
ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಪಟ್ಟದಿಂದ ಕೆಳಗಿಳಿದ ರಾಹುಲ್ ಗಾಂಧಿ ಸ್ಥಾನಕ್ಕೆ ಈಗ ಯಾರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂಬ ಪ್ರಶ್ನೆ ಉದ್ಭವಿಸಿದ್ದು, ಇನ್ನೂ ಈ ವಿಚಾರವಾಗಿ ಚರ್ಚೆ ನಡೆಯುತ್ತಿದೆ. ಸದ್ಯ ಇದೀಗಾ ಅಭಿನವ ಇಂದಿರಾ ಗಾಂಧಿ ಎಂದೇ ಅಭಿಮಾನಿಗಳಿಂದ ಕರೆಸಿಕೊಳ್ಳುವ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸಬೇಕೆಂದು ಹಿರಿಯ ಕಾಂಗ್ರೆಸ್ ನಾಯಕರು ಆಗ್ರಹಿಸುತ್ತಿದ್ದಾರೆ. ಪಕ್ಷದ ವರ್ಚಸ್ಸು ಉಳಿಯಬೇಕಾದರೆ ಗಾಂಧಿ ಕುಟುಂಬದವರನ್ನೇ ಮತ್ತೆ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕರು ಇಚ್ಛಿಸುತ್ತಿದ್ದಾರೆ. ಎಂಬುವುದಾಗಿ ಸುದ್ದಿ ಕೇಳಿಬರುತ್ತಿದೆ.
ಹೌದು ಈಗಾಗಲೇ ರಾಜಕೀಯದಲ್ಲಿ ಅಂಬೆಗಾಲಿಡುತ್ತಿರುವ ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅರ್ಹರಾ? ಲೋಕಸಭೆ ಚುನಾವಣೆಯ ನಂತರ ಕಾಂಗ್ರೆಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಸಂದಿಗ್ಧದಲ್ಲಿರುವಾಗ ಪ್ರಿಯಾಂಕಾ ಗಾಂಧಿ ಅವರಿಗೆ ಈ ದೊಡ್ಡ ಜವಾಬ್ದಾರಿ ಕೊಡುವುದು ಭವಿಷ್ಯಕ್ಕೆ ಉತ್ತಮವೇ? ಇನ್ನೂ ಹಲವಾರು ಪ್ರಶ್ನೆಗಳು ಎದ್ದಿವೆ.
ಲೋಕಸಬಾ ಚುನಾವಣೆಯಲ್ಲಿ ಕಾಂಗ್ರೆಸ್ ನ ಹೀನಾಯ ಪ್ರದರ್ಶನಕ್ಕೆ ರಾಹುಲ್ ಗಾಂಧಿ ಅವರೇ ಹೊಣೆ ಜೊತೆಗೆ ಹಲವು ಕಾಂಗ್ರೆಸ್ ನಾಯಕರು ಸೋಲಿಗೆ ರಾಹುಲ್ ಯವರೆ ಕಾರಣ ಎಂದು ನೇರವಾಗಿಯಲ್ಲದಿದ್ದರೂ, ಪರೋಕ್ಷವಾಗಿ ಹಲವರುಬೆಟ್ಟು ಮಾಡಿ ರಾಹುಲ್ ಕಡೆ ತೋರಿಸಿದ್ದರು. ಜೊತೆಗೆ ಚುನಾವಣೆಯ ಸಮಯದಲ್ಲಿ ಹಗಲಿರುಳು ಕಷ್ಟಪಟ್ಟು ಪ್ರವಾಸ ಮಾಡಿದರೂ ತಮ್ಮ ಶ್ರಮಕ್ಕೆ ತಕ್ಕಪ್ರತಿಫಲ ಕಾಣದ ರಾಹುಲ್ ತಮ್ಮ ತವರು ಕ್ಷೇತ್ರ ಅಮೇಥಿಯಲ್ಲಿಯೇ ರಾಹುಲ್ ಗಾಂಧಿ ಸೋತಿದ್ದು ಅರಗಿಸಿಕೊಳ್ಳಲಾಗದಂತದ್ದು. ಕೊನೆಗೆ ಈ ಎಲ್ಲಾ ರೀತಿಯ ಅವಮಾನಗಳಿಗೆ ಬೇಸತ್ತು ಮನನೊಂದ ರಾಹುಲ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ತೊರೆದು ಸ್ಥಾನದಿಂದ ಕೆಳಗಿಳಿದಿದಿದ್ದಲ್ಲದೆ, ಗಾಂಧಿ ಕುಟುಂಬದ ಹೊರತಾಗಿ ಪರ್ಯಾಯ ನಾಯಕರನ್ನು ಆರಿಸಿ ಎಂದಿದ್ದರು.
ಇನ್ನೂ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ಸಮಯದಲ್ಲಿ , “ಪಕ್ಷವು ಅಧ್ಯಕ್ಷ ಪಟ್ಟಕ್ಕೆ ಗಾಂಧಿ ಕುಟುಂಬದ ಹೊರತಾಗಿ ಪರ್ಯಾಯ ನಾಯಕರನ್ನು ಹುಡುಕಿಕೊಳ್ಳಬೇಕು” ಎಂದು ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಸ್ಪಷ್ಟವಾಗಿ ಹೇಳಿರುವುದರಿಂದ ಪ್ರಿಯಾಂಕಾ ಗಾಂಧಿ ಅವರನ್ನು ಈ ಸ್ಥಾನಕ್ಕೆ ಸೂಚಿಸಿದರೆ ಅದಕ್ಕೆ ಸ್ವತಃ ರಾಹುಲ್ ಗಾಂಧಿ ಅವರೇ ಬೇಡ ಎನ್ನಬಹುದು!
