ಕರ್ನಾಟಕ

ಪೂರ್ಣಗೊಳ್ಳದ ವಿಶ್ವಾಸಮತ ಪ್ರಕ್ರಿಯೆ!

Pinterest LinkedIn Tumblr

ವಿಶ್ವಾಸಮತ ಯಾಚನೆ ಮೇಲಿನ ಮತದಾನಕ್ಕೆ ಪಟ್ಟು ಹಿಡಿದ ಬಿಜೆಪಿ ಹಾಗೂ ವಿಪ್​ ಬಗೆಗಿನ ಕ್ರಿಯಾಲೋಪದ ಮೇಲಿನ ಚರ್ಚೆಗೆ ಆಗ್ರಹಿಸಿದ ಕಾಂಗ್ರೆಸ್​ ನಡುವಿನ ಜಟಾಪಟಿಗೆ ಇಂದಿನ ಸದನ ಕಲಾಪ ಬಲಿಯಾಗಿದ್ದು, ವಿಶ್ವಾಸಮತ ವಿಚಾರದಲ್ಲಿ ಯಾವುದೇ ನಿರ್ಣಯ ಸಾಧ್ಯವಾಗದ ಹಿನ್ನೆಲೆಯಲ್ಲಿ ಸದನವನ್ನು ನಾಳೆ ಮಧ್ಯಾಹ್ನ 11 ಗಂಟೆಗೆ ಮುಂದೂಡಲಾಗಿದೆ.

ಬೆಳಗ್ಗೆ ಸದನ ಆರಂಭವಾದ ವೇಳೆ ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಮಂಡನೆಯ ಮೇಲಿನ ಭಾಷಣ ಆರಂಭಿಸಿದ್ದು, ಈ ವೇಳೆ ಮಧ್ಯೆ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ ಕ್ರಿಯಾಲೋಪದ ವಿಚಾರ ಪ್ರಸ್ತಾಪಿಸಿ ಆ ವಿಚಾರಕ್ಕೆ ಸ್ಪೀಕರ್ ರೂಲಿಂಗ್ ನೀಡಬೇಕೆಂದು ಮನವಿ ಮಾಡಿದರು.

ಆದರೆ ಕ್ರಿಯಾಲೋಪದ ಪ್ರಸ್ತಾಪ, ವಿಪ್​ ಬಗೆಗಿನ ಚರ್ಚೆಗೆ ಬಿಜೆಪಿ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಹಲವು ಬಾರಿ ಆಢಳಿತ ಮತ್ತು ವಿರೋಧ ಪಕ್ಷದ ನಡುವೆ ಮಾತಿನ ಚಕಮಕಿ ನಡೆಯಿತು. ಮಧ್ಯಾಹ್ನ ಭೋಜನ ವಿರಾಮದ ಬಳಿಕವೂ ಚರ್ಚೆ ಆರಂಭವಾಗದ ಕಾರಣ ಬಿಜೆಪಿ ರಾಜ್ಯಪಾಲರ ಮೊರೆ ಹೋಗಿದ್ದು, ಸ್ಪೀಕರ್​ಗೆ ಸೂಚನೆ ನೀಡುವಂತೆ ಮನವಿ ಮಾಡಿತು.

ಆದರೆ ರಾಜ್ಯಪಾಲರ ಸೂಚನೆಗೂ ಆಡಳಿತ ಪಕ್ಷದ ಸದಸ್ಯರು ಕ್ಯಾರೇ ಎನ್ನಲಿಲ್ಲ. ಇದರಿಂದ ಮತ್ತೆ ಜಗಳ ಹಾಗೂ ವಾಗ್ವಾದಗಳು ಮುಂದುವರೆದು ಸದನ ಒಮ್ಮೆ 30 ನಿಮಿಷಗಳ ಕಾಲ ಹಾಗೂ ಇನ್ನೊಮ್ಮೆ 10 ನಿಮಿಷಗಳ ಕಾಲ ಮುಂದೂಡಲ್ಪಟ್ಟಿತು. ಆದರೆ ಪುನರಾರಂಭವಾದ ಸದನದಲ್ಲಿ ಆರಂಭವಾದ ಕಾಂಗ್ರೆಸ್ ನಾಯಕರು ಬಿಜೆಪಿಗರ ವಿರುದ್ಧ ಪ್ರತಿಭಟನೆಗೆ ಮುಂದಾದ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಯಂತ್ರಿಸಲಾದ ಸ್ಪೀಕರ್​ ಸದನವನ್ನು ನಾಳೆ ಮಧ್ಯಾಹ್ನಕ್ಕೆ ಮುಂದೂಡಿದ್ದಾರೆ.

Comments are closed.