ಕರ್ನಾಟಕ

ರಾಜ್ಯದ ಹಲವೆಡೆ ಧಾರಾಕಾರ ಮಳೆ, ಜನಜೀವನ ಸಂಪೂರ್ಣ ಅಸ್ತವ್ಯಸ್ಥ

Pinterest LinkedIn Tumblr


ಮಡಿಕೇರಿ: ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ವರುಣದೇವ ಮಲೆನಾಡಿನಲ್ಲಿ ಏನೆಲ್ಲಾ ಅವಂತಾರ ಸೃಷ್ಟಿಸಿದ್ದಾನೆ.

ರಾಜ್ಯದ ಹಲವು ಭಾಗಗಳಲ್ಲಿ ಮಹಾಮಳೆಯ ಅಬ್ಬರ ದಿನೇ ದಿನೇ ಜೋರಾಗ್ತುದೆ. ರಾತ್ರಿ ಹಗಲು ಎನ್ನದೆ ಜಿಟಿಜಿಟಿ ಮಳೆಯಾಗ್ತಿದ್ದು, ಚಿಕ್ಕಮಗಳೂರು, ಮಡಿಕೇರಿ, ಕಾರವಾರ ಜನ ಹೈರಾಣಾಗಿದ್ದಾರೆ. ನದಿ ಕೆರೆಗಳೆಲ್ಲಾ ಉಕ್ಕಿ ಹರಿಯುತ್ತಿದ್ದು, ಹಲವು ಗ್ರಾಮಗಳಲ್ಲಿ ಸಂಪರ್ಕವೇ ಬಂದ್​ ಆಗಿದೆ.

ಚಿಕ್ಕಮಗಳೂರಿನಲ್ಲಂತೂ ಮಳೆಯ ಅಬ್ಬರ ಹೇಳತೀರದು. ಕೊಪ್ಪ, ಎನ್ ಆರ್ ಪುರ, ಶೃಂಗೇರಿ, ಮೂಡಿಗೆರೆಯಾದ್ಯಂತ ವರುಣದೇವ ಅವಾಂತರ ಸೃಷ್ಟಿಸಿದ್ದಾನೆ.. ಭಾರೀ ಮಳೆಯಿಂದ ಭದ್ರಾ, ಹೇಮಾವತಿ, ತುಂಗಾನದಿಗಳು ತುಂಬಿ ಹರಿಯುತ್ತಿದ್ದು, ಅಕ್ಕಪಕ್ಕದ ಗ್ರಾಮಸ್ಥರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.

ಇತ್ತ ಮಡಿಕೇರಿಯಲ್ಲೂ ಮಳೆ ಮುಂದುವರೆದಿದ್ದು ಜನತೆ ಕಂಗಾಲಾಗಿದ್ದಾರೆ. ಜಿಟಿ ಜಿಟಿ ಮಳೆಯಿಂದಾಗಿ ಖಾಸಗಿ ಬಸ್ ನಿಲ್ದಾಣದ ಪಕ್ಕದಲ್ಲಿ ಮಣ್ಣು ಕುಸಿದಿದೆ. ಅಷ್ಟೇ ಅಲ್ಲ ವಿರಾಜಪೇಟೆಯ ಮಜ್ಜಿಗೆ ಹಳ್ಳದ ಬಳಿ ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳ ಮೇಲೆ ಮರ ಉರುಳಿ ಬಿದ್ದಿದ್ದು ಮೂರು ವಾಹನಗಳು ಜಖಂಗೊಂಡಿವೆ

ಇನ್ನು ಉತ್ತರ ಕನ್ನಡದಲ್ಲೂ ಮಹಾಮಳೆ ಅವಾಂತರ ಸೃಷ್ಟಿಸ್ತಿದೆ. ಕುಂದಾಪುರಕ್ಕೆ ಸಂಪರ್ಕ ಕಲ್ಪಿಸೋ ಹೆದ್ದಾರಿ ಜಲಾವೃತಗೊಂಡಿದ್ದು, ಹೊನ್ನಾವರ, ಕುಮಟಾ, ಅಂಕೋಲದಲ್ಲಿ ಜನತೆ ತತ್ತರಿಸಿ ಹೋಗಿದ್ದಾರೆ. ಒಟ್ನಲ್ಲಿ ರಾಜ್ಯದ ಹಲವೆಡೆ ಧಾರಾಕಾರ ಮಳೆಯಾಗ್ತಿದ್ದು ಜನರನ್ನ ಬಿಟ್ಟು ಬಿಡದಂತೆ ಕಾಡ್ತಿದೆ.

Comments are closed.