗಳ ಸ್ರವಿಕೆಯ ಪ್ರಮಾಣವನ್ನು ವಿಪರೀತವಾಗಿ ಏರುಪೇರು ಮಾಡುವುದರಿಂದ ಇದರ ಪರಿಣಾಮವಾಗಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಹೆಚ್ಚುತ್ತದೆ. ಇದು ಪ್ರತ್ಯಕ್ಷವಾಗಿ ಪಾಶ್ರ್ವವಾಯುವಿಗೆ ಕಾರಣವಾಗಬಹುದು. ಅದರಲ್ಲೂ ಕುಟುಂಬದಲ್ಲಿ ರಕ್ತಪರಿಚಲನೆಯ ತೊಂದರೆಯ ಆನುವಂಶೀಯ ಕಾರಣ ಇರುವ ಮಹಿಳೆಯರಲ್ಲಿ ಸಂಭವಿಸುವ ಸಾಧ್ಯತೆ ಅತಿ ಹೆಚ್ಚು.

ಹೃದಯ ಸ್ತಂಭನದ ಸಾಧ್ಯತೆ :
ಒಂದು ಸಮೀಕ್ಷೆಯ ಪ್ರಕಾರ ಗರ್ಭ ನಿರೋಧಕ ಗುಳಿಗೆಗಳನ್ನು ಸೇವಿಸುವ ಮಹಿಳೆಯರು ಇತರರಿಗಿಂತ ಹೃದಯಾಘಾತಕ್ಕೆ ಒಳಗಾಗುವ ಸಾಧ್ಯತೆ ಹೊಂದಿರುತ್ತಾರೆ. ಆದ್ದರಿಂದ ಗರ್ಭನಿರೋಧಕ ಗುಳಿಗೆಗಳನ್ನು ಸೇವಿಸುತ್ತಾ ಬಂದಿರುವ ಮಹಿಳೆಯರಿಗೆ ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಹೃದಯಸ್ತಂಭನದ ಸಾಧ್ಯತೆ ಹೆಚ್ಚು.

ಬಿಳಿಸೆರಗು:
ಸಾಮಾನ್ಯವಾಗಿ ಗರ್ಭನಿರೋಧಕ ಗುಳಿಗೆಗಳನ್ನು ಸೇವಿಸುತ್ತಾ ಬಂದಿರುವ ಮಹಿಳೆಯರಲ್ಲಿ ಇದು ಸಾಮಾನ್ಯವಾದ ತೊಂದರೆಯಾದರೂ ಅತಿಹೆಚ್ಚು ಬಳಸುವವರಲ್ಲಿ ರಕ್ತಸ್ರಾವವೂ ಕಂಡುಬರುತ್ತದೆ. ಏಕೆಂದರೆ ಇದು ಸೂಕ್ಷ್ಮಾಂಗಗಳ ರಕ್ತನಾಳಗಳನ್ನು ಇನ್ನಷ್ಟು ಶಿಥಿಲಗೊಳಿಸಿ ಘಾಸಿಗೊಳಿಸಲು ಸಾಧ್ಯವಾಗುತ್ತದೆ. ಅದರಲ್ಲೂ ರಕ್ತದ ಗಾಢತೆಯನ್ನು ಕಡಿಮೆಗೊಳಿಸಲು ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯರಿಗೆ ಇದು ಮಾರಕವಾಗಿದೆ.

ಮೂತ್ರಪಿಂಡಗಳಲ್ಲಿ ಕಲ್ಲು:
ಗರ್ಭನಿರೋಧಕಗಳ ಸೇವನೆಯಿಂದ ಮೂತ್ರಪಿಂಡಗಳಲ್ಲಿ ಕಲ್ಲುಂಟಾಗುವ ಸಾಧ್ಯತೆ ಹೆಚ್ಚುತ್ತದೆ. ಆದ್ದರಿಂದ ಗರ್ಭ ನಿರೋಧಕ ಗುಳಿಗೆಗಳ ಸೇವನೆಯ ಬಳಿಕ ಸಾಕಷ್ಟು ನೀರು ಕುಡಿಯುವ ಮೂಲಕ ಈ ತೊಂದರೆಯ ಸಂಭವವನ್ನು ಸಾಕಷ್ಟು ಕಡಿಮೆಗೊಳಿಸಬಹುದು.

