
ಬನಸ್ಕಾಂತ: ಪ್ರಸ್ತುತ ದಿನಗಳಲ್ಲಿ ಮೊಬೈಲ್ ಪೋನ್ ಬಳಕೆ ಮಾಡದೇ ಅರೇಕ್ಷಣ ಇರಲು ಸಾಧ್ಯವಾಗದ ಪರಿಸ್ಥಿತಿಗೆ ಸಮಾಜ ತಲುಪಿದೆ. ಆದರೆ ಇಲ್ಲೊಂದು ಸಮುದಾಯ ಮದುವೆಯಾಗದ ಯುವತಿಯರು ಮೊಬೈಲ್ ಬಳಕೆ ಮಾಡದಂತೆ ನೂತನ ಕಾನೂನು ಜಾರಿಗೆ ಮಾಡಿದೆ.
ಗುಜರಾತ್ನ ಬನಸ್ಕಾಂತ ಜಿಲ್ಲೆಯ ಠಾಕೂರ್ ಸಮುದಾಯದಲ್ಲಿ ಯುವತಿಯರು ಮೊಬೈಲ್ ಪೋನ್ ಬಳಕೆ ಮಾಡದಂತೆ ನಿಷೇಧವೇರಿದೆ. ಇನ್ನು ಬೇರೆ ಜಾತಿ ಯುವಕರನ್ನು ಮದುವೆಯಾದರೇ ಭಾರಿ ಮೊತ್ತದ ದಂಡವನ್ನು ಪಾಲಕರಿಗೆ ವಿಧಿಸಲಾಗುವುದು.
ಜಿಲ್ಲೆಯ 12 ಗ್ರಾಮಗಳಲ್ಲಿ ಈ ಕಾನೂನು ಜಾರಿಗೆ ಬರಲಿದೆ ಎಂದು ಸಮುದಾಯದ ನಾಯಕರು ಹಾಗೂ ಸ್ಥಳೀಯ ಶಾಸಕರು ತಿಳಿಸಿದ್ದಾರೆ. ಮದುವೆಗೂ ಮುನ್ನ ಯುವತಿಯರು ಮೊಬೈಲ್ ಬಳಸಬಾರದು. ಒಂದೆ ವೇಳೆ ಬಳಸಿದರೆ, ಅದಕ್ಕೆ ಹೆತ್ತವರೇ ಜವಾಬ್ದಾರಿಯಾಗಲಿದ್ದಾರೆ.
ಇನ್ನು ಸಮುದಾಯದ ಯುವತಿ ಹಾಗೂ ಯುವಕರು ಬೇರೆ ಜಾತಿಯವರನ್ನು ಪ್ರೀತಿಸಿ ಮದುವೆಯಾದರೆ, 1.5 ರಿಂದ 2 ಲಕ್ಷವರೆಗೆ ದಂಡ ವಿಧಿಸಲಾಗುವುದು ಎಂದು ಹೊಸ ಕಾನೂನು ಜಾರಿಯಾಗಿದೆ.
ಯುವತಿಯರು ಮೊಬೈಲ್ನಲ್ಲಿ ಅಗನತ್ಯ ವಿಡಿಯೋಗಳನ್ನು ನೋಡುವ ಮೂಲಕ ಸಮಯ ವ್ಯರ್ಥ ಮಾಡಬಾರದೆಂದು ಹಾಗೂ ಉತ್ತಮ ರೀತಿಯಲ್ಲಿ ವ್ಯಾಸಂಗ ಮಾಡುವ ದೃಷ್ಠಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕಿ ಗನಿಬೇನ್ ಠಾಕೂರ್ ತಿಳಿಸಿದ್ದಾರೆ.
Comments are closed.