ಕೋಲಾರ: ಸುಪ್ರೀಂ ಕೋರ್ಟ್ ತೀರ್ಪುನ್ನು ನಾನು ಸ್ವಾಗತ ಮಾಡುತ್ತೇನೆ, ಸುಪ್ರೀಂ ಕೋರ್ಟ್ನ ವಿಶ್ವಾಸಕ್ಕೆ ನಾನು ಬದ್ದವಾಗಿ ನಡೆದುಕೊಳ್ಳುವೆ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.
ವಿಶ್ವಾಸ ಬದ್ದವಾಗಿ ನಡೆದುಕೊಳ್ಳುವೆ
ಶಾಸಕರ ರಾಜೀನಾಮೆ ಬಗ್ಗೆ ಸ್ಪೀಕರ್ ನಿರ್ಧರಿಸಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ ಹಿನ್ನಲೆಯಲ್ಲಿ ಕೋಲಾರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂವಿಧಾನ ಆಶಯಗಳಿಗೆ ಮತ್ತು ಸುಪ್ರಿಂ ಕೋರ್ಟ್ನ ವಿಶ್ವಾಸಕ್ಕೆ ಬದ್ದವಾಗಿ ನಡೆದುಕೊಳ್ಳುವೆ. ಸೂಕ್ತ ಸಮಯಕ್ಕೆ, ವಿಳಂಬವಿಲ್ಲದೆ ಕೆಲಸವನ್ನು ನಿರ್ವಹಿಸುತ್ತೇನೆ. ಸುಪ್ರೀಂ ಮಾರ್ಮಿಕವಾಗಿ ಹೇಳಿರುವುದನ್ನು ಗೌರವಿಸಿ ನಡೆದುಕೊಳ್ಳುತ್ತೇನೆ ಎಂದು ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದರು.
ಅತೃಪ್ತರೂ ಯಾರೆಂದು ಗೊತ್ತಿಲ್ಲ
ಗುರುವಾರ ವಿಶ್ವಾಸ ಮತ ಯಾಚನೆಗೆ ಅಡ್ಡಿಯಿಲ್ಲ, ಅನುಮಾನ ಬೇಡ. ನಾನು ಕಾಲಹರಣ ಮಾಡಿಲ್ಲ, ನನ್ನ ವ್ಯಾಪ್ತಿಯೊಳಗೆ ಆದಷ್ಟು ಬೇಗ ಕಾರ್ಯ ನಿರ್ವಹಿಸುವೆ, ಸದನಕ್ಕೆ ಶಾಸಕರು ಬಾರದಿದ್ದಲ್ಲಿ ನಾನು ಹೊಣೆಯಲ್ಲ, ನನಗೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಶಾಸಕರಷ್ಟೇ ಗೊತ್ತು, ಅತೃಪ್ತರೂ ಯಾರೆಂದು ಗೊತ್ತಿಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದರು.
Comments are closed.