ಕರ್ನಾಟಕ

‘ಈ ಕಾರಣದಿಂದ ವಿಶ್ವಾಸ ಮತಯಾಚನೆಗೆ ನಕಾರ ಮಾಡುತ್ತಿದೆ’

Pinterest LinkedIn Tumblr


ಬೆಂಗಳೂರು: ಕರ್ನಾಟಕ ಸಮ್ಮಿಶ್ರ ಸರ್ಕಾರ ಈಗಾಗಲೇ ಬಂಧನ ಆಗಿದ್ದು, ಕಣ್ಣಿಗೆ ರಾಚೋ ರೀತಿ ಮೈತ್ರಿ ಪಕ್ಷದ ಸಂಖ್ಯಾಬಲ 98 ಕ್ಕೆ ಇಳಿದಿದೆ ಎಂದು ಮಾಜಿ ಡಿಸಿಎಂ, ಬಿಜೆಪಿ ಶಾಸಕ ಆರ್ ಅಶೋಕ್​ ಅವರು ಹೇಳಿದರು.

ವಿಧಾನಸೌಧದಲ್ಲಿ ಗುರುವಾರ ಸದನದ ಕಲಾಪ ಮುಂದೂಡಿದ ಬೆನ್ನಲ್ಲೆ ಮಾಧ್ಯಮದ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿ ಅವರು ಅತಂತ್ರ ಸ್ಥಿತಿ ಇದೆ ಅಂತ ಒಪ್ಪಿಕೊಂಡಿದ್ದಾರೆ. ಇವತ್ತು ಇನ್ನೂ ಸಮಯ ಬೇಕು ಅಂತ ಕುಂಟು ನೆಪ ಹೇಳುತ್ತಿದ್ದಾರೆ ಎಂದು ಅವರು ತಿಳಿಸಿದರು.

ಇನ್ನು ಇವತ್ತು 5 ನಿಮಿಷ ಕೂಡ ವಿಶ್ವಾಸ ಮತಯಾಚನೆ ಬಗ್ಗೆ ಮಾತಾಡಿಲ್ಲ, ಅದು ಬಿಟ್ಟು ಸುಪ್ರೀಕೋರ್ಟ್ ತೀರ್ಪು, ಸ್ಪೀಕರ್ ವಿವೇಚನೆ ಬಗ್ಗೆ ಮಾತನಾಡುತ್ತಿದ್ದರು. ಕರ್ನಾಟಕದ ಇತಿಹಾಸದಲ್ಲಿ ಒಂದು ಪಕ್ಷ ಬಹುಮತ ಸಾಬೀತು ಮಾಡೋ ವೇಳೆಯಲ್ಲಿ ಅವರೇ ಧರಣಿ ಮಾಡುತ್ತಾರೆ ಅಂದರೆ ಸರ್ಕಾರ ಸತ್ತಿದೆ ಎಂದು ಆರ್ ಅಶೋಕ್​ ಅವರು ನುಡಿದರು.

ಸದ್ಯ ಮುಖ್ಯಮಂತ್ರಿ ಅವರಿಗೆ ಗೌರವ ಇದ್ದರೆ ರಾಜೀನಾಮೆ ಕೊಟ್ಟು ಹೋಗಲಿ. ಇವತ್ತು ರಾಜ್ಯಪಾಲರ ಮಾತಿಗೂ ಬೆಲೆ ಇಲ್ಲ ಈ ಬಗ್ಗೆ ಸುಪ್ರೀಂಕೋರ್ಟ್​ಗೆ ಮಾಹಿತಿ ತಿಳಿಸಬೇಕು. ಈ ಸಂದರ್ಭದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅವರು ಲೀಗಲ್ ಅಡ್ವೈಸ್ ತಗೊಳ್ಳೊಕೆ ಹೋಗುತ್ತಿದ್ದರು. ಸ್ಪೀಕರ್ ಕೂಡ ಸಭೆ ಸರಿಯಾಗಿ ನಡಿಯದೇ ಇರೋಕೆ ಕಾರಣ ಎಂದು ಅವರು ಆರೋಪ ಮಾಡಿದರು.

ಅಲ್ಲದೇ ಮಂತ್ರಿಗಳೂ ಸೇರಿ ಗಲಾಟೆ ಮಾಡುತ್ತಿದ್ದಾರೆ. ಡಿ.ಕೆ ಶಿವಕುಮಾರ್ ಗಲಾಟೆ ಮಾಡಿ ಅಂತ ಹೇಳಿ ಕೊಡುತ್ತಿದ್ದಾರೆ. ಫೈಲ್​​ಗಳ ಸೈನ್ ಆಗಬೆಕು, ಹಾಗಾಗಿ ಇನ್ನೂ ಮುಂದೂಡುತ್ತಿದ್ದಾರೆ. ಇವತ್ತು ವಿಧಾನಸಭೆಗೆ ಕರಾಳ ದಿನ, ಸಂವಿಧಾನವನ್ನು ಅಂಧಕಾರದಲ್ಲಿ ಇಡುವಂಥದ್ದು ಆಗಿದೆ. ನ್ಯಾಯ ಸಿಗೋವರೆಗೂ ನಾವು ಪ್ರತಿಭಟನೆ ಮಾಡುತ್ತೇವೆ. ಸ್ಪೀಕರ್ ಪಕ್ಷಪಾತ ಮಾಡದೇ ತೀರ್ಪು ನೀಡಬೇಕು. ಇಂದು ರಾತ್ರಿ ಇಲ್ಲೇ ಎಲ್ಲದರ ಬಗ್ಗೆ ಚರ್ಚೆ ಮಾಡುತ್ತೇವೆ. ವಿಶ್ವಾಸ ಮತಕ್ಕೆ ಸಂಬಂಧಿಸಿದಂತೆ ಕಾನೂನಿನ ಬಾಗಿಲು ತಟ್ಟೋಕೆ ಬಿಜೆಪಿ ಚಿಂತನೆ ಮಾಡುತ್ತಿದೆ ಎಂದು ಆರ್ ಅಶೋಕ್​ ಅವರು ನುಡಿದರು.

Comments are closed.