ಖಿನ್ನತೆಯುಂಟು ಮಾಡುತ್ತದೆ :
ಕೆಲವು ಸಂದರ್ಭಗಳಲ್ಲಿ ಗರ್ಭನಿರೋಧಕದ ಸೇವನೆ ಖಿನ್ನತೆಯನ್ನು ಹೆಚ್ಚಿಸುತ್ತದೆ. ಇದು ಮಾನಸಿಕವಾದ ತೊಂದರೆಯಾಗಿದ್ದು ಬಲವಂತವಾಗಿ ಗರ್ಭನಿರೋಧಕ ಗುಳಿಗೆಗಳನ್ನು ತಿನ್ನಿಸಿದ ಪರಿಣಾಮವಾಗಿ ಖಿನ್ನತೆ ಎದುರಾಗುತ್ತದೆ. ಇದು ಮನೋಭಾವವನ್ನು ಕುಗ್ಗಿಸುತ್ತದೆ ಹಾಗೂ ನರವ್ಯವಸ್ಥೆಯನ್ನೇ ಅ¯್ಲÁಡಿಸುತ್ತದೆ. ಆದ್ದರಿಂದ ಬಲವಂತವಾಗಿ ಗುಳಿಗೆಗಳನ್ನು ತಿನ್ನಿಸುವುದು ಸರ್ವಥಾ ಸಲ್ಲದು.

ಸ್ತನ ಕ್ಯಾನ್ಸರ್ ಎದುರಾಗಬಹುದು :
ನಿಯಮಿತವಾಗಿ ಗರ್ಭನಿರೋಧಕಗಳನ್ನು ಬಳಸುತ್ತಾ ಬಂದಿರುವ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಶೇಕಡಾ 70 ರಷ್ಟು ಹೆಚ್ಚುತ್ತದೆ. ಏಕೆಂದರೆ ಈ ಮಾತ್ರೆಗಳಲ್ಲಿ ದೇಹದ ಹಾರ್ಮೋನುಗಳನ್ನು ಏರುಪೇರು ಮಾಡುವ ಕ್ಷಮತೆಯಿದ್ದು ಈ ಏರುಪೇರು ಸ್ತನದ ಅಂಗಾಂಶವನ್ನು ಪ್ರಭಾವಗೊಳಿಸಿ ಕ್ಯಾನ್ಸರಿಗೆ ನೇರವಾಗಿ ಕಾರಣವಾಗುತ್ತದೆ.

ಚರ್ಮದ ಅಲರ್ಜಿ :
ಗರ್ಭನಿರೋಧಕ ಗುಳಿಗೆಗಳ ಒಂದು ಅಡ್ಡಪರಿಣಾಮವೆಂದರೆ ಚರ್ಮದಲ್ಲಿ ಅಲರ್ಜಿ ಯುಂಟಾಗುವುದು. ಆದರೆ ವಿಪರೀತವಾದ ಸೇವನೆಯಿಂದ ಚರ್ಮ ಊದಿಕೊಳ್ಳುವುದು, ಕೆಂಪಗಾಗುವುದು, ಉರಿ, ಸತತ ತುರಿಕೆ ಮೊದಲಾದ ತೊಂದರೆಗಳನ್ನು ತಂದೊಡ್ಡುತ್ತದೆ.

ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟುವುದು :
ನಮ್ಮ ರಕ್ತದ ರಚನೆ ಹೇಗಿರುತ್ತದೆ ಎಂದರೆ ಗಾಳಿಗೆ ಒಡ್ಡಿದೊಡನೆ ಗಟ್ಟಿಯಾಗತೊಡಗುತ್ತಾ ಹೆಚ್ಚಿನ ರಕ್ತಸ್ರಾವವಾಗದಂತೆ ತಡೆಯುತ್ತದೆ. ಇದನ್ನೇ ಹೆಪ್ಪುಗಟ್ಟುವುದು ಎಂದು ಕರೆಯುತ್ತಾರೆ. ಆದರೆ ರಕ್ತವೆಂದು ರಕ್ತನಾಳಗಳಲ್ಲಿ ಹೆಪ್ಪುಗಟ್ಟಬಾರದು. ಆದರೆ ಕೆಲವು ಮಹಿಳೆಯರಲ್ಲಿ ಆನುವಂಶೀಯ ಕಾರಣಗಳಿಂದಾಗಿ ನಾಳಗಳೊಳಗೇ ರಕ್ತ ಹೆಪ್ಪುಗಟ್ಟುವ ತೊಂದರೆ ಇರುತ್ತದೆ. ಗರ್ಭನಿರೋಧಕ ಗುಳಿಗೆಗಳು ಈ ತೊಂದರೆಯನ್ನು ಸಾವಿರಾರು ಪಟ್ಟು ಹೆಚ್ಚಿಸುತ್ತವೆ. ಪರಿಣಾಮವಾಗಿ ಹೃದಯ ಸ್ತಂಭನ ಅಥವಾ ಪಾಶ್ರ್ವವಾಯು ಎದುರಾಗುವ ಸಂಭವ ಹೆಚ್ಚುತ್ತದೆ.

Comments are closed.