ಅಲ್ಲದೆ ಕಾಂಗ್ರೆಸ್ ಪಕ್ಷದ ಉನ್ನತ ಜವಾಬ್ದಾರಿಯನ್ನು ಹೊತ್ತುಕೊಳ್ಳುವಂತೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಲ್ಲೂ ಮನವಿ ಮಾಡಿದರೂ ಅದಕ್ಕೆ ಒಪ್ಪದ ಸೋನಿಯಾ ಗಾಂಧಿ ಅನಾರೋಗ್ಯದ ಕಾರಣ ನೀಡಿ ಜವಾಬ್ದಾರಿಯಿಂದ ಕಳಚಿಕೊಂಡರು. ಬೇರೆ ನಾಯಕರನ್ನು ಆರಿಸುವುದು ಯಾವುದೇ ರೀತಿಯಲ್ಲಿಯೂ ಕಷ್ಟವಲ್ಲ ಆದರೆ ‘ಗಾಂಧಿ-ನೆಹರು’ ಎಂಬ ಹೆಸರಿನಿಂದಲೇಪಕ್ಷಕ್ಕಿರುವ ವರ್ಚಸ್ಸನ್ನು ಕಳೆದುಕೊಳ್ಳಲು ಯಾರಿಗೂ ಇಷ್ಟವಿಲ್ಲದ ಕಾರಣ ಸದ್ಯ ಇದೀಗಾ ಎಲ್ಲರ ಮುಂದೆ ಕಾಣಿಸಿಕೊಂಡಿದ್ದು ಪ್ರಿಯಾಂಕಾ ಗಾಂಧಿ ವಾದ್ರಾ. ನೋಡುವುದಕ್ಕೆ ಇಂದಿರಾ ಗಾಂಧಿ ಅವರಂತೆಯೇ ಕಾಣುವ ಪ್ರಿಯಾಂಕಾ ಗಾಂಧಿಯವರು ತಮ್ಮ ಮಾತು , ವ್ಯಕ್ತಿತ್ವದ ಮೂಲಕ ಸುಲಭವಾಗಿ ಜನರನ್ನು ಸೆಳೆಯಬಲ್ಲರು ಎಂಬುದು ಕಾಂಗ್ರೆಸ್ ನ ಹಿರಿಯ ನಾಯಕರ ಅಭಿಪ್ರಾಯ.
ಇನ್ನೂ ಪ್ರಿಯಾಂಕ ಚಿಕ್ಕ ವಯಸ್ಸಾಗಿರುವುದರಿಂದ ಕಾಂಗ್ರೆಸ್ ಅಧ್ಯಕ್ಷೆಯಾದರೆ ಯುವ ಸದಸ್ಯೆಯಾಗಿ ಯುವ ಜನತೆಯನ್ನು ಸೆಳೆಯಬಲ್ಲರು ಅಲ್ಲದೆ ಮಹಿಳೆ ಎಂಬ ಕಾರಣವೂ ಕಾಂಗ್ರೆಸ್ ಪಕ್ಷಕ್ಕೆ ಪ್ಲೇಸ್ ಪಾಯಿಂಟ್ ಆಗಿದ್ದು, ಇದು ಪಕ್ಷಕ್ಕೆ ಒಂದಷ್ಟು ಲಾಭ ಕೊಡಬಹುದು. ಎಂಬುವುದ ಕಾಂಗ್ರೆಸ್ ಹಿರಿಯ ನಾಯಕರ ಲೆಕ್ಕಚಾರವಾಗಿದೆ.
ಪ್ರಿಯಾಂಕಾ ಗಾಂಧಿ ಅವರನ್ನು ಪಕ್ಷದ ಅಧ್ಯಕ್ಷರಾಗಿ ಮಾಡಿ ಎಂದು ಕಾಂಗ್ರೆಸ್ ನ ಹಿರಿಯ ನಾಯಕರಾದ, ಶ್ರೀಪ್ರಕಾಶ್ ಜೈಸ್ವಾಲ್, ಭಕ್ತ ಚರಣ್ ದಾಸ್ ಮುಂತಾದವರು, “ಕಾಂಗ್ರೆಸ್ ಪಕ್ಷದ ಲಕ್ಷಾಂತರ ತಳಮಟ್ಟದ ಕಾರ್ಯಕರ್ತರು ಇದನ್ನೆ ಆಪೇಕ್ಷಿಸುತ್ತಿದ್ದು, ಅವರಿಗೆ ಪಕ್ಷವನ್ನು ಮುನ್ನಡೆಸುವ ಎಲ್ಲಾ ಸಾಮರ್ಥ್ಯವಿದೆ. ಅದು ಅಲ್ಲದೆ ಅವರು ಗಾಂಧಿ ಕುಟುಂಬದವರು” ಆಗಿದ್ದಾರೆ. ಈ ಎಲ್ಲಾ ಪ್ರಶ್ನೆಗಳ ಮಧ್ಯೆ ಪ್ರಿಯಾಂಕಾ ಗಾಂಧಿ ಅವರು ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಾಗಿರುವುದನ್ನು ನೋಡುತ್ತಿರುವುದನ್ನು ಗಮನಿಸಿದರೆ ‘ಮೌನಂ ಸಮ್ಮತಿ ಲಕ್ಷಣಂ’ ಎನ್ನಬಹುದಾ?! ಎಂಬ ಆಲೋಚನೆ ಬರುತ್ತದೆ.
Comments are closed.