ಮಿಷನ್ ಮಂಗಲ್.. ಬಾಲಿವುಡ್ ಅಂಗಳದಲ್ಲಿ ರಿಲೀಸ್ಗೆ ಸಜ್ಜಾಗ್ತಿರೋ ಸೈನ್ಸ್ ಥ್ರಿಲ್ಲರ್ ಎಂಟ್ರಟೈನರ್. ಬಿಟೌನ್ ಕಿಲಾಡಿ ಅಕ್ಷಯ್ ಕುಮಾರ್ ಮುಖ್ಯಭೂಮಿಕೆಯ ಈ ಸಿನಿಮಾಗೆ ಕನ್ನಡಿಗ ಆಕ್ಷನ್ ಕಟ್ ಹೇಳಿರೋದು ಹೆಮ್ಮೆಯ ವಿಚಾರ.
ಬಿಟೌನ್ ಕಿಲಾಡಿ ಅಕ್ಷಯ್ಗೆ ಆಕ್ಷನ್ ಕಟ್ ಹೇಳಿದ ಕನ್ನಡಿಗ..!!
ಇತ್ತೀಚೆಗೆ ರಿಲೀಸ್ ಆದ ಬಾಲಿವುಡ್ನ ಸೈನ್ಸ್ ಥ್ರಿಲ್ಲರ್ ಮಿಷನ್ ಮಂಗಲ್ ಚಿತ್ರದ ಟೀಸರ್ ಝಲಕ್. ಸದಾ ಹೊಸತನಕ್ಕೆ ಹಾತೊರೆಯೋ ಅಕ್ಷಯ್ ಕುಮಾರ್ ಈ ಚಿತ್ರದ ನಾಯಕನಟ ಅನ್ನೋದು ವಿಶೇಷವೇನಲ್ಲ. ಆದರೆ ಇದನ್ನು ಡೈರೆಕ್ಟ್ ಮಾಡ್ತಿರೋ ಪ್ರತಿಭೆ ಮಾತ್ರ ಡಿಫರೆಂಟ್. ಮಿಷನ್ ಮಂಗಲ್ ಚಿತ್ರದ ನಿರ್ದೇಶಕ ಜಗನ್ ಶಕ್ತಿ ಅಪ್ಪಟ ಕನ್ನಡಿಗ. ಇಲ್ಲೇ ಹುಟ್ಟಿ, ಇಲ್ಲೇ ಬೆಳೆದು ಸದ್ಯ ಬಾಲಿವುಡ್ನಲ್ಲಿ ಧೂಳೆಬ್ಬಿಸ್ತಿದ್ದಾರೆ.
ಉಗ್ರಂನಲ್ಲಿ ಆರ್ಟ್ ಸೆಕ್ಷನ್.. ಹಿಂದಿಯಲ್ಲಿ ಡೈರೆಕ್ಷನ್ ಸೆಲೆಕ್ಷನ್
ಅಂದಹಾಗೆ ಜಗನ್ ಸಿನಿಯಾನ ಶುರುವಿಟ್ಟಿದ್ದೇ ಕನ್ನಡದಿಂದ. ರೋರಿಂಗ್ ಸ್ಟಾರ್ ಶ್ರೀಮುರಳಿಯ ಉಗ್ರಂ ಚಿತ್ರಕ್ಕೆ ಆರ್ಟ್ ಸೆಕ್ಷನ್ನಲ್ಲಿ ಕೆಲಸ ಮಾಡಿದ್ದ ಜಗನ್, ಅದಾದ ಬಳಿಕ ಡೈರೆಕ್ಷನ್ ಕಲಿಯೋಕ್ಕೆ ಮುಂಬೈ ಫ್ಲೈಟ್ ಹತ್ತಿ, ಬಿಟೌನ್ ಸೇರಿದರು. ತುಪಾಕಿ, ಇಂಗ್ಲಿಷ್ ವಿಂಗ್ಲಿಷ್, ಪಾ, ಪ್ಯಾಡ್ಮನ್ ಸೇರಿದಂತೆ ಸಾಲು ಸಾಲು ಹಿಂದಿ ಚಿತ್ರಗಳಿಗೆ ಕೆಲಸ ಮಾಡ್ತಾ ಅಕ್ಷಯ್ ಕುಮಾರ್ಗೆ ಮಿಷನ್ ಮಂಗಲ್ ಕಥೆ ಹೇಳಿ, ಅವರನ್ನು ಇಂಪ್ರೆಸ್ ಮಾಡಿದರು ಜಗನ್.
ಜಗನ್ ಅಕ್ಕ ಮೂಲತಃ ಸೈಂಟಿಸ್ಟ್ ಆಗಿರೋದ್ರಿಂದ, ಅವರಿಗೆ ಈ ರೀತಿಯ ಎಕ್ಸ್ಪೆರಿಮೆಂಟಲ್ ಚಿತ್ರಕ್ಕೆ ಕೈಹಾಕಲು ಸಾಧ್ಯವಾಯ್ತಂತೆ. ಇನ್ನು ಅಕ್ಷಯ್ ಕುಮಾರ್ ಕೂಡ ಈ ಚಿತ್ರಕ್ಕಾಗಿ ಜಗನ್ಗೆ ಸಾಥ್ ಕೊಟ್ಟಿದ್ದು, 2013ರಲ್ಲಿ ಮಂಗಳಯಾನಕ್ಕೆ ಇಸ್ರೋ ಉಡಾವಣೆ ಮಾಡಿದ ರಾಕೆಟ್ ಕುರಿತ ಕಥೆ ಆಧಾರವಾಗಿದೆ. ಅಕ್ಷಯ್ ಜೊತೆ ನಮ್ಮ ಕನ್ನಡದ ಹಿರಿಯನಟ ದತ್ತಣ್ಣ ಕೂಡ ಮಿಂಚ್ತಿದ್ದು, ವಿದ್ಯಾಬಾಲನ್, ಸೋನಾಕ್ಷಿ, ತಾಪಸಿ, ನಿತ್ಯಾ ಮೆನನ್ ಹೀಗೆ ದೊಡ್ಡ ದೊಡ್ಡ ಕಲಾವಿದರ ದಂಡೇ ಇಲ್ಲಿದೆ.
ಹಾಸನದ ಇಸ್ರೋ ಕೇಂದ್ರವನ್ನು ಸಿನಿಮಾಗಾಗಿ ಮರುಸೃಷ್ಟಿಸಿರೋ ಜಗನ್, ಬೆಂಗಳೂರಿನಲ್ಲೇ ಬಹುತೇಕ ಚಿತ್ರೀಕರಣ ನಡೆಸಿರೋದು ವಿಸೇಷ. ಈ ಸಿನಿಮಾ ಆಗ್ತಿದ್ದಂತೆ ಮತ್ತಷ್ಟು ಬಾಲಿವುಡ್ ಸಿನಿಮಾಗಳನ್ನು ಮಾಡೋ ಯೋಜನೆಯಲ್ಲಿರೋ ಜಗನ್, ನಮ್ಮ ಕನ್ನಡದ ಕೀರ್ತಿ ಪತಾಕೆಯನ್ನು ಬಿಟೌನ್ನಲ್ಲಿ ಹಾರಿಸುತ್ತಿರೋದು ನಿಜಕ್ಕೂ ಹೆಮ್ಮೆಯ ವಿಚಾರ.
Comments are closed.